ಹಯ್ಯಾಳಸಿದ್ದೇಶ್ವರ ಜಾತ್ರಾ ಮಹೋತ್ಸವ

0
12

ಕಲಬುರಗಿ: ಶಹಾಬಾದ್ ತಾಲ್ಲೂಕಿನ ಮರತೂರು ಗ್ರಾಮದಲ್ಲಿ ಮಂಗಳವಾರದಿಂದ ಹಯ್ಯಾಳಸಿದ್ದೇಶ್ವರ ಜಾತ್ರೆ ನಡೆಯಲಿದೆ. ಅಂದು ಬೆಳಗ್ಗೆ ಹಯ್ಯಾಳಸಿದ್ದೇಶ್ವರ ಗದ್ದುಗೆಗೆ  ಅಭಿಷೇಕ ಜರುಗಲಿದೆ.

ಸಾಯಂಕಾಲ 4 ಗಂಟೆಗೆ ಪಲ್ಲಕ್ಕಿ ಉತ್ಸವ ಜರುಗಲಿದ್ದು, ರಾತ್ರಿ 10 ಗಂಟೆಗೆ ಪ್ರಸಿದ್ದ ಗವಾಯಿಗಳಿಂದ ಡೊಳ್ಳಿನ ಪದಗಳ ಕಾರ್ಯಕ್ರಮ ನಡೆಯಲಿವೆ.

Contact Your\'s Advertisement; 9902492681

ಏ.26 ರಂದು ಯಲ್ಲಾಲಿಂಗ ಮಹಾರಾಜರ ಗದ್ದುಗೆಗೆ ಅಭಿಷೇಕ ನೆರವೇರಲಿದೆ. ಸಂಜೆ 5.30 ಕ್ಕೆ ಮುಗಳಖೋಡ, ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಯಲ್ಲಾಲ್ಲಿಂಗ ಮಹಾರಾಜರ ನೂತನ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ.

ಏ.27 ರಂದು ಗವಾಯಿಗಳಿಂದ ಗೀ ಗೀ ಪದಗಳು ಜರುಗಲಿದ್ದು, ಏ.28 ರಂದು ಮರತೂರು ವಿರಕ್ತಮಠದ ಶ್ರೀಶಲ  ಮಹಾಸ್ವಾಮೀಗಳಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ. ಏ.29 ರಂದು ಸಂಜೆ 7 ಗಂಟೆಗೆ ಶ್ರೀಶೈಲ ಅಕ್ಕಮಹಾದೇವಿ ಬಳಗದವರಿಂದ ಇಡೀ ರಾತ್ರಿ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here