ಸುರಪುರ :ನಗರದ ತಹಸೀಲ್ದಾರ್ ಕಚೇರಿಯಲ್ಲಿ ತೆರೆಯಲಾಗಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ವಿಧಾನ ಸಭಾ ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಸಲಾಯಿತು.
ಈ ಸಂದರ್ಭದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಿದ ಚುನಾವಣಾಧಿಕಾರಿ ಅಮರೇಶ ನಾಯ್ಕ ಮಾತನಾಡಿ, 2 ನಾಮಪತ್ರಗಳು ತಿರಸ್ಕøತಗೊಂಡಿದ್ದು, 12 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿದರು.
ನಾಮಪತ್ರಗಳ ಪರಿಶೀಲನೆ ನಂತರ ಮಾತನಾಡಿದ ಅವರು, ಒಟ್ಟು 9 ಅಭ್ಯರ್ಥಿಗಳಿಂದ 14 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಮೈತ್ರಾ ನರಸಿಂಹನಾಯಕ ಮತ್ತು ಆರ್.ವಿಶ್ವನಾಥ ನಾಯಕ ಅವರ ನಾಮಪತ್ರಗಳು ತಿರಸ್ಕøತ ಗೊಂಡಿವೆ. 7 ಅಭ್ಯರ್ಥಿಗಳ 12 ನಾಮಪತ್ರಗಳು ಕ್ರಮಬದ್ಧವಾ ಗಿವೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷದಿಂದ ಮೈತ್ರಾ ನರಸಿಂಹ ನಾಯಕ ಮತ್ತು ಆಮ್ ಆದ್ಮಿ ಪಕ್ಷದಿಂದ ಆರ್.ವಿಶ್ವನಾಥ ನಾಯಕ ಪರ್ಯಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಬಿ.ಫಾರಂ ಲಗತ್ತಿಸದ ಕಾರಣ ಇಬ್ಬರ ನಾಮಪತ್ರಗಳು ತಿರಸ್ಕøತವಾಗಿವೆ.
ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಅಭ್ಯರ್ಥಿಗಳಾದ ಶ್ರವಣಕುಮಾರ ನಾಯಕ, ಆರ್.ಮಂಜುನಾಥ ನಾಯಕ, ಶಶಿಕುಮಾರ, ರಾಜಕೀಯ ಪಕ್ಷಗಳ ಮುಖಂಡರಾದ ರಾಜಾ ಹನುಮಪ್ಪನಾಯಕ, ರಾಜಾ ಕುಮಾರ ನಾಯಕ, ನಿಂಗರಾಜ ಬಾಚಿಮಟ್ಟಿ, ವೆಂಕಟೇಶ ಭಕ್ರಿ, ಗುರುರಾಜ್ ಗುತ್ತೇದಾರ್ ವಕೀಲರಾದ ಅಪ್ಪಾಸಾಹೇಬ ಪಾಟೀಲ್, ಎನ್.ಜೆ.ಬಾಕ್ಲಿ ಇತರರಿದ್ದರು.