ವಿಜಯಕುಮಾರ ತೇಗಲತಿಪ್ಪಿ ನೇತೃತ್ವದಲ್ಲಿ: ನೆರೆ ಸಂತ್ರಸ್ಥರ ನೆರವಿಗೆ ನಿಂತ ಕಲಬುರಗಿ ಸಾಂಸ್ಕೃತಿಕ ಬಳಗ

0
174

ಕಲಬುರಗಿ: ನೆರೆ ಹಾವಳಿಯಿಂದ ತತ್ತರಿಸಿ ಹೋದ ಕರ್ನಾಟಕ ಭಾಗದ ಅರ್ಧದಷ್ಟು ನಾಡಿನ ಜನತೆಯಲ್ಲಿ  ಒಂದಿಷ್ಟು ಧೈರ್ಯ ತುಂಬುವ  ದಿಸೆಯಲ್ಲಿ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೇತೃತ್ವದಲ್ಲಿ ಕಲಬುರಗಿಯ ಸಾಂಸ್ಕೃತಿಕ ಬಳಗವೆಲ್ಲ ಸೇರಿ  ಹತ್ತಿಗುಡೂರ ಶಾಲಾ ಆವರಣದಲ್ಲಿ ತೆಗೆದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಮೂಲಭೂತ ವಸ್ತುಗಳನ್ನು ಕೊಡುವ ಮೂಲಕ ವಿಶ್ವಜ್ಯೋತಿ ಪ್ರತಿಷ್ಠಾನವು ತನ್ನೆಲ್ಲ ಬಳಗದ ಸಹಕಾರದೊಂದಿಗೆ ನೆರೆ ಸಂತ್ರಸ್ಥರ ನೆರವಿಗೆ ಬಂದರು.

Contact Your\'s Advertisement; 9902492681

ನಂತರ ಮಾತನಾಡಿದ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಷ್ಟದಲ್ಲಿದ್ದವರ ಕಣ್ಣಿರು ಒರೆಸುವುದೇ ಮಾನವೀಯತೆ. ನೈಸರ್ಗೀಕ ವಿಕೋಪಕ್ಕೆ ಬಲಿಯಾದ ಹಳ್ಳಿಗಳಲ್ಲಿನ ಜನರಲ್ಲಿ ಆತ್ಮ ಸ್ಥೈರ್ಯ ತುಂಬುವ ಕಾರ್ಯ ಮಾಡಬೇಕಾಗಿದೆ. ನೊಂದವರ ನೋವಿಗೆ ಸ್ಪಂದಿಸುವುದೇ ನಿಜವಾದ ಸಮಾಜಸೇವೆ ಎಂಬ ನಿಜತತ್ವ ಪ್ರತಿಷ್ಠಾನ ಯಾವತ್ತೂ ಪಾಲಿಸುತ್ತಾ ಬಂದಿದೆ ಎಂದು ಹೇಳಿದರು.

ಪಿಡಿಎ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಬಾಬುರಾವ ಶೇರಿಕಾರ, ಡಾ.ಸುರೇಶ ಪಾಟೀಲ, ಡಾ.ಗೀತಾ ಪಾಟೀಲ, ಸಾಹಿತ್ಯ ಪ್ರೇಮಿಗಳಾದ ರವೀಂದ್ರಕುಮಾರ ಭಂಟನಳ್ಳಿ, ಜ್ಯೋತಿ ಹಿರೇಮಠ, ಸವಿತಾ ಪಾಟೀಲ, ಸಂಗೀತಾ ರೆಡ್ಡಿ, ಬಿ.ಎಂ.ಪಾಟೀಲ ಕಲ್ಲೂರ, ಶಿವಾನಂದ ಮಠಪತಿ, ಯಾದಗಿರಿ ಜಿಲ್ಲಾ ಚು.ಸಾ.ಪ. ಅಧ್ಯಕ್ಷ ಬಸವರಾಜ ಸಿನ್ನೂರ, ರೈತಪರ ಹೋರಾಟಗಾರ ಮಲ್ಲಿಕಾರ್ಜುನ ಸತ್ಯಂಪೇಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here