ಕಲಬುರಗಿ: ಕಲಬುರಗಿದಕ್ಷಿಣ ಮತಕ್ಷೇತ್ರದಡಿಲ್ಲಿ ಬರುವ ವಾರ್ಡ್ ನಂಬರ್ 54 ರ ಪಂಚಶೀಲ ನಗರ, ಕೋಟನೂರ್ ಬಡಾವಣೆಯಲ್ಲಿನ ನೂರಾರು ಜನ ಅಕಾಂಗ್ರೆಸ್ ಪಕ್ಷ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಇದಲ್ಲದೆ ಡಬರಾಬಾದ್ ಗ್ರಾಮದ ನಿವಾಸಿಗಳೂ ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
ವಾರ್ಡ್ ನಂಬರ್ 54 ರ ದತ್ತು ಬದಾಳ್, ಅಶೋಕ ಪಾಟೀಲ್, ರಮೇಶ ಕೋರಳ್ಳಿ, ಬಾಬೂರಾವ ಬಿರಾದಾರ್, ಡಾ. ರಾಜು, ನಿವೃತ್ತ ಶಿಕ್ಷಕ ಬಸಣ್ಣ, ಮಲ್ಲು, ನಬಿಲಾಲ್, ಚಂದ್ರಕಾಂತ ಪಾಟೀಲ್, ಚಂದ್ರಕಾಂತ, ಅಶೋಕ ಕಾಗ್ರೆಸ್ ಸೇರಿದು.
ಇನ್ನು ಪಂಚಶೀಲ ನಗರ, ಕೋಟನೂರಿನ ಕಮಲಾಬಾಯಿ, ಗೌರಮ್ಮ, ಗೀತಾ, ರೇಷ್ಮಾ, ನಿರ್ಮಲಾ, ಉತ್ತರಮ್ಮ, ಕವಿತಾ, ನೀಲಮ್ಮ, ಮಹಾದೇವಿ, ಪಲ್ಲವಿ, ಬಸಮ್ಮ ಹಾzಗೂ ಜ್ಯೋತಿ ಮತ್ತು ಡಬರಾದಾರ್‍ನಿಂದ ರಾಜೇಶ್ವರಿ, ಸಾವಿತ್ರಿ, ಅಂಬಿಕಾ, ಪ್ರಕಾಶ, ರಜೀಯಾ ಬೇಗಂ, ಖಾದರ್ ಪಟೇಲ್ ಸೇರಿದಂತೆ ಈ ಬಡಾವಣೆಗಳ ನೂರಾರು ಜನ ಕಾಂಗ್ರೆಸ್ ಸೇರಿದರು.
ಇವರನ್ನೆಲ್ಲ ಕಾಂಗ್ರೆಸ್ ನೀಡಿ ಸ್ವಾಗಿಸಿದ ಅಲ್ಲಂಪ್ರಭು ಪಾಟೀಲ್, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್ ಅವರು ಪಕ್ಷದ ಸಿದ್ದಾಂತ ನಂಬಿ ಬಂಇರುವ ಎಲ್ಲರಿಗೂ ಶುಭ ಕೋರಿದರು. ಕ್ಷದ ಸಂಘಟನೆ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಬೆಂಬಲಿಸುವಂತೆ ಜಗದೇವ ಗುತ್ತೇದಾರ್ ಕೋರಿದರು.
ಕಾಂಗ್ರೆಸ್ ಪಕ್ಷಕ್ಕೆ ದಿನದಿಂದ ದಿನಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಶುಭ ಸೂಚಕವಾಗಿದೆ. ಕಲಬುರಗಿ ದಕ್ಷಿಣದಲ್ಲಿ ಈ ಬಾರಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಲಿದೆ ಎಂಬುದಕ್ಕೆ ಇವೆಲ್ಲ ಬೆಳವಣಿಗೆಗಳು ಸಾಕ್ಷಿ ಎಂದು ಅಲ್ಲಂಪ್ರಭು ಪಾಟೀಲ್ ಹೇಳಿದರು. ಕಳೆದ 3 ದಶಕದಿಂದ ಈ ಕ್ಷೇತ್ರಆಳುತ್ತಿರುವ ರೇವೂರ್ ಕುಟುಂಬದವರು ಇಲ್ಲಿ ಪ್ರಗತಿ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಕ್ಷೇತ್ರದ ಹೆಸರಲ್ಲಿ ಸಾಕಷ್ಟು ಭ್ರಷ್ಟಾಚಾರÀವಾಗಿದೆ. ಇದಕ್ಕೆಲ್ಲ ಕೊನೆ ಹಾಡಬೇಕೆಂದರೆ ಕಾಂಗ್ರೆಸ್ ಪಕ್ಷ ಇಲ್ಲಿ ಗೆದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಅಲ್ಲಂಪ್ರಭು ಹೇಳಿದರು.