ಮಾಹತ್ಮರನ್ನು ಜಾತಿಗೆ ಸೀಮಿತ ಮಾಡುವುದು ತಪ್ಪು; ಗಂಜಗಿರಿ

0
109

ಕಾಳಗಿ: ಸಮ-ಸಮಾಜದ ಕನಸ್ಸನ್ನಿಟ್ಟುಕೊಂಡು ಸಮಾಜದಲ್ಲಿ ತುಂಬಿರುವ ಮೇಲು, ಕೀಳು ಎಂಬ ವಿಷ ಬೀಜವನ್ನು ತೆಗೆದು ಹಾಕಲು ಹಗಲಿರುಳೆನ್ನದೆ ಸಂಪೂರ್ಣವಾಗಿ ತಮ್ಮ ಜೀವನವನ್ನು ಸಮಾಜಿಕ ಪರಿವರ್ತನೆಗಾಗಿ ಮುಡುಪಾಗಿಟ್ಟು ಹೋರಾಟ ಮಾಡಿದ ಶರಣರನ್ನು ಸಂತರನ್ನು ಮಾಹಪುರುಷರನ್ನು ಒಂದು ಜಾತಿಗೆ ಸೀಮಿತ ಮಾಡದೆ ಅವರನ್ನು ವಿಶಾಲ ದೃಷ್ಟಿಯಿಂದ ನೋಡಬೇಕೆಂದು ಸಮಾಜಿಕ ಚಿಂತಕ ಮಾರುತಿ ಗಂಜಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಳಗಿ ತಾಲೂಕಿನ ಹೊಸಳ್ಳಿ ನಾವದಗಿ ಗ್ರಾಮದಲ್ಲಿ ಲೋಕಮಾನ್ಯ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರವರ ೧೩೨ ನೇ ಜಯಂತೋತ್ಸವದ ಅಂಗವಾಗಿ ಯೂನಿಟಿ ಆಫ್ ಮೂಲನಿವಾಸಿ ಬಹುಜನ ಸಂಘಟನೆ ವತಿಯಿಂದ ಹಮ್ಮಿಕೊಂಡ ಅಂಬೇಡ್ಕರವರ ಮಾಹಪುರುಷರ ಜೀವನ ಸಂದೇಶ ಅಭಿಯಾನ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮುಂದುವರೆದು ಬುದ್ದ ಬಸವ ಅಂಬೇಡ್ಕರ ನಿಜಶರಣ ಅಂಬಿಗರ ಚೌಡಯ್ಯ ಕನಕನಾಯಕ ಟಿಪ್ಪು ಸುಲ್ತಾನ ಶರಣೆ ಅಕ್ಕಮಾಹದೇವಿ ಮುಂತಾದ ಮಾಹತ್ಮರನ್ನು ವರ್ಷಕ್ಕೊಮ್ಮೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನೆನೆದರೆ ಅವರೇನೆಂದು ಅರ್ಥವಾಗುವುದಿಲ್ಲಾ ಅವರ ವಿಚಾರಗಳನ್ನು ತಲೆಯಲ್ಲಿ ತಗೊಂಡು ನಿಜ ಜೀವನದಲ್ಲಿ ಅಳವಡಿಸಿಕೊಂಡು ವಿಚಾರ ಪ್ರಚಾರ ಪ್ರಸಾರ ಮಾಡಿದಾಗ ಮಾತ್ರ ಮಾಹತ್ಮರು ಕಂಡ ಕನಸ್ಸು ನನಸು ಮಾಡಲು ಸಾದ್ಯವೆಂದರು.

ಗೋಪಾಲ ಗಾರಂಪಳ್ಳಿ, ಮೋಹನ ಐನಾಪೂರ, ಸತೀಶ್ ನಾವದಗಿ, ಹರ್ಷವರ್ಧನ ಚಿಮ್ಮನಕಟ್ಟಿ, ರೇವಣಸಿದ್ದಪ್ಪ ಸುಬೇದಾರ, ಮಾರುತಿ ಜಾದವ, ಗಮ್ಮು ರಾಠೋಡ, ಸುಭಾಷ ತಾಡಪಳ್ಳಿ, ವಿಜಯ ತಾಡಪಳ್ಳಿ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here