ಕಲಬುರಗಿ: ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಚೆಕ್ ಪೆÇೀಸ್ಟ್‍ನಲ್ಲಿ ಬೀದರನಿಂದ ಕಲಬುರಗಿ ತೆರಳತ್ತಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯೆಕ್ತಿಯ ಬ್ಯಾಗ್ ನಲ್ಲಿ ₹813800 ಮೌಲ್ಯದ 8 ಕೆ.ಜಿ. 138 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಕಮಲಾಪುರ ಪೆÇಲೀಸರು ವಶಪಡಿಸಿಕೊಂಡಿದ್ದಾರೆ.
ಗಾಂಜಾ ಸಾಗಿಸುತ್ತಿದ್ಧ ಕಲಬುರಗಿ ಬಾಪುನಗರ ನಿವಾಸಿ ಸಯ್ಯದ್ ಅಬ್ದುಲ ಮನಾನ ಎಂಬ ವ್ಯೆಕ್ತಿಯನ್ನು ಪೆÇಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಕಿಣ್ಣಿ ಸಡಕ ಚೆಕ್ ಪೆÇೀಸ್ಟ್ ನಲ್ಲಿ ಪೆÇಲೀಸರು ಬಸ್ ಪರಿಶೀಲಿಸಿದ್ದಾರೆ. ಈ ವೇಳೆ ಬಸ್ಸಿನಲ್ಲಿದ
ಸಯ್ಯದ ಬ್ಯಾಗ್ ನಲ್ಲಿ ₹ 813800 ಮೌಲ್ಯದ ಗಾಂಜಾ ಪತ್ತೆಯಾಗಿದೆ.
ಬೀದರನ ಅಪರಿಚಿತ ವೃದ್ಧರೊಬ್ಬರಲ್ಲಿ ಗಾಂಜಾ ಖರೀದಿಸಿದ್ದು, ಇದನ್ನು ಕಲಬುರಗಿಯಲ್ಲಿ ಚಿಲ್ಲರೆಯಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸುತ್ತಿರುವುದಾಗಿ ಸೈಯ್ಯದ ಬಾಯಿಬಿಟ್ಟಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.
ಸಿಪಿಐ ವಿ.ನಾರಾಯಣ, ಪಿಎಸ್‍ಐ ವಿಶ್ವನಾಥ ಮುದ್ದಾರೆಡ್ಡಿ, ರಾಜಶೇಖರ್, ಕುಪೇಂದ್ರ, ರಾಜೇಂದ್ರ ರೆಡ್ಡಿ, ರೇಣುಕಾ ಮತ್ತಿತರು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.