ವಿಧಾನಸಭಾ ಚುನಾವಣೆ: ಅಕ್ರಮ ಸರಾಯಿ-ಮದ್ಯ ಮಾರಾಟ ತಡೆಗಟ್ಟಲು ನಿಯಂತ್ರಣಾ ಕೊಠಡಿ

0
27

ಕಲಬುರಗಿ; ಕರ್ನಾಟಕ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ-2023 ಪ್ರಯುಕ್ತ ಕಲಬುರಗಿ ಜಿಲ್ಲೆಯಾದ್ಯಂತ ಚುನಾವಣೆಯು ಶಾಂತಿಯುತವಾಗಿ, ಮುಕ್ತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಸರಾಯಿ, ಮದ್ಯ ಮತ್ತು ಸೇಂದಿಗಳಂತಹ ಅಬಕಾರಿ ವಸ್ತುಗಳು ಸಂಗ್ರಹಣೆ, ಸಾಗಾಟ ಮತ್ತು ಮಾರಾಟ ಚಟುವಟಿಕೆಗಳನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲು ಈ ಕೆಳಕಂಡಂತೆ ಕಂಟ್ರೊಲ್ ರೂಮ್‍ನ್ನು ಸ್ಥಾಪಿಸಲಾಗಿದೆ ಎಂದು ಕಲಬುರಗಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರು ಯಾವುದೇ ದೂರುಗಳು ಅಥವಾ ಅಕ್ರಮಗಳ ಬಗ್ಗೆ ಮಾಹಿತಿ ಇದ್ದಲ್ಲಿ ಈ ಕೆಳಕಂಡ ದೂರವಾಣಿ/ ಸಂಚಾರಿ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. ತಾತ್ಕಾಲಿಕ ನಿಯಂತ್ರಣಾ ಕೊಠಡಿಗಳ ವಿವರ ಇಂತಿದೆ. ಕಲಬುರಗಿ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿ ಕಂಟ್ರೋಲ್ ರೂಮ್ ನಂಬರ್ 08472-278682 ಹಾಗೂ ಟೋಲ್ ಫ್ರಿ ನಂಬರ್ 18003451500 ಹಾಗೂ ಮೊಬೈಲ್ ಸಂಖ್ಯೆ 9686512300.

Contact Your\'s Advertisement; 9902492681

ಕಲಬುರಗಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿ ಹಾಗೂ ದೂರವಾಣಿ ಸಂಖ್ಯೆ 08472-278684, ಮೊಬೈಲ್ ಸಂಖ್ಯೆ 9449597146, 9449597147. ಚಿತ್ತಾಪೂರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರ ಕಚೇರಿ ಹಾಗೂ ದೂರವಾಣಿ ಸಂಖ್ಯೆ 08474-236811, ಮೊಬೈಲ್ ಸಂಖ್ಯೆ 9449597148, 9449597149.

ಆಳಂದ ಅಬಕಾರಿ ನಿರೀಕ್ಷಕರ ಕಛೇರಿ ವಲಯ ಹಾಗೂ ದೂರವಾಣಿ ಸಂಖ್ಯೆ 08477-203127 ಹಾಗೂ ಮೊಬೈಲ್ ಸಂಖ್ಯೆ 9591485361. ಜೇವರ್ಗಿ ಅಬಕಾರಿ ನಿರೀಕ್ಷಕರ ಕಛೇರಿ ವಲಯ ಹಾಗೂ ದೂರವಾಣಿ ಸಂಖ್ಯೆ 08442-235215 ಹಾಗೂ ಮೊಬೈಲ್ ಸಂಖ್ಯೆ 8095955545.

ಚಿತ್ತಾಪೂರ ಅಬಕಾರಿ ನಿರೀಕ್ಷಕರ ಕಛೇರಿ ವಲಯ ಹಾಗೂ ದೂರವಾಣಿ ಸಂಖ್ಯೆ 08474-236770 ಹಾಗೂ ಮೊಬೈಲ್ ಸಂಖ್ಯೆ 9945369528. ಸೇಡಂ ಅಬಕಾರಿ ನಿರೀಕ್ಷಕರ ಕಛೇರಿ ವಲಯ ಹಾಗೂ ದೂರವಾಣಿ ಸಂಖ್ಯೆ 08441-277141 ಹಾಗೂ ಮೊಬೈಲ್ ಸಂಖ್ಯೆ 9483434722. ಚಿಂಚೋಳಿ ಅಬಕಾರಿ ನಿರೀಕ್ಷಕರ ಕಛೇರಿ ವಲಯ ಹಾಗೂ ದೂರವಾಣಿ ಸಂಖ್ಯೆ 08475-273490 ಹಾಗೂ ಮೊಬೈಲ್ ಸಂಖ್ಯೆ 9743791924.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here