ಸಮಾಜ ಬೆಳೆಯಲು ಸಮಾಜದ ಮಕ್ಕಳು ಹೆಚ್ಚು ಶಿಕ್ಷಿತರಾಗಬೇಕು- ಡಾ. ಸಾಬಣ್ಣ ತಳವಾರ

0
64

ಶಹಾಬಾದ: ಮೂಢನಂಬಿಕೆಗಳ ಹೆಸರಿನಲ್ಲಿ ಸಾಲ ಮಾಡುವ ಬದಲು, ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದಕ್ಕಾಗಿ ಸಾಲ ಮಾಡಿ.ಅದು ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ ಹೇಳಿದರು.

ಅವರು ರವಿವಾರ ತಾಲೂಕಿನ ಭಂಕೂರ ಗ್ರಾಮದಲ್ಲಿ ಕೋಲಿ ಸಮಾಜದ ವತಿಯಿಂದ ಆಯೋಜಿಸಲಾದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಆರ್ಥಿಕವಾಗಿ ಹಿಂದುಳಿದ ಕಬ್ಬಲಿಗ ಸಮಾಜ ಮೂಢನಂಬಿಕೆಗಳನ್ನು ಪರಿಪಾಲಿಸುತ್ತಿದೆ.ಇದರಿಂದ ದೇವರ ಹೆಸರಿನಲ್ಲಿ ಕುರಿ ಕಡಿಯುವುದು, ಸರಾಯಿ ಕುಡಿಯುವುದಕ್ಕೆ ಒಳಗಾಗಿ ಮತ್ತಷ್ಟು ಸಾಲಕ್ಕೆ ಸಿಲುಕಿ ಬದುಕನ್ನು ಕಷ್ಟದಾಯಕ ಮಾಡಿಕೊಳ್ಳುತ್ತಿದ್ದಾರೆ. ಸಮಾಜ ಬೆಳೆಯಬೇಕಾದರೆ ಆ ಸಮಾಜದ ಮಕ್ಕಳು ಹೆಚ್ಚು ಶಿಕ್ಷಿತರಾಗಬೇಕು.ಒಳ್ಳೆಯ ಹುದ್ದೆಗಳನ್ನು ಅಲಂಕರಿಸಬೇಕು.ಆಗ ಮಾತ್ರ ಸಮಾಜಕ್ಕೆ ತಾನಾಗಿಯೇ ಗೌರವ ಹಾಗೂ ಬೆಲೆ ಬರುತ್ತದೆ. ಆ ನಿಟ್ಟಿನಲ್ಲಿ ಮಕ್ಕಳ ಓದಿಗಾಗಿ ಹಾಗೂ ಅವರ ಭವಿಷ್ಯಕ್ಕಾಗಿ ಸಾಲ ಮಾಡಿ.ಅದು ಮುಂದೆ ಬಡ್ಡಿಯ ಸಮೇತ ಮತ್ತೆ ಮರಳಿ ಬರುತ್ತದೆ. ದುಶ್ಚಟಮತ್ತು ಜಗಳ ಇವುಗಳಿಂದ ದೂರವಿರಿ.ಓದಿ ಏನು ಮಾಡ್ತಿಯಾ ಎಂದು ತಾತ್ಸಾರ ಮನೋಭಾವನೆ ತೋರದಿರಿ. ಕೋಲಿ ಗಂಗಾಮತಸ್ಥರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿದಾಗ ಮಾತ್ರ ಮಕ್ಕಳು ಮುಂದಿನ ದಿನಗಳಲ್ಲಿ ತಲೆ ಎತ್ತುವಂತಾಗುತ್ತದೆ. ಜೊತೆಗೆ ಸಮಾಜವು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಮುಗುಳನಾಗಾವಿಯ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ಅಂಬಿಗರ ಚೌಡಯ್ಯನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದವರು. ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.ಮಕ್ಕಳನ್ನು ಚೆನ್ನಾಗಿ ಶಿಕ್ಷಣ ನೀಡಿ.ಶಿಕ್ಷಣಕ್ಕೆ ಹಾಕಿದ ಬಂಡವಾಳ, ಮರಳಿ ಬಡ್ಡಿಯ ಸಮೇತ ನೀಡುತ್ತದೆ.ಎದೆಗೆ ಹಾಕಿದ ಅಕ್ಷರ, ಭೂಮಿಗೆ ಹಾಕಿದ ಬೀಜ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ತಿಳಿದುಕೊಳ್ಳಬೇಕು. ಅಂಬಿಗರ ಚೌಡಯ್ಯನವರ ವಚನ ಓದಿ, ಮೂಢನಂಬಿಕೆಗಳನ್ನು ಬಿಟ್ಟು ಸುಂದರ ಬದುಕನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.

ಸಮಾರಂಭದಲ್ಲಿ ಅಖಿಲ ಭಾರತ ಕೋಲಿ ಸಮಾಜದ ಅಧ್ಯಕ್ಷರಾದ ತಿಪ್ಪಣ್ಣ ರೆಡ್ಡಿ, ಯಾದಗಿರಿ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಮಾತನಾಡಿದರು. ಕೋಲಿ ಸಮಾಜದ ಅಧ್ಯಕ್ಷ ಈರಣ್ಣ ಗುಡೂರ್ ಅಧ್ಯಕ್ಷತೆ ವಹಿಸಿದ್ದರು.

ಅಂಬಿಗರ ಚೌಡಯ್ಯ ನವರ ಭಾವಚಿತ್ರದ ಭವ್ಯವಾದ ಮೆರವಣಿಗೆಯನ್ನು ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ರಜನಿಕಾಂತ ಕಂಬಾನೂರ ಚಾಲನೆ ನೀಡಿದರು. ಹೊನ್ನಾಳದ ವಾಸುದೇವ ಮಹಾಶಿವಯೋಗಿಗಳು, ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಭೀಮಣ್ಣ ಸಾಲಿ, ಉದ್ದಿಮೆದಾರ ಶಶಿಕಾಂತ ಪಾಟೀಲ, ಕದಸಂಸ ಜಿಲ್ಲಾ ಸಂಚಾಲಕರಾದ ಸುರೇಶ ಮೆಂಗನ, ಚೌಡಯ್ಯ ನಿಗಮದ ಸದಸ್ಯ ನಿಂಗಪ್ಪ ಹುಳಗೋಳ, ಭೀಮಯ್ಯ ಗುತ್ತೆದಾರ, ಮಾಜಿ ಉಪಾಧ್ಯಕ್ಷ ತಾ. ಪಂ ವಿಜಯ ಲಕ್ಷ್ಮಿ ಚವ್ಹಾಣ, ಭೀಮಸಿಂಗ ಪವಾರ, ಲಲಿತಾ ಬಾಯಿ ಚಿತ್ತಾಪುರ ವೇದಿಕೆ ಮೇಲೆ ಇದ್ದರು.

ಶ್ರೀಮತಿ ಸರಸ್ವತಿ ಬೆನಕನಳ್ಳಿ ಪ್ರಾರ್ಥನಾ ಗೀತೆ ಹಾಡಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಶಿರಗೊಂಡ ನಿರೂಪಿಸಿದರು. ನಿಂಗಣ್ಣ ನಂದಿಹಳ್ಳಿ ವಂದಿಸಿದರು.

ಪ್ರಮುಖರಾದ ಶಿವಶರಣಪ್ಪ ಕೋಬಾಳ, ಲಕ್ಷ್ಮೀಕಾಂತ ಕಂದಗೋಳ, ಈರಣ್ಣ ಹಳ್ಳಿ ಕಾರ್ಗಿಲ, ರಜನಿಕಾಂತ ಕಂಬಾನೂರ, ಶರಣಬಸಪ್ಪ ಧನ್ನಾ, ಶಿವಯೋಗಿ ಬನ್ನೇಕರ, ಮುನ್ನಾ ಪಟೇಲ, ಚಂದ್ರಕಾಂತ ಚಿತ್ತಾಪುರ, ಸುನೀಲ ಗುಡೂರ, ಬಸವರಾಜ ಜಾವಳ, ಭೀಮರಾವ ಸಾವಿರ, ಪವನ ಶಿರಗೊಂಡ, ಸುನಿಲ ಚೌಹಾಣ, ಭೀಮರಾವ ಶಿರಗೊಂಡ, ಶಿವಕುಮಾರ ಮುತ್ತಿಗಿ ಉಪಸ್ಥಿತಿರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here