ಮೂರು ಜನ ರೋಡ್ ರಾಬರಿಗಾರರ ಬಂಧನ ಹಣ ಜಪ್ತಿ

0
218

ತಾಲೂಕಿನ ಬಿಜಾಸಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನಗಳ ತಡೆದು ರಾಬರಿ ಮಾಡುತ್ತಿದ್ದ ಮೂವರು ಕಳ್ಳರನ್ನು ಸುರಪುರ ಠಾಣೆ ಪೊಲಿಸರು ಬಂಧಿಸಿದರು.

ಸುರಪುರ: ತಾಲೂಕಿನ ಬಿಜಾಸಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ರಾತ್ರಿ ೩:೩೦ರ ಸುಮಾರಿಗೆ ಮೂರು ಜನ ದರೋಡೆಕೋರರು ಹೆದ್ದಾರಿ ಮೇಲೆ ಹೋಗುತ್ತಿರುವ ವಾಹನಗಳ ಮೇಲೆ ದಾಳಿ ಮಾಡಿ ಗಾಡಿಯಲ್ಲಿರುವವರಿಂದ ಹಣ ಕಿತ್ತಿಕೊಳ್ಳುತ್ತಿದ್ದ ಕಳ್ಳರನ್ನು ಸುರಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Contact Your\'s Advertisement; 9902492681

ಭಾನುವಾರ ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶನಿವಾರ ರಾತ್ರಿ ಬಳ್ಳಾರಿಯಿಂದ ಸಿಂಧನೂರು ಶಹಾಪುರ ಮಾರ್ಗವಾಗಿ ಜೇವರ್ಗಿಗೆ ಹೋಗುತ್ತಿದ್ದ ತತ್ತಿ ತುಂಬಿದ ಲಾರಿಯೊಂದನ್ನು ಬಿಜಾಸಪುರ ಬಳಿಯ ರಸ್ತೆಯ ತಿರುವಿನಲ್ಲಿ ಲಾರಿಯ ಗ್ಲಾಸಿಗೆ ರಾಡಿನಿಂದ ಹೊಡೆದಿದ್ದಾರೆ ಹಾಗು ಕಲ್ಲು ತೂರಿ ವಾಹನದ ಚಾಲಕ ಮತ್ತು ಕ್ಲೀನರ್‌ನಿಂದ ನಾಲ್ಕು ಸಾವಿರ ರೂಪಾಯಿ ಕಿತ್ತಿಕೊಂಡು ಪರಾರಿಯಾಗುತ್ತಿದ್ದಾಗ ಸ್ಥಳಕ್ಕೆ ಧಾವಿಸಿದ ಪೊಲೀಸರು ತಪ್ಪಿಸಿಕೊಂಡು ಓಡುತ್ತಿದ್ದ ಮೂವರು ದರೋಡೆಕೋರರನ್ನು ಬೆನ್ನಟ್ಟಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.ಪಿ.ಐ ಆನಂದರಾವ್ ಉಪಸ್ಥಿತರಿದ್ದರು.

ಹೇಳಿಕೆ ಡಿವಾಯ್ ಎಸ್ ಪಿ ಫೋಟೊದೊಂದಿಗೆ ಹಾಕಿಕೊಳ್ಳಿ ಇವರು ಈ ಹಿಂದೆಯೂ ವೆಂಕಟಾಪುರ ಬಳಿಯ ಸೀಬಾರಬಂಡಿ ಬಳಿಯಲ್ಲಿ ರಾತ್ರಿ ರಾಬರಿಗೆ ಹೊಂಚು ಹಾಕಿ ಕುಳಿತಿದ್ದಾಗ ದಾಳಿ ಮಾಡಲಾಗಿತ್ತು.ತಪ್ಪಿಸಿಕೊಂಡಿದ್ದರು ಇವರ ಬಂಧನಕ್ಕೆ ಆರು ತಿಂಗಳ ಹಿಂದಿನಿಂದಲೂ ಪ್ರಯತ್ನಿಸುತ್ತಿದ್ದೆವು ಈಗ ಸಿಕ್ಕಿಕೊಂಡಿದ್ದಾರೆ.ಇವರು ಇನ್ನೂ ಬೇರೆ ಬೇರೆ ಪ್ರಕರಣಗಳಲ್ಲಿರುವ ಬಗ್ಗೆ ತನಿಖೆ ಮಾಡುತ್ತೆವೆ.                                                    -ಶಿವನಗೌಡ ಪಾಟೀಲ ಡಿವಾಯ್‌ಎಸ್‌ಪಿ ಸುರಪುರ

ಈ ವಾಹನಕ್ಕಿಂತಲು ಮೊದಲು ಎರಡು ವಾಹನಗಳ ಮೇಲೆ ಇದೇ ರೀತಿಯ ದಾಳಿ ಯತ್ನ ನಡೆಸಿ ವಿಫಲರಾಗಿದ್ದಾರೆ.ಇವರಿಂದ ತಪ್ಪಿಸಿಕೊಂಡ ವಾಹನಗಳ ಚಾಲಕರು ಹತ್ತಿಗುಡೂರು ದಾಬಾ ಬಳಿಯಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಸ್.ಪಿ ಋಷಿಕೇಶ ಭಗವಾನ ಹಾಗು ಡಿವಾಯ್‌ಎಸ್‌ಪಿ ಶಿವನಗೌಡ ಪಾಟೀಲರ ಮಾರ್ಗದರ್ಶನದಲ್ಲಿ ಪಿ.ಐ ಆನಂದರಾವ್ ಅವರು ನೇತೃತ್ವ ವಹಿಸಿ ಪಿಎಸ್‌ಐ ಶರಣಪ್ಪ ಹವಲ್ದಾರ ,ಎ.ಎಸ್.ಐ ಸುರೇಶ ,ಹೆಚ್.ಸಿ ಚಂದ್ರಶೇಖರ,ಬಸವರಾಜ,ಸುಭಾಸ ಹಾಗು ಸೋಮಯ್ಯ ಇವರುಗಳ ತಂಡವು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ನಾಲ್ಕು ಸಾವಿರ ರೂಪಾಯಿ ಒಂದು ಪಲ್ಸ್‌ರ್ ಮೋಟರ್ ಬೈಕ್ ಹಾಗು ರಾಬರಿಗೆ ಬಲಸಿದ್ದ ರಾಡು ಮತ್ತು ಕಲ್ಲುಗಳನ್ನು ಜಪ್ತಿ ಮಾಡಿದ್ದಾರೆ.ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೂರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here