ಪತ್ರಕರ್ತರು ಸಮಾಜದ ಕನ್ನಡಿ ಇದ್ದಂತೆ: ರಾಜುಗೌಡ: ಕೆಜೆಯು ವತಿಯಿಂದ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪಧಾನ

0
17

ಸುರಪುರ: ನಾವು ಏನೇ ತಪ್ಪುಗಳನ್ನು ಮಾಡಿದರು ಅದನ್ನು ಎತ್ತಿ ತೋರಿಸುವ ಕೆಲಸ ಮಾಡುವ ಪತ್ರಕರ್ತರೆಂದರೆ ಸಮಾಜದ ಕನ್ನಡಿ ಇದ್ದಂತೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷರು ಹಾಗು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,ಕೊರೊನಾ ಸಂದರ್ಭದಲ್ಲಿ ವೈದೈರು ದೇವರಸ್ವರೂಪದಲ್ಲಿ ನಿಂತು ಕೆಲಸ ಮಾಡಿದ್ದಾರೆ.ಅವರಂತೆ ಪತ್ರಕರ್ತರು ಕೂಡ ತಮ್ಮ ಜೀವದ ಹಂಗನ್ನು ತೊರೆದು ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದೀರಿ ಎಂದರು.ಅಲ್ಲದೆ ಸುರಪುರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ ಈ ಮುಂಚೆಯಿಂದಲೂ ಕೆಜೆಯು ವತಿಯಿಂದ ಮನವಿ ಮಾಡಿದ್ದೀರಿ,ಅದರಂತೆ ಶೀಘ್ರದಲ್ಲಿಯೆ ಭವನ ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಭರವಸೆ ನೀಡಿದರು.ಅಲ್ಲದೆ ಸುರಪುರ ಮತ್ತು ಹುಣಸಗಿ ತಾಲೂಕಿನ ಪತ್ರಕರ್ತರಿಗೆ ಆದ್ಯತೆ ಮೇರೆಗೆ ಮನೆಗಳಿಲ್ಲದವರಿಗೆ ಸರಕಾರದ ವಿವಿಧ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲು ಕ್ರಮವಹಿಸುವುದಾಗಿ ತಿಳಿಸಿ,ಪತ್ರಕರ್ತರ ಯಾವುದೇ ಬೇಡಿಕೆಳಿದ್ದರು ಈಡೇರಿಸುವುದಾಗಿ ಭರವಸೆ ನೀಡಿ.ಎಲ್ಲಾ ಪತ್ರಕರ್ತರು ಒಗ್ಗಟ್ಟಿನಿಂದ ಇರುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಪತ್ರಕರ್ತರೆಂದರೆ ಸಮಾಜದಲ್ಲಿ ವಿಶೇಷವಾದ ಸ್ಥಾನವಿದೆ.ತಾವೆಲ್ಲರು ಕೊರೊನಾ ಸಂದರ್ಭದಲ್ಲಿ ಮಾಡಿದ ಕಾರ್ಯ ಅಮೋಘವಾಗಿದೆ ಎಂದರು.ಅಲ್ಲದೆ ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿಯೇ ಅದ್ಭುತವಾಗಿ ಜನರ ಸೇವೆ ಮಾಡಿದ ಶಾಸಕ ರಾಜುಗೌಡರ ಸೇವೆ ಅನನ್ಯ,ಅದನ್ನು ಗುರುತಿಸಿ ಇಂದು ಕಾಯಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಿರುವುದು ಅಮೋಘವಾಗಿದೆ.ಬೇರೆ ಯಾರಾದರು ಪ್ರಶಸ್ತಿಗಳನ್ನು ಕೊಡುವುದಕ್ಕಿಂತ ಪತ್ರಕರ್ತರು ಗುರುತಿಸಿ ಪ್ರಶಸ್ತಿ ನೀಡಿರುವುದು ಮೌಲ್ಯ ಹೆಚ್ಚಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಮಾದ್ಯಮ ಭೂಷಣ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತರ ದೇವಯ್ಯ ಗುತ್ತೇದಾರ ಮಾತನಾಡಿ,ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿಯೆ ಶಾಸಕ ರಾಜುಗೌಡ ಅವರು ಮಾಡಿದ ಸೇವೆ ಮೆಚ್ಚುವಂತದ್ದು,ಅದನ್ನು ಗುರುತಿಸಿ ನೀಡಿರುವ ಪ್ರಶಸ್ತಿಯು ಸೂಕ್ತವಾಗಿದೆ ಎಂದರು.ಅಲ್ಲದೆ ರಾಜ್ಯದಲ್ಲಿ ಸುರಪುರಕ್ಕೂ ಉತ್ತಮವಾದ ಇತಿಹಾಸವಿದೆ,ಅದರ ಮೇಲೆ ಬೆಳಕು ಚೆಲ್ಲುವ ಕೆಲಸ ಆಗಬೇಕಿದೆ.ಆ ನಿಟ್ಟಿನಲ್ಲಿ ಶಾಸಕ ರಾಜುಗೌಡ ಕೆಲಸ ಮಾಡಬೇಕು ಮತ್ತು ಸುರಪುರ ಇತಿಹಾಸದ ಕುರಿತು ಚಲನಚಿತ್ರ ಮಾಡುವುದು ಅವಶ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆರಂಭದಲ್ಲಿ ಕೊರೊನಾ ಸಂದರ್ಭದಲ್ಲಿ ಅಗಲಿದ ಎಲ್ಲಾ ಪತ್ರಕರ್ತರಿಗೆ ಹಾಗು ಮೃತಪಟ್ಟ ಜನರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಮೌನಾಚರಣೆ ನಡೆಸಲಾಯಿತು.ನಂತರ ಶಾಸಕ ರಾಜುಗೌಡ ಅವರಿಗೆ ಕಾಯಕ ಭೂಷಣ ಹಾಗು ಪತ್ರಕರ್ತ ದೇವಯ್ಯ ಗುತ್ತೇದಾರ ಅವರಿಗೆ ಮಾದ್ಯಮ ಭೂಷಣ ಇಬ್ಬರಿಗೂ ರಾಜ್ಯ ಮಟ್ಟದ ಪ್ರಶಸ್ತಿ ಜೊತೆಗೆ ಜಿಲ್ಲಾ ದೃಶ್ಯ ಮಾದ್ಯಮ ವರದಿಗಾರ ನಾಗಪ್ಪ ಮಾಲಿ ಪಾಟೀಲಗೆ ಸೋಮಶೇಖರ ನರಬೋಳಿ ಪ್ರಶಸ್ತಿ ಹಾಗು ಪತ್ರಕರ್ತ ಅನಿಲ ಬಸೂದೆಗೆ ವೆಂಕಟೇಶ ದೊರೆ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಅಲ್ಲದೆ ಅಲ್ಲದೆ ವೈದ್ಯರಾದ ಟಿಹೆಚ್‌ಒ ಡಾ:ಆರ್.ವಿ.ನಾಯಕ, ಡಾ:ಓಂಪ್ರಕಾಶ ಅಂಬುರೆ,ಡಾ:ಶಫಿ ಉಜಮ್,ಡಾ:ಅಲ್ಲಾವುದ್ದೀನ್,ಡಾ:ಸ್ಮೀತಾ ಓಂಪ್ರಕಾಶ ಅಂಬುರೆ ವಾರಿಯರ್ಸ್‌ಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ,ಜಿ.ಪಂ.ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಎಪಿಎಮ್‌ಸಿ ಅಧ್ಯಕ್ಷ ದುರ್ಗಪ್ಪ ಗೋಗಿಕೆರಾ, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ ವೆಂಕಟೇಶ ಉಗಿಬಂಡಿ,ತಾ.ಪಂ.ಇಒ ಅಮರೇಶ ಮೂಡಲದಿನ್ನಿ,ನಗರಸಭೆ ಪೌರಾಯುಕ್ತ ಜೀವನ ಕಟ್ಟಿಮನಿ, ಕೆಜೆಯು ರಾಜ್ಯ ಉಪಾಧ್ಯಕ್ಷ ವೀರಣ್ಣ ಕಲಕೇರಿ,ಕೆಜೆಯು ಜಿಲ್ಲಾ ಉಪಾಧ್ಯಕ್ಷ ಬಾಲಪ್ಪ ಕುಪ್ಪಿ ಸೇರಿದಂತೆ ಅನೇಕರಿದ್ದರು.ಕೆಜೆಯು ಜಿಲ್ಲಾಧ್ಯಕ್ಷ ಡಿ.ಸಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಅಧ್ಯಕ್ಷ ರಾಜು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು,ರಾಹುಲ ಹುಲಿಮನಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಲ್ಲು ಗುಳಗಿ,ಧೀರೇಂದ್ರ ಕುಲಕರ್ಣಿ, ಪರಶುರಾಮ ಮಲ್ಲಿಬಾವಿ,ಮನಮೋಹನ ದೇವಾಪುರ,ಶ್ರೀಮಂತ ಚಲುವಾದಿ,ಮಾಳಪ್ಪ ಕಿರದಹಳ್ಳಿ,ಮಹಾದೇವಪ್ಪ ಬೊಮ್ಮನಹಳ್ಳಿ,ಕಲೀಂ ಫರೀದಿ,ಪುರುಷೋತ್ತಮ ದೇವತ್ಕಲ್,ರಾಘವೇಂದ್ರ ಮಾಸ್ತರ,ಮೌನೇಶ ಮಂಗಿಹಾಳ,ಭೀಮು ಕರ್ನಾಳ ಸೇರಿದಂತೆ ಕೆಂಭಾವಿ ಮತ್ತು ಹುಣಸಗಿಯ ಎಲ್ಲಾ ಪತ್ರಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here