ಕಲಬುರಗಿ; ಕೇಂದ್ರ ಕಾರಾಗೃಹದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರರವರ 132 ನೇ ಜಯಂತಿ ದಿನಾಚರಣೆ ಕಾರ್ಯಕ್ರಮವನ್ನು ಅಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಮುಖ್ಯಸ್ಥರಾದ ಡಾ.ಪಿ. ರಂಗನಾಥ್‍ರವರು ಡಾ.ಬಾಬಾಸಾಹೇಬ ಅಂಬೇಡ್ಕರರವರ ಭಾವ ಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚಣೆ ಮಾಡಿ ಡಾ.ಬಾಬಾಸಾಹೇಬ ಅಂಬೇಡ್ಕರರವರ ಆಶೆಯದಂತೆ ಸಮ ಸಮಾಜದಲ ನಿರ್ಮಾಣ ಹಾಗೂ ಪ್ರತಿಯೊಬ್ಬರಿಗೆ ಶಿಕ್ಷಣ ದೊರಕಬೇಕು ಎಂಬುದಾಗಿತ್ತು. ಹಾಗಾಗಿ ನಾವೆಲ್ಲರೂ ಶಿಕ್ಷಣವನ್ನು ಪಡೆದು ಸಮ ಸಮಾಜದ ನಿರ್ಮಾಣ ಹಾಗೂ ಅಭಿವೃದ್ಧಿಗೆ ನಮ್ಮದೇ ಆದ ಕೊಡುಗೆಯನ್ನು ನೀಡುವುದರೊಂದಿಗೆ ನಿಜವಾದ ಅರ್ಥದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರರವರ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಿದಂತೆ ಆಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧೀಕ್ಷಕರಾದ ಬಿ.ಎಂ.ಕೊಟ್ರೇಶ್, ಸಹಾಯಕ ಅಧೀಕ್ಷಕರುಗಳಾದ ವಿ.ಕೃಷ್ಣಮೂರ್ತಿ, ಹುಸೇನಿ ಪೀರ್, ವೈದ್ಯಾಧಿಕಾರಿಗಳಾದ ಡಾ.ಬಸವರಾಜ ಕಿರಣಗಿ, ಡಾ.ಅಣ್ಣಾರವ್ ಪಾಟೀಲ್, ಸಂಸ್ಥೆಯ ಎಲ್ಲಾ ಜೈಲರ್ ವೃಂದದವರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕಾರಾಗೃಹದ ಎಲ್ಲಾ ಬಂದಿ ನಿವಾಸಿಗಳು ಪಾಲ್ಗೊಂಡು ಡಾ.ಬಾಬಾಸಾಹೇಬ ಅಂಬೇಡ್ಕರರವರ 132 ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಿ ಯಶಸ್ವಿಗೊಳಿಸಲಾಯಿತು.