ಸ್ವಾಭಿಮಾನದ ಮತ ಚಲಾಯಿಸಿ ಕಾಂಗ್ರೆಸ್ ಗೆಲ್ಲಿಸಿ, ರಾಜ್ಯ- ದೇಶವನ್ನ ಕಾಪಾಡಿ: ಡಾ. ಮಲ್ಲಿಕಾರ್ಜುನ್ ಖರ್ಗೆ

0
21

ಕಲಬುರಗಿ/ ಜೇವರ್ಗಿ: ಕರ್ನಾಟಕ ಅಸಂಬ್ಲಿ ಚುನಾವಣೆಯಲ್ಲಿ ಸ್ವಾಭಿಮಾನದ ಮತ ಕಾಂಗ್ರೆಸ್ ಪಕ್ಷದ ಪರ ಚಲಾಯಿಸಿ ರಾಜ್ಯದ ಭವಿಷ್ಯ ಕಾಪಾಡಿರಿ, ದೇಶದ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕಿರಿ ಎಂದು ಎಐಸಿಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

ಜೇವರ್ಗಿ ಮತಕ್ಷೇತ್ರದ ಡ್ರಾಮಿಯಲ್ಲಿ ಶುಕ್ರವಾರ ಭವ್ಯ ಮೆರವಣಿಗೆ, ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಡಾ. ಅಜಯ್ ಸಿಂಗ್ ಪರ ಮತ ಯಾಚಿಸಿ ಮಾತನಾಡಿದ ಅವರು ದೇಶದ, ರಾಜ್ಯದ ಭವಿಷ್ಯ ಬರೆಯಲು ಇದು ಮಹತ್ವದ ಚುನಾವಣೆಯಾಗಿದೆ. ಬಿಜೆಪಿಯವರ ಸುಳ್ಳನ್ನ್ನೇ ನಂಬಿ ಕಮಲಕ್ಕೆ ಮತ ಹಾಕದೆ ಸ್ವಾಭಿಮಾನಿಯಾಗಿ ಮತ ಹಾಕಿ ಬಡವರ, ದೀನ ದಲಿತರ, ರೈತರ ಪರವಾಗಿರುವಂತಹ ಕಾಂಗ್ರೆಸ್ ಪಕ್ಷವನ್ನ ಗೆಲ್ಲಿಸಿರಿ ಎಂದು ಕರೆ ನೀಡಿದರು.

Contact Your\'s Advertisement; 9902492681

ನಿಮ್ಮೆಲ್ಲರ ಮತ ರೂಪದ ಆಶಿರ್ವಾದ ಎಲ್ಲಿಯವರೆಗೂ ಡಾ. ಅಜಯ್ ಸಿಂಗ್ ಹಾಗೂ ತಮ್ಮ ಮೇಲೆ ಇರುವುದೋ ಅಲ್ಲಿಯವರೆಗೂ ಯಾರೂ ಕೈ ಹಚ್ಚಲು ಸಾಧ್ಯವಿಲ್ಲ ಎಂದು ಗುಡುಗಿದ ಖರ್ಗೆ ವಿಮಾನ, ಹೆಲಿಕಾಪ್ಟರ್‍ನಿಂದ ಹಕ್ಕಿ ಹಾರಿದಹಂಗ ಹಾರುತ್ತ ಬರುತ್ತಿರುವ ಬಿಜೆಪಿ ನಾಯಕರ ಬಣ್ಣದ ಮಾತಿಗೆ ಮರುಳಾಗದಂತೆ ಸಲಹೆ ನೀಡಿದರು. ತಾವೀಗ ನೆಹರು, ಬೋಸ್, ಪಟೇಲ್, ಗಾಂಧೀಜಿ ಕುಳಿತ ಎಐಸಿಸಿಸಿ ಗಾದಿಯಲ್ಲಿ ಕುಳಿತಿರೋದಾಗಿ ಹೇಳುತ್ತಲೇ ತಮ್ಮ ಗೌರವ ಹೆಚ್ಚಿಸಲು ಹೆಚ್ಚಿನ ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವಂತಾಗಬೇಕು. ಅದಕ್ಕೆ ತವರಿನ ಜನ ಬೆಂಬಲವಾಗಿ ನಿಲ್ಲಬೇಕು ಎಂದರು.

ಇಡೀ ದಶ ಕರ್ನಾಟಕದ ಕಡೆ ನೋಡುತ್ತಿದೆ. ಮೋದಿ ಗುಜರಾತಿನಲ್ಲಿ ಹೋದಾಗ ಜನರಿಗೆ ನಾನು ಇಲ್ಲಿನ ಮಣ್ಣಿನ ಮಗ, ಮತ ಹಾಕಿರಂದು ಕೋರಿದ ಮರುಕ್ಷಣವೇ ಅಲ್ಲಿನ ಜನ ಮೋದಿಗೆ ಮತ ಹಾಕಿದದಾರೆ. ನಾನು ಇಲ್ಲಿನ ಮಣ್ಣಿನ ಮಗ, ನೀವು ನಮಗ ಉಡಿಯಲ್ಲಿ ಹಾಕಿಕೊಳ್ಳಿ, ನನಗೂ ಆರಿಸಿ ತನ್ನಿ, ನಮ್ಮ ಪಕ್ಷಕ್ಕೆ ಮತ ಹಾಕಿರಿ. ಪಾಲಿಕೆ, ಎಂಎಲ್‍ಎ ಇಲೆಕ್ಷನ್‍ದಾಗ ಪ್ರಧಾನಿ ಹೇಳಿದ ಮಾತಿದು.

ನಾನೂ ಮಣ್ಣಿನ ಮಗ, ಇಲ್ಲೇ ಹುಟ್ಟಿದವ, ಗುಜರಾತಿನಲ್ಲಿ ಓದಿಗೆ ಏನು ಹಕ್ಕಿದೆಯೋ ಅದೇ ಹಕ್ಕು ರಾಜ್ಯದಲ್ಲಿ ನದಗಿಗೆ. ಹೀಗಾಗಿ ನೀವು ನನಗೆ, ನನ್ನ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿರಿ, ನಮಗೆ ಶಕ್ತಿ ತುಂಬಿರಿ, ಇದು ನೀವು ಮಾಡಲಿಲ್ಲವೆಂದರೆ ನನಗೆ, ಕಾಂಗ್ರೆಸ್‍ಗೆ ಧಿ. ಧರಂಸಿಂಗ್ ಅವಗಿ,ಎ 2 ಬಾರಿ ಶಾಸಕರಾಗಿರುವ ಡಾ. ಅಜಯ್ ಸಿಂಗ್ ಅವರಿಗೆ ಎಲ್ಲರಿಗೂ ಮಾಡುವ ಅವಮಾನ ಎಂದರು.

ನಿಮ್ಮ ಸುಖ- ದುಃಖದಲ್ಲಿ, ಸಂಕಷ್ಟದಲ್ಲಿ, ಕೋವಿಡ್ ಸಮಯದಲ್ಲಿ ಡಾ. ಅಜಯ್ ಸಿಂಗ್ ಜೊತೆಗಿದ್ದರು. ನೀವು ಏನೇ ಇದ್ದರು ಕೆಲಸ ಬದಿಗೊತ್ತ ಮತದಾನ ಮಾಡಿರಿ. ಹಸ್ತದ ಗುರಿತಿಗೆ ಮತ ಹಾಕಿರಿ. ಆಗ ಖರೆ ನಿಮ್ಮ ಪ್ರೀತಿ ತೋರಿಸಿದ್ಹಂಗೆ ಅಗ್ತದೆ. ಕೂಗು- ಚಪ್ಪಾಳೆಗಿಂತ ನಿಮ್ಮ ಮತ ನಮಗೆ ಮುಖ್ಯವೆಂದರು.

ಇಡೀ ದೇಶದಲ್ಲಿ ಡಾ ಖರ್ಗೆವರ ಮಾರ್ಗದರ್ಶನಲ್ಲಿ ಕಾಂಗ್ರೆಸ್ ಪಕ್ಷ ಸಾಗಿದೆ. ರಾಜ್ಯದಲ್ಲಿ ಬಹುಮತ ಗಳಿಸಿ ಸರ್ಕಾರ ರಚಿಸಲಿದೆ ಎಂದ ಡಾ. ಅಜಯ ಸಿಂಗ್ ತಮ್ಮ ತಂದೆ ಧರಂಸಿಂಗ್ ಹಾಗೂ ಖರ್ಗೆಯವರ ಗೆಳೆಯತನವನ್ನು ಸ್ಮರಿಸಿದರು.

ಇಡೀ ರಾಜ್ಯ, ದೇಶ, ದೆಹಲಿಯವರು ಖರ್ಗೆವರು ಮತ್ತು ಧರಂಸಿಂಗ್ ಅವರ ಗೆಳೆಯತನಕ್ಕೆ ಅಚ್ಚರಿಪಡುತ್ತಿದ್ದರು. ಧರಂಸಿಂಗ್, ಖರ್ಗೆ 2 ಕಣ್ಣು ಇದ್ದಂತೆ ಇದ್ದರು. ಈಗ 1 ಕಣ್ಣು ಕಳೆದುಕೊಂಡಿz್ದÉೀವೆ. ಖರ್ಗೆಯವರ ಮಾರ್ಗದಶನದಲ್ಲಿ ಸಾಗುತ್ತಿz್ದÉೀವೆ. ಜನತೆ ಕಾಂಗ್ರೆಸ್‍ಗೆ ಬೆಂಬಲಿಸಬೇಕು ಎಂದರು.

2014 ರಲ್ಲಿ ಮೋದಿಯವರು ಬೀದರ್‍ಗೆ ಬಂದು ಅಲ್ಲಿ ಧರಂಸಿಂಗ್ ಗುರಿಯಾಗಿಸಿ ಚುನಾವಣೆ ಮಾಡಿದ್ದರು. 2019ರಲ್ಲಿ ಕಲಬುರಗಿಗೆ ಬಂದು ಖರ್ಗೆಯವರನ್ನ ಗುರಿಯಾಗಿಸಿದ್ದರು ಈಗ ಪ್ರಿಯಾಂಕ್ ಗುರಿಯಾಗಿಸಿ ಚಿತ್ತಾಪುರಕ್ಕೆ ಬರೋದಿತ್ತು, ಅದೂ ರದ್ದಾಯ್ತು, ನನ್ನನ್ನು ಗುರಿಯಾಗಿಸಿ ಅಮೀತ್ ಷಾ ಜೇವರ್ಗಿಗೆ ಬರೋದು ರದ್ದಾಯ್ತು ಎಂದರು. ಇಂತಹ ರಾಜಕಾರಣ ಬೇಡ. ಜನರ ವಿಶ್ವಾಸ ಗಳಿಸುವ ರಾಜಕಾರಣ ಮಾಡೋಣ. ಕಾಂಗ್ರೆಸ್ ಗೆಲ್ಲಿಸಿ ಖರ್ಗೆಯವರಿಗೆ ಶಕ್ತಿ ತುಂಬೋಣ ಎಂದರು.

ಸಂಸದ ನಿಸಾರ್ ಅಹ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕ್ಕುಂ ಪಟೇಲ್, ಸಿದ್ದಲಿಂಗರೆಡ್ಡಿ ಇಟಗಿ, ರಾಜಶೇಖರ ಸಿರಿ, ಕೇದಾರಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here