ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿ ಬಿಜೆಪಿ ಪ್ರಣಾಳಿಕೆಯಲ್ಲಿ ಸೇರಿಸಲು ಒತ್ತಾಯ

0
36

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ರಚನಾತ್ಮಕ ಪ್ರಗತಿಗೆ ಮತ್ತು 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಬರುವ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಕಲ್ಯಾಣದ ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳು ಸೇರಿಸಲು ಬಿ.ಜೆ.ಪಿ. ಕಲಬುರಗಿ ಪ್ರಣಾಳಿಕೆಯ ಸಮಿತಿಯ ಉಸ್ತುವಾರಿಯಾದ ಶಾಸಕರಾದ ಶಶೀಲ ಜಿ. ನಮೋಶಿಯವರಿಗೆ ಸಮಿತಿಯ ನಿಯೋಗ ಭೇಟಿಯಾಗಿ ಒತ್ತಾಯಿಸಿತು.

ಕಲ್ಯಾಣದ ಕಲ್ಯಾಣಕ್ಕೆ ಸಮಿತಿಯ ನಡೆ ರಾಜಕೀಯ ಪಕ್ಷಗಳ ಕಡೆ ಅಭಿಯಾನದಂತೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಸಮಿತಿಯ ನಿಯೋಗ ಭಾರತೀಯ ಜನತಾ ಪಕ್ಷ, ಕಲಬುರಗಿ ಘಟಕದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯರಾದ ಶಶೀಲ ಜಿ.ನಮೋಶಿಯವರಿಗೆ, ಅವರ ನಿವಾಸದಲ್ಲಿ ಭೇಟಿಯಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ ಸೇರಿದಂತೆ, ರೈಲ್ವೆ ಕ್ಷೇತ್ರ ಹಾಗೂ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಂiÀi, ಕಲಬುರಗಿ ಮಹಾನಗರವನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು, ನವ ನಗರ ನಿರ್ಮಾಣ ಮಾಡುವದು, ಕಲಬುರಗಿಯಲ್ಲಿ ಪ್ರತಿ ವರ್ಷ ಮಂತ್ರಿ ಮಂಡಳ ಸಭೆ ನಡೆಸುವುದು ಸೇರಿದಂತೆ ಒಟ್ಟು 32 ಅಂಶಗಳ ಸಮಿತಿ ರಚಿಸಿದ ಪ್ರಣಾಳಿಕೆಯನ್ನು ಬಿ.ಜೆ.ಪಿ.ಪಕ್ಷದ ಘೋಷಣಾ ಪತ್ರದಲ್ಲಿ ಸೇರಿಸಲು ಆಗ್ರಹಿಸಿ ವಿವರವಾಗಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಲಿಂಗರಾಜ ಸಿರಗಾಪೂರ, ಜ್ಞಾನಮಿತ್ರ ಸ್ಯಾಮ್ಯೂವೆಲ್, ಬಾಬುರಾವ ಗಂವ್ಹಾರ, ಶಾಂತಪ್ಪ ಕಾರಭಾಸಗಿ, ಸಾಬೀರ ಅಲಿ, ಮಲ್ಲಿನಾಥ ಸಂಗಶೆಟ್ಟಿ, ಮುತ್ತಣ್ಣ ನಾಡಗೇರೆ, ಅಬ್ದುಲ ರಹೀಂ, ಮೈತಾಬ್ ಖಾನ್, ಅನೀಲ ಕುಲಕರ್ಣಿ, ಶಿವಾನಂದ ಪಾಟೀಲ, ಶ್ರೀಮಂತ ಬಿರಾದಾರ, ಪ್ರೇಮನಾಥ ಚೌಧರಿ, ಆನಂದ ಎಸ್. ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here