ಶೇ.100 ರಷ್ಟು ಮತದಾನಕ್ಕೆ ಶ್ರಮಿಸಲು ಕರೆ

0
7

ಕಲಬುರಗಿ: ಮೇ 10 ರಂದು ಜರುಗುವ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ನಗರ ಸೇರಿ ಜಿಲ್ಲೆಯಾದ್ಯಂತ ಶೇ.100ರಷ್ಟು ಮತದಾನ ಆಗುವಂತೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಸ್ವೀಪ್ ನೋಡಲ್ ಅಧಿಕಾರಿ ಡಾ.ಗಿರೀಶ್ ಡಿ. ಬದೋಲೆ ಹೇಳಿದರು.

ರವಿವಾರ ಸ್ವೀಪ್ ಜಾಗೃತಿ ವಿಶೇಷ ಅಭಿಯಾನ “ನಮ್ಮ ನಡೆ-ಬೂತ್ ಕಡೆ” ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಶಾರದಾ ವಿವೇಕ ಮಹಿಳಾ ಪದವಿ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಶಾರದಾ ವಿವೇಕ ಪದವಿ ಕಾಲೇಜಿನಲ್ಲಿ ಆಯೋಜಿಸಿದ ಮತದಾರರ ಜಾಗೃತಿ ಜಾಥಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ನಗರದಲ್ಲಿ ಶೇ.49 ರಷ್ಟು ಮಾತ್ರ ಮತದಾನವಾಗಿದೆ. ಮತದಾನದ ಬಗ್ಗೆ ಆಲಸ್ಯ ಬೇಡ. ನಮ್ಮ ಮತ-ನಮ್ಮ ಹಕ್ಕು. ಪ್ರಜಾಪ್ರುಭತ್ವ ಗಟ್ಟಿಗೆ ಪ್ರತಿಯೊಬ್ಬರು ಮತದಾನ ಮಾಡುವುದು ಅವಶ್ಯಕ ಎಂದು ಡಾ.ಗಿರೀಶ್ ಡಿ. ಬದೋಲೆ ಕರೆ ನೀಡಿದರು.

ಕಲಬುರಗಿ ದಕ್ಷಿಣ ಬಿ.ಇ.ಓ ಶಂಕ್ರೆಮ್ಮ ಡವಳಗಿ, ಕಾಲೇಜಿನ ಡಾ.ಭಾಗೀರಥಿ ಎಂ.ಕೆ, ಪ್ರಾಂಶುಪಾಲ ಬಸವರಾಜ ಬಿರಾದಾರ, ಉಪನ್ಯಾಸಕ ಶರಣಗೌಡ ಪಾಟೀಲ, ಇ.ಎಲ್.ಸಿ. ನೋಡಲ್ ಅಧಿಕಾರಿ ಹಣಮಮತರಾಯ ಸೇರಿದಂತೆವಿದ್ಯಾರ್ಥಿಗಳು, ನೌಕರರು ಭಾಗವಹಿಸಿದ್ದರು.

ಜಾಥಾವು ಕಾಲೇಜಿನಿಂದ ಆರಂಭಗೊಂಡು ಲಾಲ್‍ ಹನುಮಾನ ದೇವಸ್ಥಾನ- ಶಹಾಬಜಾರ ಗಲ್ಲಿ-ಕೈಲಾಶ ನಗರ-ಮಲ್ಲಿಕಾರ್ಜುನ ದೇವಸ್ಥಾನ-ಖಾದ್ರಿ ಚೌಕ್-ಆಳಂದ ರಸ್ತೆ ಮಾರ್ಗವಾಗಿ ಮರಳಿ ಕಾಲೇಜಿಗೆ ಬಂದು ಸಂಪನ್ನಗೊಂಡಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here