ಸುರಪುರ: ನಗರದ ಪೋಲಿಸ್ ಠಾಣೆ ರಸ್ತೆ ಮಾರ್ಗದಲ್ಲಿರುವ ಗೌತಮ ಬುದ್ಧ ವೃತ್ತದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ರವಿವಾರದಂದು ಜಗಜ್ಯೋತಿ ಬಸವೇಶ್ವರರ 890ನೇ ಜಯಂತಿಯನ್ನು ಆಚರಿಸಲಾಯಿತು.
ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ ಮಹಾ ಮಾನವತಾವಾದಿ ಬಸವೇಶ್ವರರು ಈ ನಾಡು ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದಾರೆ ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಜಾತೀಯತೆ, ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ತೊಲಗಿಸಿ ಸಮಾನತೆಯನ್ನು ಸಾರಿದ ಮಹಾನ್ ಪುರುಷ ಬಸವೇಶ್ವರರ ವಚನಗಳು, ತತ್ವ ಹಾಗೂ ಸಿದ್ದಾಂತಗಳು ದಾರಿದೀಪವಾಗಿವೆ ಹಾಗೂ ಸಮಾಜದ ಪ್ರತಿಯೊಬ್ಬರಿಗೂ ಮಾರ್ಗದರ್ಶನವಾಗಿವೆ ಎಂದರು.
ಮುಖಂಡರಾದ ಮಾನಪ್ಪ ಕಟ್ಟಿಮನಿ, ಮಾನಪ್ಪ ಬಿಜಾಸಪುರ, ಹಣಮಂತ ಬೊಂಬಾಯಿ, ಯಲ್ಲಪ್ಪ ಚಿನ್ನಾಕಾರ, ರವಿಚಂದ್ರ ಬೊಮ್ಮನಹಳ್ಳಿ, ಖಾಜಾ ಹುಸೇನ ಗುಡಗುಂಟಿ, ಜಟ್ಟೆಪ್ಪ ನಾಗರಾಳ, ಶರಣು ಬಲಶೆಟ್ಟಿಹಾಳ, ಹಣಮಂತ ದೊರಿ, ಸಿದ್ದಪ್ಪ ಬೊಮ್ಮನಹಳ್ಳಿ ಶಿಕ್ಷಕರು, ಮಹೇಶ ಸುಂಗಲಕರ, ಹೊನ್ನಪ್ಪ ದೇವಿಕೇರಾ, ರಾಮಣ್ಣ ಶೆಳ್ಳಗಿ, ಮೂರ್ತಿ ಬೊಮ್ಮನಹಳ್ಳಿ ಸೇರಿದಂತೆ ಅನೇಕರು ಇದ್ದರು.