ಶಾಸಕಿ ಕನೀಜ್ ಫಾತಿಮಾಗೆ ವರ್ತಕರ ಬೆಂಬಲ

0
56

ಕಲಬುರಗಿ: ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ಎಲ್ಲ ಮುಸ್ಲಿಂ ಸಮಾಜದ ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಹಾಲಿ ಶಾಸಕಿ ಹಾಗೂ ಮಾಜಿ ಮಂತ್ರಿ ದಿ. ಖಮರುಲ್ ಇಸ್ಲಾಂ ಅವರ ಪತ್ನಿ ಶಾಸಕಿ ಕನೀಜ್ ಫಾತಿಮಾ ಅವರಿಗೆ ಬೆಂಬಲ ನೀಡಲು ನಿರ್ಧರಿಸಿದರು.

ನಗರದಲ್ಲಿ ಭಾನುವಾರ ನಡೆದ ಮುಸ್ಲಿಂ ಸಮುದಾಯದ ಸಭೆಯಲ್ಲಿ ಇಂಥದೊಂದು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಆಯಾ ಸಮುದಾಯಗಳ ಹಿತ ಕಾಪಾಡುವಲ್ಲಿ ಕನೀಝ್ ಫಸತಿಮಾ ಅವರು ಯಶಸ್ವಿಯಾಗಿದ್ದಾರೆ. ಆದರೆ, ಮುಂಬರುವ ದಿನಗಳಲ್ಲಿ ಎಲ್ಲ ವರ್ಗದ ಜಾತಿ ಸಮುದಾಯಗಳ ಜನರ ಹಿತ ಕಾಯುವುದು ಮತ್ತು ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಅವರ ಕೈ ಬಲಪಡಿಸುವ ನಿಟ್ಟಿನಲ್ಲಿ ಇಂತಹದೊಂದು ಗಟ್ಟಿಯಾದ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮುಸ್ಲಿಂ ಮುಖಂಡ ಹಾಗೂ ಖ್ಯಾತ ಉದ್ಯಮಿ ಕರೀಮ್ ಮಂಚಾಲಿ ಅಭಿಪ್ರಾಯ ವ್ಯಕ್ತಪಡಿಸಿದರು.

Contact Your\'s Advertisement; 9902492681

ದಮನಕಾರಿ ಹಾಗೂ ದುಷ್ಟ ಶಕ್ತಿಗಳನ್ನು ಕಟ್ಟಿ ಹಾಕಬೇಕಾದರೆ ಎಲ್ಲರೂ ಒಗ್ಗೂಡಬೇಕಾದ ಅವಶ್ಯಕತೆ ಇತ್ತು. ಕಳೆದ ಐದು ವರ್ಷ ರಾಜ್ಯ ಹಾಗೂ ದೇಶದಲ್ಲಿ ಅಲ್ಪಸಂಖ್ಯಾತ ಹಾಗೂ ಶೋಷಿತರ ವಿರುದ್ಧ ಕೈಗೊಂಡ ನಿರ್ಣಯಗಳಿಂದಾಗಿ ಜೀವನ ನಡೆಸುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಅಂತಹ ಮತೀಯ ಶಕ್ತಿಗಳನ್ನು ದೂರ ಇಡಬೇಕಾದರೆ, ಚುನಾವಣೆ ಸಂದರ್ಭದಲ್ಲಿ ಮತದಾನದ ಹಕ್ಕನ್ನು ಸಮರ್ಪಕವಾಗಿ ಎಲ್ಲ ಮುಸ್ಲಿಂ ಬಾಂಧವರು ಬಳಕೆ ಮಾಡುವ ಮೂಲಕ ತಡೆಗಟ್ಟಬೇಕಾಗಿದೆ ಎಂದರು.

ಸಮಾಜ ಚಿಂತಕ ಹಾಗೂ ಬಹಗಾರ ಪ್ರೊಫೆಸರ್ ಆರ್. ಕೆ. ಹುಡುಗಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ದೇಶದಲ್ಲಿ ಕೋಮುವಾದಿಗಳ ಅಟ್ಟಹಾಸದಿಂದ ಜನಸಾಮಾನ್ಯರ ಬದುಕು ಶಾಂತಿ ಕಳೆದುಕೊಂಡಿದೆ. ಬೆಲೆ ಏರಿಕೆಯಿಂದಾಗಿ ಸಣ್ಣ,ಸಣ್ಣ ಸ್ವಯಂ ಉದ್ಯೋಗಿಗಳು ಸೇರಿದಂತೆ ಶೋಷಿತರು, ಕಾರ್ಮಿಕರು, ಅಲ್ಪಸಂಖ್ಯಾತರು, ದಲಿತರು, ಹಾಗೂ ದುಡಿಯುವ ವರ್ಗ ಜೀವನ ನಡೆಸಲು ಪ್ರತಿನಿತ್ಯ ಹೋರಾಟ ಮಾಡಬೇಕಾಗಿದೆ. ಅಂತಹದೊಂದು ಕಷ್ಟಕಾರಿ ಪರಿಸ್ಥಿತಿಗೆ ದೂಡಿದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕಾದರೆ ಎಲ್ಲಾ ಕೆಳ ವರ್ಗದ ಜನ ಒಗ್ಗಟ್ಟಾಗಿ ಕಾಂಗ್ರೆಸ್ ಬೆಂಬಲಿಸುವಂತಹ ಕೆಲಸ ಆಗಬೇಕಿದೆ ಎಂದರು.

ದಲಿತ ವರ್ಗಗಳಲ್ಲಿ, ಅಲ್ಪಸಂಖ್ಯಾತದಲ್ಲಿ ಒಳಒಳಗೆ ಎಷ್ಟೇ ದುಸುಮುಸು ಇದ್ದರೂ, ವಿರೋಧ ಬಾಸ ಇದ್ದರೂ, ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ತಮ್ಮ ಬೇಳೆ ಬೇಯಿಸಿಕೊಳ್ಳುವಂತಹ ಶಕ್ತಿಗಳ ವಿರುದ್ಧ ಚುನಾವಣೆ ಸಂದರ್ಭದಲ್ಲಿ ನಾವು ಒಗ್ಗಟ್ಟಾಗಿ ಶಕ್ತಿ ಪ್ರದರ್ಶನ ಮಾಡಲೇಬೇಕು. ಅಂತಹದೊಂದು ಘಳಿಗೆಯಲ್ಲಿ ನೀವೆಲ್ಲರೂ ಸೇರಿ ದಿಟ್ಟ ನಿರ್ಧಾರವನ್ನು ಕೈಗೊಂಡು ಮಾನವೀಯ ಮೌಲ್ಯವನ್ನ ಎತ್ತಿ ಹಿಡಿದಿದ್ದಕ್ಕಾಗಿ ಮತ್ತು ಜಾತ್ಯಾತೀತ ಶಕ್ತಿ ತೋರಿಸಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.

ಈ ವೇಳೆಯಲ್ಲಿ ಆರಿಫ್ ಮನಿಯರ್, ಮುಜೀಬ್ ಹೆಲ್ಪರ್, ಜಾವೀದ್ ಸಾಬ್, ಜಮೀಲ್ (ಸೆಮಿನ ಕಲೆಕ್ಷನ್), ಅಲ್ತಾಫಾ ಇನಾಂದಾರ್, ಮೆಹಬೂಬ್ ಅಲಿ (ಮಹಾರಾಜ ಹೋಟೆಲ್) ಮುಜೀಬುದ್ದೀನ್, ಫಿರೋಜ್ ಬಾಗವಾನ್, ಉಸಮಾನ್ ಅಲಿ, ಜಾಕೀರ್ ಅಲಿ ಸಾಬ್ ಸೇರಿದಂತೆ ಭಾಂಡೆ ಬಜಾರ್ ಹಾಗೂ ಇತರೆ ವ್ಯಾಪಾರಿಗಳು ಮತ್ತು ಅಲ್ಪಸಂಖ್ಯಾತ ಎಲ್ಲ ವ್ಯಾಪಾರಿ ಹಾಗೂ ಉದ್ಯಮಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here