ಸದೃಢ ಅರ್ಥ ವ್ಯವಸ್ಥೆಗೆ ವಚನ ಚಳುವಳಿ ಬುನಾದಿ: ಡಾ. ಕರಿಕಲ್

0
13

ಕಮಲಾಪುರ; ಕಾಯಕ, ದಾಸೋಹ ತತ್ವ ಸಮಾಜದಲ್ಲಿ ಸಂಪತ್ತಿನ ಸಮಾನ ಹಂಚಿಕೆಗೆ ರಹದಾರಿಯಾಗಿದೆ. ಹೀಗಾಗಿ ರಾಷ್ಟ್ರದ ಸದೃಢ ಅರ್ಥ ವ್ಯವಸ್ಥೆಗೆ ವಚನ ಚಳುವಳಿ ಬುನಾದಿ ಎಂದು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ. ವಿಜಯಕುಮಾರಿ ಕರಿಕಲ್ ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕಮಲಾಪುರ ತಾಲೂಕ ಘಟಕ ಹಾಗೂ ವಿಶ್ವನಾಥರೆಡ್ಡಿ ಮುದ್ನಾಳ್ ಪದವಿ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ “ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ”ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಹಾಗೂ “ಶರಣಾರ್ಥಸಂಪದ” ಸಂಶೋಧನಾ ಪ್ರಬಂಧ ಸಂಕಲನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

Contact Your\'s Advertisement; 9902492681

12ನೇ ಶತಮಾನದಲ್ಲಿ ಜನಪರ, ಜೀವಪರ, ಸಾಮಾಜಿಕ ಕಾಳಜಿಯೊಂದಿಗೆ ಹೊರಹೊಮ್ಮಿದ  ವಚನ ಚಳುವಳಿ, ಸಾಹಿತ್ಯ ಕನ್ನಡದಲ್ಲಿ ಪ್ರಖರ ಚಿಂತನೆಗಳಿಂದ ಗಮನ ಸೆಳೆದಿದೆ. ಮಾನವೀಯ ಸಂವೇದನೆ, ನೈತಿಕ ಕಾಳಜಿ ಸ್ಥಾಪನೆಗಾಗಿ ಬದುಕುವ ಹೋರಾಟ ಕಲ್ಯಾಣನಾಡಿನದ್ಯoತ  ಮನೆ-ಮನ ತಟ್ಟಿತು. ಸಮಾಜ ವಿರೋಧಿ ಜಡ ವ್ಯವಸ್ಥೆಯ ಬದಲಾವಣೆಗಾಗಿ ಹೋರಾಟ ತೀವ್ರ ಗೊಂಡಿತ್ತು.

ಈ ಘಟ್ಟದ ಅಂತರ್ಯದಲ್ಲಿ ಕಾಯಕ ದಾಸೋಹ ಎಷ್ಟು ಮಹತ್ವ ಪಡೆದವೋ ಅಂತೆಯೇ ಶರಣರಲ್ಲಿ ಆರ್ಥಿಕ ನೀತಿ, ಆಧುನಿಕ ಆರ್ಥಿಕ ನೀತಿಗಳಿಂದ ಶ್ರೇಷ್ಠವಾದವುಗಳು. ಉತ್ಪಾದನಾ, ಕ್ರೂಡೀಕರಣ ತೆರಿಗೆ, ಕೃಷಿ, ಆಯಗಾರಿಕೆ, ಸ್ವಯಂ ಉದ್ಯೋಗ, ವ್ಯವಹಾರ ಹೀಗೆ ಹತ್ತು ಹಲವು ಆರ್ಥಿಕ ನೀತಿಗಳನ್ನು ರೂಡಿಸಿಕೊಂಡ ವಚನ ಚಳುವಳಿಯು 900 ವರ್ಷಗಳ ನಂತರ ಮತ್ತೊಮ್ಮೆ ಸಿಂಹಾಲೋಕನ ಕ್ರಮದಿಂದ ಅವಲೋಕಿಸುವ, ಚರ್ಚೆಗೊಳಪಡಿಸುವ  ಮಹತ್ವಾಕಾಂಕ್ಷೆಯಿಂದಾಗಿ “ಶರಣ ಸಾಹಿತ್ಯದಲ್ಲಿ ಅರ್ಥ ವ್ಯವಸ್ಥೆ” ಅಡಿಯಲ್ಲಿ ವಿಚಾರಿಸಂಕಿರಣದ ಪುನರಾವಲೋಕನ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯವಾದ ಕಾರ್ಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಪ್ರಾಧ್ಯಾಪಕ ಡಾ. ರೋಲೆಕರ್ ನಾರಾಯಣ ಅವರು ಮಾತನಾಡಿ  ಶತಮಾನಗಳಿಂದ ಮನುಷ್ಯನಿಗೆ ಕಾಡಿದ ಪ್ರಶ್ನೆಗಳಿಗೂ ವಚನಗಳು ಪ್ರತ್ಯುತ್ತರ ನೀಡಿವೆ. ಪರಿಹಾರೋಪಾಯಗಳನ್ನು ಸೂಚಿಸುವೆ. ಕಾಲಾನುಕಾಲದಿಂದ ಪ್ರಭುತ್ವ ಹೊಂದಿದ ಒತ್ತಡಗಳಿಗೆ ನೀಡಿದ ವೇದನೆಗಳಿಗೆ ಸಂವೇದನೆಗಳಾಗಿವೆ. 12ನೇ ಶತಮಾನದಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ರೂಪಿಸಿದ ಹಿನ್ನೆಲೆಯಲ್ಲಿ ಆಧುನಿಕ ಅರ್ಥ ವ್ಯವಸ್ಥೆಗೂ ಕೂಡ ಒರೆ ಹಚ್ಚಬಲ್ಲವೂ ಎಂಬ ಸದಾಶಯವೇ ಈ ವಿಚಾರ ಸಂಕೀರ್ಣದ ದೇಯೋ ದ್ದೇಶವಾಗಿದೆ  ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ಮಾತನಾಡುತ್ತಾ ಪ್ರಸ್ತುತ ಪ್ರಕ್ಷುಬದ್ಧ ಸ್ಥಿತಿಯಲ್ಲಿ ವಚನಗಳು ನಮಗೆ ಅರ್ಥ ಸಮಾನತೆಗೆ ದಾರಿದೀಪವಾಗಬಲ್ಲವೂ ಎಂಬುದರ ಅವಲೋಕನವು ಹಿಂದೆಂದಿಗಿಂತಲೂ ಇಂದು ತುಂಬಾ ಅಗತ್ಯವಿದೆ. ವೈಚಾರಿಕತೆಯಿಂದ ಕೂಡಿದ ಅಭಿವೃದ್ದಿ ಪರವಾಗಿ ಮನುಷ್ಯರಿ ರುವ ಸಮಾಜವನ್ನು ವಚನ ಚಳುವಳಿ ಬಯಸುತ್ತದೆ ಎಂದರು.

ಡಾ. ಅಮೃತಾ ಕಟಕೆ, ಡಾ.ತೀರ್ಥಕುಮಾರ ಬೆಳಕೋಟಾ, ಡಾ. ಎ. ಎಸ್. ಪಾಟೀಲ, ಡಾ. ಸುರೇಂದ್ರಕುಮಾರ ಕೇರಮಗಿ, ಬಸವರಾಜ ಮೋರಬದ, ಡಾ. ಪ್ರೇಮಾ ಅಪಚಂದ ಅವರಿಗೆ ಚಿನ್ಮಯ ಜ್ಞಾನಿ ಪ್ರಶಸ್ತಿ ಪ್ರದಾನ  ಮಾಡಲಾಯಿತು.

ಡಾ. ಬಸವರಾಜ ಮಠಪತಿ, ಡಾ. ಶರಣಬಸಪ್ಪ ವಡ್ಡನಕೇರಿ, ಡಾ.ನೀಲಮ್ಮ ಪಾಟೀಲ್, ಡಾ. ಚಿದಾನಂದ ಚಿಕ್ಕಮಠ, ಪ್ರೊ.ಕಾಶಿನಾಥ ಪಾಟೀಲ ಇದ್ದರು. – ಡಾ. ಪ್ರೇಮಾ ಅಪಚಂದ, ರಾಮಲಿಂಗ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here