ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮುಖ; ಶಾಸಕ ಪ್ರಿಯಾಂಕ್ ಖರ್ಗೆ

0
9

ಕಲಬುರಗಿ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಹಿಳೆಯರ ಹಾಗೂ ಯುವಕರ ಪಾಲ್ಗೊಳ್ಳುವಿಕೆ ಪ್ರಮುಖವಾಗಿದ್ದು, ನೀವು ದೂರ ಉಳಿದರೆ ಕೆಟ್ಟವರು ಆಯ್ಕೆಯಾಗಿಬಿಡುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಮಾರ್ಮಿಕವಾಗಿ ಹೇಳಿದರು.

ಬನ್ನಟ್ಟಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಮಹಿಳೆಯರು ಮುಂದೆ ಬಂದು ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕದೆ ನೀವು ಹಾಗೆ ಹಿಂದುಳಿದುಬಿಡುತ್ತೀರಿ. ಪ್ರಸ್ತುತ ಬೆಲೆಯೇರಿಯಿಂದಾಗಿ ಮಹಿಳೆಯರು ದಿನನಿತ್ಯ ಸಂಸಾರ ನಡೆಸುವುದು ಕಷ್ಟವಾಗುತ್ತಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ, ಮನೆಯ ಯಜಮಾನಿ ಮಹಿಳೆಗೆ ಪ್ರತಿತಿಂಗಳು ರೂ 2000 ನೀಡುತ್ತೇವೆ ಇದು ನಮ್ಮ ವಾಗ್ಧಾನವಾಗಿದೆ ಎಂದರು.

Contact Your\'s Advertisement; 9902492681

ನಮ್ಮ ವಾಗ್ಧಾನವನ್ನು ಬಿಜೆಪಿಗರು ವಿರೋಧಿಸುತ್ತಿದ್ದಾರೆ ಕಾರಣ ಅವರಿಗೆ ಮಹಿಳೆಯರ ಅಭಿವೃದ್ದಿ ಬೇಕಿಲ್ಲ. ಈಗ ಸಾವಿರಾರು ಸಂಖ್ಯೆಯ ಯುವಕರು ಉದ್ಯೋಗವಿಲ್ಲದೇ ಕಷ್ಟಪಡುತ್ತಿದ್ದಾರೆ. ಹಾಗಾಗಿ ಅವರಿಗೆ ಅನುಕೂಲವಾಗಲು ಪದವಿಧರರಿಗೆ ರೂ 3000 ಹಾಗೂ ಡಿಪ್ಲೋಮಾ ಪಾಸ್ ಆದವರಿಗೆ ರೂ 1500 ಪ್ರತಿತಿಂಗಳು ನೀಡಲಿದ್ದೇವೆ. ಜೊತೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಇವೆಲ್ಲ ನಮ್ಮ ವಾಗ್ಧಾನವಾಗಿದೆ. ಇದಕ್ಕೂ ಕೂಡಾ ಬಿಜೆಪಿವಿರೋಧಿಸುತ್ತಿದೆ. ಯಾಕೆ ಎಂದು ಅವರು ಇಲ್ಲಿಗೆ ಬಂದಾಗ ನೀವು ಅವರನ್ನ ಕೇಳಬೇಕು ಎಂದರು.

ಬಿಜೆಪಿ ಪಕ್ಷ ಚಿತ್ತಾಪುರದ ಅಭಿವೃದ್ದಿ ವಿಷಯವನ್ನು ಮುಂದಿಟ್ಟುಕೊಂಡು ಅಭ್ಯರ್ಥಿಯನ್ನ ಆಯ್ಕೆ ಮಾಡಬೇಕಿತ್ತು. ಆದರೆ, ಈಗಿನ ಅಭ್ಯರ್ಥಿ ಎಂತವರು ಅವರ ಹಿನ್ನೆಲೆ ಏನು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ ಪಕ್ಷದ ಎರಡು ಬಣಗಳ ನಡುವೆ ಕಳೆದೆರಡು ದಿನಗಳಿಂದ ಹೊಡೆದಾಟ ನಡಯುತ್ತಿರುವ ಮಾಹಿತಿ ಇದೆ. ಬಿಜೆಪಿ ಅಭ್ಯರ್ಥಿಯನ್ನೇ ಸ್ವತಃ ಬಿಜೆಪಿಯ ಮತ್ತೊಂದು ಬಣ ಒಪ್ಪುತ್ತಿಲ್ಲವೆಂದ ಮೇಲೆ ನೀವು ಯಾಕೆ ಒಪ್ಪಬೇಕು? ಎಂದರು.

ನಾನು ನಿಮ್ಮ ಮನೆ ಮಗನಾಗಿಕೆಲಸ ಮಾಡುತ್ತೇನೆ. ನಾನು ಯಾವುದೇ ಭ್ರಷ್ಟಾಚಾರ ದಲ್ಲಿ ತೊಡಗಿಲ್ಲ. ಯಾವುದೇ ಅಕ್ರಮ ಎಸಗಿಲ್ಲ. ಅಟ್ರಾಸಿಟಿ ಕೇಸುಗಳನ್ನು ಹಾಕಿಸಿಲ್ಲ. ನಿಮ್ಮ ಅಭಿವೃದ್ದಿಗೆ ನಾನು ಪರಿಶ್ರಮಪಟ್ಟಿದ್ದೇನೆ. ಶೈಕ್ಷಣಿಕ ಅಭಿವೃದ್ದಿಗೆ ಕೆಲಸ ಮಾಡಿದ್ದೇನೆ. ಈಗ ನಿಮ್ಮ  ಮುಂದೆ ಬಂದಿದ್ದೇನೆ ಮತ್ತೊಮ್ಮೆ ಸೇವೆ ಮಾಡಲು ನೀವೆಲ್ಲ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here