ಸುರಪುರ: ನಗರದ ಪೊಲೀಸ್ ಕಾಲೋನಿಯಲ್ಲಿ ನಟ ಡಾ. ಪುನೀತ್ ರಾಜಕುಮಾರ್ ಸ್ಮರ್ಣಾರ್ಥವಾಗಿ ಕುಡಿಯುವ ನೀರಿನ ಅರವಟಿಗೆಯನ್ನು ಆರಂಭಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಿಎಸ್‍ಐ ಕೃಷ್ಣಾ ಸುಬೇದಾರ್ ಅರವಟಿಗೆಗೆ ಚಾಲನೆ ನೀಡಿ ಮಾತನಾಡಿ,ಈ ನಾಡು ಕಂಡ ಹೆಮ್ಮೆಯ ನಟ ಹಾಗೂ ಸಮಾಜ ಸೇವಕ ಡಾ:ಪುನೀತ್ ರಾಜಕುಮಾರ್ ಹೆಸರಲ್ಲಿ ಕುಡಿಯುವ ನೀರಿನ ಅರವಟಿಗೆ ಆರಂಭಿಸಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದರು.ಯಾಕೆಂದರೆ ಬೇಸಿಗೆ ಸಂದರ್ಭದಲ್ಲಿ ಜನರು ಕುಡಿಯುವ ನೀರು ತುಂಬಾ ಅವಶ್ಯಕವಾಗಿದೆ.ಇದನ್ನು ಅರಿತು ಪ್ರತಿವರ್ಷ ಅರವಟಿಗೆಯನ್ನು ಆರಂಭಿಸುವ ಮೂಲಕ ಪೊಲೀಸ್ ಕಾಲೋನಿಯ ಜನ ಅದರಲ್ಲೂ ವಿಶೇಷವಾಗಿ ದಯಾನಂದ ಜಮಾದಾರ್ ಕಾಳಜಿ ವಹಿಸುತ್ತಿರುವುದು ಹೆಮ್ಮೆಯ ಕಾರ್ಯವಾಗಿದೆ ಎಂದರು.
ಅಲ್ಲದೆ ಪ್ರತಿಯೊಬ್ಬರು ಹೀಗೆ ಪರೋಪಕಾರಕ್ಕೆ ಮುಂದಾಗಬೇಕು ಮತ್ತು ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ಬದಲು ಪ್ರತಿವರ್ಷ ಒಂದು ಸಸಿಯನ್ನು ನೆಟ್ಟು ಬೆಳೆಸುವುದನ್ನು ರೂಢಿಸಿಕೊಂಡರೆ ಅದಕ್ಕಿಂತ ದೊಡ್ಡ ಆಚರಣೆ ಯಾವುದು ಇರುವುದಿಲ್ಲ ಈನಿಟ್ಟಿನಲ್ಲಿ ಎಲ್ಲರು ಚಿಂತನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಪಿಎಸ್‍ಐ ನಬಿಲಾಲ ಸೇರಿದಂತೆ ಅನೇಕ ಜನ ಪೊಲೀಸ್ ಪೇದೆಗಳು ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳು ಭಾಗವಹಿಸಿದ್ದು,ಪೊಲೀಸ್ ಪೇದೆ ದಯಾನಂದ ಜಮಾದಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.