ಮತ್ತಿಮಡು ಸಮ್ಮುಖದಲ್ಲಿ ವಿವಿಧ ಪಕ್ಷ ತೊರೆದು ಯುವಕರು ಬಿಜೆಪಿ ಸೇರ್ಪಡೆ

0
26

ಶಹಾಬಾದ: ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಸಮ್ಮುಖದಲ್ಲಿ ನೂರಾರು ಯುವಕರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಮುಖಂಡ ಶಿವಕುಮಾರ ತಳವಾರ, ಮೋಹನ ಹಳ್ಳಿ, ಹನುಮೇಶ ಕುಲಕರ್ಣಿ, ಲೋಹಿತ ಮಲಖೇಡ, ನಾಗರಾಜ ಯಡ್ರಾಮಿ ಅವರ ನೇತೃತ್ವದಲ್ಲಿ ಸುಮಾರು 300ಕ್ಕೂ ಹೆಚ್ಚು ಯುವಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಬಿಜೆಪಿ ಪಕ್ಷದ ಶಾಲನ್ನು ಹೊದಿಸುವ ಮುಖಾಂತರ ಅವರಿಗೆ ಪಕ್ಷಕ್ಕೆ ಬರಮಾಡಿಕೊಂಡರು.

Contact Your\'s Advertisement; 9902492681

ನಂತರ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತ ಪಡೆಯುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ ವಿಶ್ವಾಸ ವ್ಯಕ್ತಪಡಿಸಿದರು.ನನಗೆ ಸಿಕ್ಕ ಐದು ವರ್ಷಗಳ ಅವಧಿಯಲ್ಲಿ ಸುಮಾರು 1500ಕೋಟಿಗೂ ಹೆಚ್ಚು ಅನುದಾನ ತಂದು ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೆನೆ.ಅದಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿರುವುದು ನನಗೆ ತೃಪ್ತಿ ತಂದಿದೆ.

ನನ್ನ ಐದು ವರ್ಷಗಳ ಅವಧಿಯಲ್ಲಿ ಜನರಿಗೋಸ್ಕರ ಫುಲ್ ಟೈಮ್ ಜನಸೇವಕನಾಗಿ ಜನಪರವಾದ ಕೆಲಸ ಮಾಡಿದ್ದೆನೆ.ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡಿರುವುದು ಸಂತೋಷ ತಂದಿದೆ.ಹಗಲು –ರಾತ್ರಿ ಎನ್ನದೇ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೆನೆ. ರಾಜ್ಯ ಹಾಗೂ ಕೇಂದ್ರದ ಸರಕಾರದ ಜನಪರ ಆಡಳಿತಕ್ಕೆ ಮೆಚ್ಚಿ ಇಂದು ಜನರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಸೇರ್ಪಡೆಗೊಂಡ ಹೊಸ ಹಾಗೂ ಹಳೆಯ ಕಾರ್ಯಕರ್ತರೆಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಿಳಿಸಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಬೇಕೆಂದು ಕರೆ ನೀಡಿದರು.

ಬಿಜೆಪಿಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಾಗರಾಜ ಮೇಲಗಿರಿ, ಕನಕಪ್ಪ ದಂಡಗುಲಕರ, ನಿಂಗಪ್ಪ ಹುಳಗೋ¼ಕರ್, ಅರುಣ ಪಟ್ಟಣಕರ, ಅನಿಲ ಬೋರಗಾಂವಕರ, ಚಂದ್ರಕಾಂತ ಗೊಬ್ಬೂರಕರ್,ಮಹಾದೇವ ಗೊಬ್ಬೂರಕರ್, ದುರ್ಗಪ್ಪ ಪವಾರ, ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ,ಬಸವರಾಜ ಬಿರಾದಾರ, ದಿನೇಶ ಗೌಳಿ, ವಿರೇಶ ಬಂದಳ್ಳಿ, ದೇವೆಂದ್ರಪ್ಪ ಯಲಗೋಡಕರ್, ರಾಜು ದಂಡಗುಲಕರ್,ರಾಜು ಕುಂಬಾರ,ಶಂಕರ ಕುಂಬಾರ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here