ಕಲಬುರಗಿ/ ಜೇವರ್ಗಿ; ನೆಲೋಗಿ ಜಿಪಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಾದ ಇಟಗಾ ಬೋಸಗಾ ಕೆ , ಬೋಸಗಾ ಬಿ, ಅಂಕಲಗಾ, ಹಂಚಿನಾಳ ಎಸ್ ಎನ್, ಮೊಗನ ಇಟಗಾ ಹರಾನಾಳ್ ಕೆ , ಹುಲ್ಲೂರ್ ಹಾಗೂ ನಾರಾಯಣಪುರದಲ್ಲೆಲ್ಲಾ ಕಾಂಗ್ರೆಸ್ ಹುರಯಾಳು ಡಾ. ಅಜಯ್ ಸಿಂಗ್ ತಮ್ಮ ಅಪಾರ ಬೆಂಬಲಿಗರೊಂದಿಗೆ ರೋಡ್ ಷೋ ನಡೆಸಿದರು ಹಾಗೂ ಮನೆ ಮನೆ ಸುತ್ತಿ ಕಾಂಗ್ರೆಸ್ ಗ್ಯಾರಂಟಿಯೋಜನೆಗಳ ಬಗ್ಗೆ ಹೇಳುತ್ತ ಮತ ಯಾಚಿಸಿದರು.
ಡಾ. ಅಜಯ್ ಸಿಂಗ್ ಹೋದ ಹಳ್ಳಿಗಳಲ್ಲೆಲ್ಲಾ ಜನರು ತಾವೇ ಆರತಿ ಎತ್ತಿ, ವೀರ ತೀಲಕವನ್ನಿಟ್ಟು ಡಾ. ಅಜಯ್ ಅವರಿಗೆಗೆಲುವಿನ ಅಯ ನೀಡಿದರಲ್ಲದೆ ಜೇವರ್ಗಿ ಪ್ರಗತಿ ನಿರಂತರ ಸಾಗಲು ನೀಮ್ಮ ನಾಯಕತ್ವ ನಮಗೆ ಬೇಕೇಬೇಕು, ನಿಮ್ಮ ಗೆಲುವು ನಿಶ್ಚಿತ ಎಂದು ಹಾರೈಸಿದ ನೋಟಲು ಕಂಡವು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರತಿ, ಕಲಶಗಳೊಂದಿಗೆ ಬಂದು ಆರತಿ ಎತ್ತಿ ಹರಸಿದರು.
ಈ ಸಂದರ್ಭದಲ್ಲಿ ಮುಖಂಡರು ಕೇದಾರಲಿಂಗಯ್ಯ್ ಹಿರೇಮಠ್ ಸಂಗಣ್ಣ ಇಟಗಾ, ಬೈಲಪ್ಪ ನೆಲೋಗಿ , ಶರಣು ಬಿಲ್ಲಾಡ್, ನರಸಿಂಗ್ ರಾವ್ ತಿವಾರಿ ಭಗವಂತರಾಯ್ ಗೌಡ ಅಂಕಲಗಾ ಮಲ್ಲಿಕಾರ್ಜುನ ಪಾಟೀಲ್, ಸಂಗಣ್ಣ ಇಟಗಾ ರಾಜಶೇಖರ್ ಚೂರಿ ವಿಜಯ್ ಕುಮಾರ ಹಿರೇಮಠ್ ಪ್ರತಾಪ್ ಕಟ್ಟಿ, ಲಕ್ಷ್ಮಣ್ಗೌಡ ಬಿರಾದಾರ್, ಅಣ್ಣಪ್ಪಗೌಡ ಪಾಟೀಲ್, ಸಿದ್ದಣ್ಣ ಸುರಪುರ, ಮಲ್ಲಿಕಾರ್ಜುನ ಬುದಿಹಾಳ್, ಮತ್ತನಗೌಡ ಬಿರಾದಾರ್ ಹುಲ್ಲೂರ್, ರಾಜು ಮೆಂಬರ್ ಮಲ್ಲಪ್ಪ ಕೆಂಚಬಾ, ಕಲ್ಲಪ್ಪ ಹಿಪ್ಪರಗಿ ಗುರುಗೌಡ ಲಕಮಾಂಡ್ ಸೈಫನ್ ಸಾಬ್ ಮುಲ್ಲಾ ಹುಸಿನ್ ಮನಿಯಾರ್, ಕಲ್ಲಪ್ಪ ಗೌಡ ಕಲ್ಲಶೆಟ್ಟಿ ದುಂಡಡಪ್ಪ ಗೌಡ ಪಾಟೀಲ್ ಸಿದ್ದಲಿಂಗ ಸಾಹೂ ಅಂಗಳಗಿ ಸೋಮಲಿಂಗಪ್ಪ ಪೆÇಲೀಸ್ ಪಾಟೀಲ್ ಕಮಾರ್ ಯಲಬಾ ಅನ್ವರ್ ಅತ್ತಾರ , ಮಲ್ಲು ಯಾತನೂರ್, ನಿಂಗಣ್ಣ ಚಿಗರಿ ಬಶೀರ್ ಸಾಬ್ ಜಾಕಾತಿ ಬಂದೆನವಜ್ ಯಾತನೂರ್ ಇದ್ದರು.
ಇತ್ತ ಕೋಳಕೂರ್ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೋಳಕೂರ್ ಹಾಗೂ ಮದರಿ ಊರುಗಳಲ್ಲಿ ತೆರಳಿ ಡಾ. ಅಜಯ್ ಸಿಂಗ್ ಗೆಲುವಿಗಾಗಿ ಮುಖಂಡರು ವಿನೂತನ ಪ್ರಚಾರ ನಡೆಸಿ ಗಮನ ಸೆಳೆದರು. ಕೆಪಿಸಿಸಿ ಮಾಜಿ ಸದಸ್ಯ ಹಣಮಂತರಾವ ಭೂಸನೂರ್, ಮುಖಂಡರಾದ ರಾಜಶೇಖರ ಸಿರಿ ಸೇರಿದಂತ ಹಲವರು ಮದರಿ ಊರ ಮುಂದಿನ ಹೊಲದಲ್ಲಿ ನಡೆಯುತ್ತಿದ್ದ ಬದುವು ನಿರ್ಮಾಣದ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿರಲ್ಲದೆ, ಚುನಾವಣೆಯಲ್ಲಿ ಖಾತ್ರಿ ಯೋಜನೆ ದೇಶಕ್ಕೆ ಕೊಡುಗೆ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಶಕ್ತಿ ತುಂಬುವಂತೆ ಕೋರಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಕಾರ್ಮಿಕರಿಗೆ ಅವರಿರುವ ಊರಲ್ಲೇ ಕೆಲಸ ನೀಡುವ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು. ಅದೀಗ ದೇಶಾದ್ಯಂತ ಕಾರ್ಮಿಕ ಕುಟುಂಬಗಳಿಗೆ ನೆಲೆ ಒಗಿಸಿದೆ. ಈ ಹಂತದಲ್ಲಿ ಕಾರ್ಮಿಕರು ತಮಗೆ ಕೆಲಸ ನೀಡಿರುವ ಪಕ್ಷಕ್ಕೆ ಮತ ಹಾಕೋದಾಗಿ ಭರವಸೆ ನೀಡಿದರು.