ಸುರಪುರ: ನಗರದಲ್ಲಿ ವಾಸವಿ ಜಯಂತಿ ಆಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಸಲಾಗಿದೆ.ಮೊದಲಿಗೆ ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಜಯಂತಿ ಅಂಗವಾಗಿ ಭೀಮಶೇನ ಜೋಷಿ ಅವರ ನೇತೃತ್ವದಲ್ಲಿ ವಾಸವಿ ದೇವಿಗೆ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ನಂತರ ನೂರಾರು ಭಕ್ತರು ಭಾಗವಹಿಸಿ ತೆರೆದ ವಾಹನದಲ್ಲಿ ವಾಸವಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ನಗರದ ಮಹಾತ್ಮ ಗಾಂಧಿ ವೃತ್ತದ ಮೂಲಕ ದರಬಾರ ರಸ್ತೆ ಮಾರ್ಗವಾಗಿ ಅದ್ಧೂರಿ ಮೆರವಣಿಗೆ ನಡೆಯಿತು.ಈ ಸಂದರ್ಭದಲ್ಲಿ ಮಹಿಳೆಯರು ಯುವಕರು ಮಕ್ಕಳು ವಾದ್ಯಗಳ ಸದ್ದಿಗೆ ಕುಣಿದು ಕುಪ್ಪಳಿಸಿದರು.
ಮೆರವಣಿಗೆಯಲ್ಲಿ ಪ್ರಮುಖರಾದ ಜನಾರ್ಧನ ಕೋಸಗಿ,ಶ್ರೀನಿವಾಸ ಚಿದಳ್ಳಿ,ಶಿವು ದೇವರಶೆಟ್ಟಿ,ಗುರುರಾಜ ಕೋಸಗಿ,ಸತೀಶ ಎಲ್ಲೂರ,ತಿರುಮಲ ಮುದಗಲ್,ಶ್ರೀರಂಗ ಮುದಗಲ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.
ರಂಗಂಪೇಟೆ: ನಗರದ ರಂಗಂಪೇಟೆಯಲ್ಲಿನ ನಗರೇಶ್ವರ ದೇವಸ್ಥಾನದಲ್ಲಿ ವಾಸವಿ ಜಯಂತಿ ಆಚರಿಸಲಾಗಿದೆ.ಮೊದಲಿಗೆ ರಾಘವೇಂದ್ರ ಆಚಾರ್ಯ ಅವರ ನೇತೃತ್ವದಲ್ಲಿ ಪೂಜೆ ನೆರವೇರಿಸಿ ನಂತರ ಕೋಮಟಗಲ್ಲಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಾಸವಿ ದೇವಿಯ ಮೂರ್ತಿಯ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪ್ರತಿ ಮನೆಗಳ ಮುಂದೆ ಮೆರವಣಿಗೆ ಆಗಮಿಸುತ್ತಿದ್ದಂತೆ ಮನೆಗಳ ಜನರು ವಾಸವಿ ದೇವಿಗೆ ಹೂ ಹಣ್ಣು ಕಾಯಿ ಕರ್ಪೂರ ಅರ್ಪಿಸಿ ಭಕ್ತಿ ಮೆರೆದರು. ನಂತರ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಗೋಪಾಲಯ್ಯ ಪೋಲಂಪಲ್ಲಿ,ಕೃಷ್ಣಯ್ಯ ಕಲ್ಕುಂಡಿ,ವಾಸುದೇವ ಚೆಟ್ಟಿ,ರಘುರಾಮ ಕಡಬೂರ,ರಾಮಾಂಜನೇಯ ಪೋಲಂಪಲ್ಲಿ,ಗುರುರಾಜ ಅಯ್ಯ,ರಾಘವೇಂದ್ರ ಸೇರಿದಂತೆ ಅನೇಕ ಜನ ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.