ಮಹಾಪುರುಷರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸಿ

0
17

ಕಲಬುರಗಿ; ಜಿಲ್ಲೆ ಕಾಳಗಿ ಪಟ್ಟಣದಲ್ಲಿ ಪಟ್ಟಣ ಪಂಚಾಯತ್, ರೈತ ಸೇವಾ ಸಹಕಾರ ಸಂಘ ಸೇರಿದಂತೆ ವಿವಿಧ ಸರಕಾರಿ ಕಚೇರಿಗಳಲ್ಲಿ ಡಾ. ಬಾಬು ಜಗಜೀವನ್ ರಾಮ ರವರ 116 ನೇ ಜಯಂತೋತ್ಸವ ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಸೂರ್ಯಕಾಂತ್ ಕಟ್ಟಿಮನಿ. ಸ್ವಾತಂತ್ರ ಪೂರ್ವದಲ್ಲಿ, ಸ್ವಾತಂತ್ರ ನಂತರದಲ್ಲಿ, ತಮನ್ನು ತಾವೇ ಕಟ್ಟಿಕೊಂಡು ಬೆಳೆದ ಕೆಲವೇ ದಲಿತ ನಾಯಕರಲ್ಲಿ ಬಾಬು ಜಗಜೀವನ್ ರಾಮ್ ಒಬ್ಬರು,ರೈತ ಈ ದೇಶದ ಬೆನ್ನೆಲುಬು ರೈತರ ಸರ್ವತೋಮುಖ ಅಭಿವೃದ್ಧಿ ಕಾಣಲು ರೈತರ ಬಗ್ಗೆ ಆಸಕ್ತಿಯುತ ರಾಜಕೀಯ ಮಾಡಿದಂತಹ ಮಹಾನ್ ವ್ಯಕ್ತಿ ಡಾ. ಬಾಬು ಜಗಜೀವನ್ ರಾಮ ರವರು ಹಸಿರು ಕ್ರಾಂತಿಯ ಹರಿಕಾರರಾಗಿ ದೇಶದಲ್ಲಿರುವ ರೈತನಿಗೆ ಸಾಮಾಜಿಕ ನ್ಯಾಯ, ರೈತರ ಶ್ರಮಕ್ಕೆ ತಕ್ಕ ಪ್ರತಿಫಲಕ್ಕಾಗಿ ಹಸಿರು ಕ್ರಾಂತಿ ಆರಂಭಿಸಿದ ಧೀಮಂತ ನಾಯಕ.ವಿಶೇಷವಾಗಿ 1970-74 ರಲ್ಲಿ ಭಾರತದ ರಕ್ಷಣಾ ಸಚಿವರಾಗಿ ಅಮೋಘ ಸಾಧನೆ ಮಾಡಿದವರು, ಭಾರತ -ಪಾಕ್ ಯುದ್ಧದಲ್ಲಿ ಭಾರತದ ದಿಗ್ವಿಜಯಕ್ಕೆ ಕಾರಣಿಕರ್ತರು. ಭಾರತದ ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು.

Contact Your\'s Advertisement; 9902492681

ಇಂತಹ ಹಲವಾರು ಮಹಾನ್ ಪುರುಷರ ಜಯಂತಿ ಆಚರಿಸುವುದರೊಂದಿಗೆ ಅವರ ಉತ್ತಮ ಸಂದೇಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯತ್ ಮುಖ್ಯಧಿಕಾರಿ ವೆಂಕಟೇಶ್ ತೆಲಂಗ, ರಾಘವೇಂದ್ರ ಗುತ್ತೇದಾರ, ಶಿವಶರಣಪ್ಪ ಮಕಪನೋರ, ಸಂತೋಷ ನರನಾಳ, ರೈತ ಸೇವಾ ಸಹಕಾರ ಸಂಘದ ಕಾರ್ಯದರ್ಶಿಗಳಾದ ರಾಮಲಿಂಗ ರೆಡ್ಡಿ, ಭಾಸ್ಕರ್ ಜಿಲ್ಲಿ, ದೇವಿಂದ್ರ ಚಿಮ್ಮಚೋಡ್ ವಿಶ್ವನಾಥ್ ಬಾಂಬೆ ಸಾಯಿಬಣ್ಣ ಚಿಮ್ಮನಚೋಡ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here