ಕೆಕೆಆರ್ಡಿಬಿಯಲ್ಲಿ 3000 ಕೋಟಿ ಅನುದಾನ ದುರ್ಬಳಕೆಯ ತನಿಖೆಗೆ ಶಾಸಕ ಅಲ್ಲಂಪ್ರಭು ಪಾಟೀಲ್ ಸ್ವಾಗತ

0
16

ಕಲಬುರಗಿ: ಬಿಜೆಪಿ ಅಧಿಕಾರ ಅವಧಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ 3000 ಕೋಟಿ ರುಪಾಯಿಗೂ ಹೆಚ್ಚಿನ ಅನುದಾನ ದುರ್ಬಳಕೆ ಪ್ರಕರಣದ ಸಮಗ್ರ ತನಿಖೆಗೆ ಆದೇಶ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲ್ ಸ್ವಾಗತಿಸಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಅವರು ಕೆಕೆಆರ್‍ಡಿಬಿ 3 ಸಾವಿರ ಕೋಟಿ ರು ಅನುದಾ ಬಳಕೆಯಲ್ಲಿ, ಕಕ ಮಾನವಾಭಿವೃದ್ಧಿ ಸಂಘದ ಅನುದಾನ ಬಳಕೆಯಲ್ಲಿ ಭಾರಿ ಅಕ್ರಮ, ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‍ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ತಕ್ಷಣ ಹಗರಣದ ಸಮಗ್ರ ತನಿಖೆಗೆ ಆದೇಶ ಮಾಡಿರೋದು ಸರಿಯಾಗಿದೆ.

Contact Your\'s Advertisement; 9902492681

ಹಗರಣದಲ್ಲಿ ಹಿಂದುಳಿದ ಬಾಗಕ್ಕೆ ದಕ್ಕಬೇಕಿದ್ದ ಸಾವಿರಾರು ಕೋಟಿ ರುಪಾಯಿ ಯಾರ್ಯಾರದ್ದೋ ಪಾಲಾಗಿದೆ. ಇದನ್ನು ನಾವು ಖಂಡಿಸಲೇಬೇಕು. ತನಿಖೆಯಿಂದ  ಹಿಂದುಳಿದ ಪ್ರದೇಶದ ಪ್ರಗತಿಗೆ ಒದಗಬೇಕಿದ್ದ ಹಣ ಹೇಗೆ ದುರ್ಬಳಕೆಯಾಗಿದೆ ಎಂಬುದು ಗೊತ್ತಾಗಲಿದೆ. ತಪ್ಪಿತಸ್ಥರು ಯಾರು ಎಂಬುದು ಹೊರಬಂದು ಅವರಿಗೆ ಕಾನೂನು ರೀತ್ಯಾ ಕಠಿಣ ಶಿಕ್ಷೆಯಾಗಲಿ. ಉಭಯ ಸಂಸ್ಥೆಗಳ ಹಿಂದಿನ ಅಧ್ಯಕ್ಷರು, ಕಾರ್ಯದರ್ಶಿಗಳೇ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಬಲವಾದ ಶಂಕೆಗಳಿರೋದರಿಂದ ಸರ್ಕಾರ ಆದಷ್ಟು ಬೇಗ ತನಿಖೆ ನಡೆಸಿ ಹಕೀಕತ್ತನ್ನು ಹೊರಗೆ ಎಳೆಯುವಂತಾಗಲಿ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಕೆಕೆಆರ್ಡಿಬಿ ಹಾಗೂ ಕಕ ಮಾನವಾಭಿವೃದ್ಧಿ ಸಂಘದಲ್ಲಿನ ಅಕ್ರಮಗಳು, ಕಾನೂನು ಉಲ್ಲಂಘನೆಯ ಪ್ರಕರಣಗಳನ್ನು ಸಿಎಜಿ ತನ್ನ ವರದಿಯಲ್ಲೂ ಸ್ಪಷ್ಟವಾಗಿ ನಮೂದಿಸಿದೆ.  ಜನರ ತೆರಿಗೆ ಹಣ ಹೀಗೆ ಹಗರಣದಲ್ಲಿ ಕಳೆದು ಹೋಗೋದು ಅದೆಷ್ಟು ಸರಿ? ತನಿಖೆ ನಡೆದು ತಪ್ಪಿತಸ್ಥರ ಸಮೇತ ವರದಿ ಹೊರಬರಲಿ. ಸರ್ಕಾರ ತಕ್ಷಣ ತಪ್ಪಿತಸ್ಥರಿಗೆ ಶಕ್ಷೆ ವಿಧಿಸಲಿ. ಸದರಿ ಹಗರಣದ ತನಿಖೆಯಾಗುವಂತೆ ನೋಡಿಕೊಂಡಿರುವ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಜನಪರ, ಹಿಂದುಳಿದ ನೆಲದ ಪ್ರಗತಿಯಾಗಬೇಕು ಎಂಬ ಕಾಳಜಿ, ಕಳಕಳಿಗೆ ನಾವು ಸದಾ ಋಣಿ. ಅನುದಾನ ಲೂಟಿಕೋರರ ಪಾಲಾಗದೆ ಈ ನೆಲದ ಪ್ರಗತಿಗೆ ಒದಗಲೇಬೇಕು. ಈ ವಿಚಾರದಲ್ಲಿ ಶಾಸಕರೆಲ್ಲರೂ ಪ್ರಿಯಾಂಕ್ ಅವರ ಜೊತೆಗರೋದಾಗಿಯೂ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here