ಕಾಡಾ ಕಚೇರಿ ಸ್ಥಳಾಂತರ ವಿರೋಧಿಸಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ

0
13

ಸುರಪುರ: ನಗರದ ಹಸನಾಪುರ ಕ್ಯಾಂಪ್‍ಲ್ಲಿನ ಕೆಬಿಜೆಎನ್‍ಎಲ್ ಹೊರಗಾಲುವೆ ಕಾಡಾ ಸಂಖ್ಯೆ-2ರ ಕಚೇರಿಯನ್ನು ಬಾಗಲಕೋಟೆಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಹಸನಾಪುರ ಕಾಡಾ ಕಚೇರಿ ಸ್ಥಳಾಂತರ ಮಾಡುವುದರಿಂದ ಸುರಪುರ,ಶಹಾಪುರ,ದೇವದುರ್ಗ,ಯಾದಗಿರಿ,ವಡಗೇರಿ ತಾಲೂಕಿನ ರೈತರ ಲಕ್ಷಾಂತರ ಎಕರೆ ಜಮೀನುಗಳ ನೀರಾವರಿಗೆ ತೊಂದರೆಯಾಗಲಿದೆ.ಸರಕಾರಕ್ಕೆ ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಮಾಡಿದರು,ಈ ವರೆಗೆ ಒಂದೂ ಸ್ಪಷ್ಟನೆ ನೀಡುತ್ತಿಲ್ಲ,ಸರಕಾರ ರೈತರ ಜೊತೆಗೆ ಚೆಲ್ಲಾಟವಾಡದೆ ಕೂಡಲೇ ನೀರಾವರಿ ಸಚಿವರು ಸ್ಪಷ್ಟನೆ ನೀಡಬೇಕು,ಇಲ್ಲವಾದಲ್ಲಿ ಇಡೀ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ಶಾಸಕರು ಬರೀ ಹೇಳಿಕೆಯನ್ನು ನೀಡಿದರೆ ಸಾಲದು ರೈತರಿಗಾಗಿ ಕೂಡಲೇ ಸರಕಾರದ ಮೇಲೆ ಒತ್ತಡ ಹಾಕಿ ಮುಖ್ಯಮಂತ್ರಿಗಳಿಂದಲಾದರು ಅಥವಾ ನೀರಾವರಿ ಸಚಿವರಿಂದ ಸ್ಪಷ್ಟನೆಯನ್ನು ಹೊರಡಿಸಬೇಕು,ಇಲ್ಲವಾದಲ್ಲಿ ತಾವುಕೂಡ ರೈತರಿಗಾಗಿ ಪ್ರತಿಭಟನೆಗೆ ನಮ್ಮೊಂದಿಗೆ ಭಾಗವಹಿಸಲಿ ಎಂದು ಒತ್ತಾಯಿಸಿದರು.

ನಂತರ ಭೀಮರಾಯನಗುಡಿ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರಿಗೆ ಸಲ್ಲಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾರರು ಮಾತನಾಡಿ,ತಮ್ಮ ಮನವಿಯನ್ನು ಸಂಬಂಧಿಸಿರುವ ಅಧಿಕಾರಿಗಳಿಗೆ ಸಂಪರ್ಕಿಸಿ ನಿಮ್ಮ ಬೇಡಿಕೆಯನ್ನು ಗಮನಕ್ಕೆ ತರಲಾಗುವುದು,ಜೊತೆಗೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಕಳುಹಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ರೈತ ಸಂಘದ ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ,ಭೀಮರಾಯ ಸಿಂದಗೇರಿ,ಮಾಳಪ್ಪ ಕಿರದಳ್ಳಿ,ನಿಂಗಣ್ಣ ಗೋನಾಲ,ರಾಹುಲ ಹುಲಿಮನಿ,ನಾಗರಾಜ ಗೋಗಿಕೇರ,ವೈಜನಾಥ ಹೊಸ್ಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here