ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಕುಮಾರಚವ್ಹಾಣ ಆಕ್ರೋಶ

0
14

ಶಹಾಬಾದ: ಬಿಜೆಪಿ ಸರಕಾರ ಪರಿಶಿಷ್ಟ ಜಾತಿಯ ಎಡ ಮತ್ತು ಬಲ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿ ಇತರ ಪರಿಶಿಷ್ಟ ಜಾತಿಯ ಲಂಬಾಣಿ ಸಮಾಜದವರಿಗೆ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವ ಕ್ರಮಕ್ಕೆ ಅಖಿಲ ಭಾರತ ಬಂಜಾರಾ ಸೇವಾ ಸಂಘದ ತಾಲೂಕಾಧ್ಯಕ್ಷ ಕುಮಾರ ಚವ್ಹಾಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿ ಸರ್ಕಾರ ಪರಿಶಿಷ್ಟ ಸಮುದಾಯದ ಶೇ.33.4ರಷ್ಟಿರುವ ಒಂದನೇ ಗುಂಪಿಗೆ (ಎಡಗೈ ಪ.ಜಾ) ಶೇ.6, ಶೇ.32ರಷ್ಟಿರುವ (ಬಲಗೈ ಪ.ಜಾ) ಎರಡನೇ ಗುಂಪಿಗೆ ಶೇ.5.5 , ಶೇ.23.64ರಷ್ಟಿರುವ (ಸ್ಪರ್ಶ ಪರಿಶಿಷ್ಟ ಜಾತಿ) ಮೂರನೇ ಗುಂಪಿಗೆ ಶೇ.4.5 ಮತ್ತು ಇತರ ಪರಿಶಿಷ್ಟ ಜಾತಿಯವರಿಗೆ ಶೇ.1ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡುವಂತೆ ಬಿಜೆಪಿ ಸರ್ಕಾರ ಶಿಫಾರಸು ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈಗಾಗಲೇ ಜನೇವರಿ 10 ರಂದು ಸದಾಶಿವ ಆಯೋಜ ಜಾರಿಗೆ ತರದಂತೆ ಬೃಹತ್ ಹೋರಾಟ ನಡೆಸಿರುವ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಜಂಟಿಗೋಷ್ಠಿ ಮಾಡಿ ಅವರು ಸದಾಶಿವ ಆಯೋಗ ಜಾರಿಗೆ ತರುವುದಿಲ್ಲ ಎಂದು ತಿಳಿಸಿದ್ದರು.ಆದರೆ ಮೀಸಲಾತಿಯನ್ನು ಹಂಚಿಕೆ ತಾರತಮ್ಯ ಮಾಡಿರುವುದು ಅಸಂವಿಧಾನಕವಾದುದು. ಒಳ ಮೀಸಲಾತಿಯನ್ನು ನೀಡುವ ನಿರ್ಧಾರವು ಚುನಾವಣಾ ದಿನಾಂಕದ ಮೊದಲು ತೆಗೆದುಕೊಂಡ ರಾಜಕೀಯ ಗಿಮಿಕ್ ಹೊರತು ಬೇರೇನೂ ಅಲ್ಲ.

ಮೀಸಲಾತಿ ಸೌಲಭ್ಯದಿಂದ ವಂಚಿತರಾಗಲಿರುವ ಲಂಬಾಣಿ ಸಮುದಾಯ ಈ ನಿರ್ಧಾರವನ್ನು ಸಹಿಸುವುದಿಲ್ಲ. ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಮತ್ತು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ.ಅಲ್ಲದೇ ಬಂಜಾರಾ ಸಮಾಜದ ಸಂಸದ ಡಾ.ಉಮೇಶ ಜಾಧವ,ಶಾಸಕ ಅವಿನಾಶ ಜಾಧವ, ಸಚಿವ ಪ್ರಭು ಚವ್ಹಾಣ ಸೇರಿದಂತೆ ಅನೇಕರು ಇದ್ದರೂ ಈ ಬಗ್ಗೆ ಮಾತನಾಡುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಈ ಮುಖಂಡರನ್ನು ಹಾಗೂ ಬಿಜೆಪಿ ಪಕ್ಷಕ್ಕೆ ಸಮಾಜದ ಜನÀ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here