ಕಲಬುರಗಿ: ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮತ್ತು ಕಾರ್ಯಾಚರಣೆ ಸಮಿತಿಯ ರಾಜ್ಯ ಘಟಕ ಅಸ್ತಿತ್ವಕ್ಕೆ ಭಾರತದ ಕೇಂದ್ರ ಸರ್ಕಾರದ ನೀತಿ ಆಯೋಗದ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸುವ ನ್ಯಾಷನಲ್ ಆಂಟಿ ಕರಪ್ಶನ್ ಆಂಡ್ ಆಪರೇಷನ್ ಕಮೀಟಿ ಆಫ್ ಇಂಡಿಯಾದ ರಾಜ್ಯ ಘಟಕವು ಇಂದು ಅಸ್ತಿತ್ವಕ್ಕೆ ಬಂದಿದ್ದು, ಸದರಿ ಸಂಸ್ಥೆಯ 11 ಸದಸ್ಯರುಗಳ ತಂಡದ ಮೊದಲನೆಯ ಸಭೆ ಯು ರಾಜ್ಯ ಉಸ್ತುವಾರಿ ಯಾದ ಡಾ. ಏ ಎಸ್ ಭದ್ರಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಈ ಸಂಸ್ಥೆಯು ರಾಜ್ಯದಲ್ಲಿ ಭ್ರಷ್ಟಾಚಾರ ಮತ್ತು ಅತ್ಯಾಚಾರದಂತಹ ಕುಕ್ರತ್ಯಗಳನ್ನು ಅಂತ್ಯಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ಸದಸ್ಯರುಗಳಿಗೆ ಕಿವಿಮಾತು ಹೇಳಿದರು.
ಸದಸ್ಯರು ಕೇಳುವ ಸಮಸ್ಯೆಗಳಿಗೆ ಪರಿಹಾರ ಪೂರಕವಾದ ಉತ್ತರಗಳನ್ನು ನೀಡಿ ಸಾಮಾಜಿಕ ಪಿಡುಗು ಆದ ಭ್ರಷ್ಟಾಚಾರ ನಿರ್ಮೂಲನೆಗಾಗಿ ಎಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.
ಸಭೆಯಲ್ಲಿ ಸದಸ್ಯ ವಿನೋದ್ ಪಾಟೀಲ, ಶಾಮರಾವ್ ಪಾಟೀಲ, ರಾಜು ಜೈನ, ಸೂರ್ಯ ಕುಮಾರ್, ಮುತ್ತಣ್ಣ ಎಸ್ ನಡಗೇರಿ, ಸಿದ್ದರಾಮ ಹೆಬ್ಬಾಳ್, ಪ್ರಶಾಂತ್ ತಡಕಲ್ ಮತ್ತು ಜ್ಞಾನ ಮಿತ್ರ ಇವರೆಲ್ಲರೂ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಸುಧಾಕರ ರಾವ್ ಸಿ ಎ ರವರು ಭಾಗವಹಿಸಿದ್ದರು.
ಕಾರ್ಯದರ್ಶಿಗಳಾದ ಪ್ರಶಾಂತ್ ತಡಕಲ್ ರವರು ಸ್ವಾಗತಿಸಿದರು ಮತ್ತು ಶಾಮರಾವ್ ಪಾಟೀಲರು ವಂದನಾರ್ಪಣೆ ಮಾಡಿದರು.