ಕಲಬುರಗಿ ಮೇಯರ್ ಉಪ ಮೇಯರ್ ಬಿಜೆಪಿ ತೆಕ್ಕೆಗೆ

0
248

ಕಲಬುರಗಿ: ಭಾರಿ ಕುತೂಹಲ ಕೆರಳಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಕೊನೆಗೂ ಯಶಸ್ವಿಯಾಗಿದೆ. ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಕಿಂಗ್ ಮೇಕರ್ ಆಗಿದ್ದ ಜೆಡಿಎಸ್ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿತ್ತು. ಆದರೆ ಕೊನೆ ಗಳಿಗೆಯಲ್ಲಿ ಜೆಡಿಎಸ್ ಸದಸ್ಯ (ವಾರ್ಡ್ ನಂ. 42) ಅಲಿಂ ಪಟೇಲ್ ಮತದಾನಕ್ಕೆ ಗೂರು ಹಾಜರಾದ ಹಿನ್ನೆಲೆಯಲ್ಲಿ ಮೇಯರ್ ಆಗಿ ವಿಶಾಲ ದರ್ಗಿ ಅಧ್ಯಕ್ಷ, ಉಪಾಧ್ಯಕ್ಷರಾಗಿ ಶಿವಾನಂದ ಪಿಸ್ತಿ ಆಯ್ಕೆಯಾಗಿದ್ದಾರೆ.

ಕಳೆದ ಒಂದು ವರ್ಷದಿಂದ ನಡೆದಿದ್ದ ಜಿದ್ದಾ ಜಿದ್ದಿಗೆ ಕೊನೆಗೂ ತೆರೆ ಬಿದ್ದಂತಾಗಿದೆ. ಇಂದಿರಾ ಸ್ಮಾರಕ ಭವನದಲ್ಲಿ ಪ್ರಾದೇಶಿಕ ಆಯುಕ್ತರೂ ಹಾಘೂ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ನೇತೃತ್ವದಲ್ಲಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಗುರುವಾರ ಚುಮಾವಣೆ ನಡೆಯಿತು. ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿತ್ತು.

Contact Your\'s Advertisement; 9902492681

ಕಾಂಗ್ರೆಸ್‍ನಿಂದ ಮೇಯರ್ ಸ್ಥಾನಕ್ಕೆ ಪ್ರಕಾಶ ಕಪನೂರ, ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‍ನಿಂದ ವಿಜಯಲಕ್ಷ್ಮೀ ಅವರು ನಾಮಪತ್ರ ಸಲ್ಲಿಸಿದ್ದರು. ಒಟ್ಟು 55 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 22 ಸದಸ್ಯರು, 7 ಎಂಎಲ್‍ಸಿ, 2 ಎಂಎಲ್‍ಎ ಮತ್ತು 2 ಎಂಪಿ ಸೇರಿ 33 ಸದಸ್ಯರು, ಕಾಂಗ್ರೆಸ್‍ನ 27 ಸದಸ್ಯರು, 1 ಎಂಎಲ್‍ಎ, 1 ಎಂಎಲ್‍ಸಿ ಮತ್ತು 3 ಜೆಡಿಎಸ್ ಸದಸ್ಯರು 32 ಜನ ಮತದಾನಕ್ಕೆ ಹಜರಾಗಿದ್ದರು.

ಕಾಂಗ್ರೆಸ್‍ನ ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನಖರ್ಗೆ ಅವರು ಗೈರು ಹಾಜರಾಗಿದ್ದರು. ಒಟ್ಟು 33 ಸದಸ್ಯರನ್ನು ಹೊಂದುವ ಮೂಲಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಪ್ರಯುಕ್ತ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಯಿತು.

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಬಿಜೆಪಿಯ ಶಕ್ತಿ ಮತ್ತಷ್ಟು ಹೆಚ್ಚಿಸಿದಂತಾಗಿದೆ. ಜನತೆ ಬದಲಾವಣೆ ಬಯಸಿದ್ದಾರೆ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ಕಾಂಗ್ರೆಸ್ ಸದಸ್ಯರು ಕಲಬುರಗಿಯ ಅಭಿವೃದ್ಧಿಗೆ ಬಿಜೆಪಿ ಸದಸ್ಯರ ಜೊತೆ ಕೈ ಜೋಡಿಸಬೇಕು. -ದತ್ತಾತ್ರೇಯ ಪಾಟೀಲ ರೇವೂರ, ಶಾಸಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here