ಪ್ರತಿ ಗ್ರಾಮಪಂಚಾಯತಿಗೆ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ; ಪ್ರಿಯಾಂಕ್ ಖರ್ಗೆ

0
16

ಕಲಬುರಗಿ: ಚಿತ್ತಾಪುರ ಮತಕ್ಷೇತ್ರದ ಪ್ರತಿ ಗ್ರಾಮಪಂಚಾಯತ ಕೇಂದ್ರಗಳಲ್ಲಿ ತಲಾ ರೂ 25 ಲಕ್ಷ ವೆಚ್ಚದಲ್ಲಿ ಮಹಿಳೆಯರಿಗಾಗಿ ಶೌಚಾಲಯ ನಿರ್ಮಾಣ ಮಾಡುವ ಯೋಜನೆ ಜಾರಿಗೆ ತರುವ ಯೋಚನೆ ಇದ್ದು ಈಗಾಗಲೇ 34 ಪಂಚಾಯತ ಕೇಂದ್ರಗಳಲ್ಲಿ ಯೋಜನೆ ಜಾರಿಗೆ ರೂಪುರೇಷ ಮಾಡಲಾಗಿದೆ. ತಾವು ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿದರೆ ಈ ಯೋಜನೆಯನ್ನು ಸಂಪೂರ್ಣ ಜಾರಿಗೆ ತರುತ್ತೇನೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಕನಗನಹಳ್ಳಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಮಹಿಳೆಯರು ಬಯಲು ಶೌಚಾಲಯಕ್ಕೆ ಹೋಗುವುದರಿಂಗ ಆಗುತ್ತಿರುವ ತೊಂದರೆ ತಪ್ಪಿಸಲು ಶೌಚಾಲಯ ನಿರ್ಮಾಣ ಮಾಡುವ ಆಲೋಚನೆ ಬಂದಿತ್ತು. ಇದೊಂದು ಪ್ರಮುಖ ಯೋಜನೆಯಾಗಲಿದೆ ಎಂದು ಅಶಿಸಿದರು.

Contact Your\'s Advertisement; 9902492681

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಚಾರ ವ್ಯಾಪಕವಾಗಿ ಹಬ್ಬಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿವೆ. ಅಡುವೆ ಎಣ್ಣೆ, ಅಡುಗೆ ಅನಿಲ ಬೆಲೆ ತೆರಲು ಸಾರ್ವಜನಿಕರು ತತ್ತರಿಸಿದ್ದಾರೆ. ನಿರುದ್ಯೋಗ ಸಮಸ್ಯೆಯಿಂದ ಯುವಕರು ಕಂಗಾಲಾಗಿದ್ದಾರೆ. ಈ ಸರ್ಕಾರದಲ್ಲಿ ಉದ್ಯೋಗಗಳು ಒಂದು ಕೋಟಿ ಗೆ ಮಾರಾಟ ಮಾಡಲಾಗಿದೆ. ಈ ಸಮಸ್ಯೆಗಳ ಬಗ್ಗೆ ಬಿಜೆಪಿಗರಯ ಮತ ಕೇಳಲು ಬಂದಾಗ ನೀವೆಲ್ಲ ಅವರಿಗೆ ಕೇಳಬೇಕು ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್, ಮನೆಯ ಯಜಮಾನಿಗೆ ತಲಾ ಪ್ರತಿತಿಂಗಳು ರೂ 2000, ಪ್ರತಿ ನಿರುದ್ಯೋಗಿ ಪದವಿಧರರಿಗೆ ರೂ 3000 ಹಾಗೂ ಐಟಿಐ ಪದವಿಧರರಿಗೆ ರೂ 1500 ಪ್ರತಿ ತಿಂಗಳು ನೀಡಲಾಗುವುದು ಹಾಗೂ ಪ್ರತಿ ಕುಟುಂಬಕ್ಕೆ ತಲಾ 10 ಕೆಜಿ ಅಕ್ಕಿ ನೀಡಲಾಗುವುದು. ಇವೆಲ್ಲ ಕಾಂಗ್ರೆಸ್ ಪಕ್ಷ ನಿಮಗೆಲ್ಲ ನೀಡುವ ಭರವಸೆಯಾಗಿದೆ ಎಂದರು.

ಬಿಜೆಪಿ ಪಕ್ಷದವರು ಅಕ್ರಮ ಅಕ್ಕಿ ಸಾಗಾಣಿಕೆ ಹಾಗೂ ಹಾಲಿನ ಪೌಡರ ಅಕ್ರಮ ಸಾಗಾಣಿಕೆ ಮಾಡುವ ಆರೋಪ ಹೊತ್ತಿರುವ ವ್ಯಕ್ತಿಗೆ ಟಿಕೇಟ್ ನೀಡಿದ್ದಾರೆ. ಇಂತವರು ಆರಿಸಿ ಬಂದರೆ ಜನಪರ ಆಡಳಿತ ಬರಲು ಸಾಧ್ಯವಾ? ಎಂದು ಪ್ರಶ್ನಿಸಿದರು.
ನನ್ನ ಮೇಲೆ ಯಾವುದೇ ಭ್ರಷ್ಠಾಚಾರದ ಆರೋಪಗಳಿಲ್ಲ. ಜನಪರ ಕೆಲಸ ಮಾಡುವುದೇ ನನ್ನ ಧ್ಯೇಯವಾಗಿದೆ. ನಾನು ಈ ತಾಲೂಕಿನ ಮೊಮ್ಮಗನಾಗಿದ್ದು ವಿಧಾನಸಭೆಯಲ್ಲಿ ನಿಮ್ಮೆಲ್ಲರ ಸಮಸ್ಯೆ ಕುರಿತು ಮಾತನಾಡುತ್ತೇನೆ. ನಿಮ್ಮೆಲ್ಲರ ಆಯ್ಕೆಯ ಮೇಲೆ ಚಿತ್ತಾಪುರದ ಅಭಿವೃದ್ದಿ ನಿಂತಿದೆ. ಈ ಬಗ್ಗೆ ನೀವೆಲ್ಲರೂ ಚಿಂತಿಸಬೇಕಿದೆ ಎಂದು ಮನವಿ ಮಾಡಿದರು.

ವೇದಿಕೆಯ ಮೇಲೆ ಭೀಮಣ್ಣ ಮೇಟಿ, ನಾಗರೆಡ್ಡಿ ಕರದಾಳ, ಶಿವಾನಂದ ಪಾಟೀಲ, ವೀರನಗೌಡ ಪರಸರೆಡ್ಡಿ ಸೇರಿದಂತೆ ಹಲವರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here