ಸುರಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿಗಳಾದ ಶರಣಬಸಪ್ಪ ವಿ ನಿಷ್ಠಿ ಹಿರಿಯ ನ್ಯಾಯವಾದಿಗಳು ಅವರ ಮಾತನಾಡಿ, ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಶುಭಕೋರಿದರು ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ಸದಾಕಾಲ ಅವಕಾಶಗಳು ದೊರಕಿಬರುತ್ತವೆ ಆ ದೃಷ್ಠಿಯಿಂದ ಮಕ್ಕಳು ಒಳ್ಳೇಯ ನಡತೆ ಜ್ಞಾನ ಬೆಳಸಿಕೊಂಡರೆ ಜೀವನದಲ್ಲಿ ಯಶಸ್ಸು ಖಚಿತ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ ಡಾ. ಎಸ್ ಎ ಪಾಟೀಲ ಮಾಜಿ ಉಪಕುಲಪತಿಗಳು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ದಾರವಾಡ ಅವರ ಮಾತನಾಡಿ, ಕೃಷಿಯ ಮಹತ್ವದ ಬಗ್ಗೆ ಬಹಳ ದೀರ್ಘಕಾಲ ಮಾತನಾಡಿದರು ಹಾಗೂ ಈಗಿನ ಯುಗದಲ್ಲಿ ಅತೀ ಹೆಚ್ಚು ಓದಿಕೊಂಡವರೇ ವ್ಯವಸಾಯ ಮಾಡಲು ಇಚ್ಚಿಸುತ್ತಿದ್ದಾರೆ ಏಕೆಂದರೆ ಕೃಷಿಯಲ್ಲಿನ ಹೊಸ ತಂತ್ರಜ್ಞಾನಗಳು ಹೊಸ ವಿನಿಮಯಗಳು ಯುವಕರನ್ನು ಆಕರ್ಷಿಸುತ್ತಿವೆ ಮತ್ತು ವ್ಯವಸಾಯ ಮಾಡುವ ಮುಕಾಂತರ ನೀವು ಕೂಡ ಕೃಷಿ ಉದ್ಯಮಿ ಆಗಿ ಎಂದು ಕರೆ ಕೊಟ್ಟರು.
ಮತ್ತೊರ್ವ ಮುಖ್ಯಅತಿಥಿಗಳಾಗಿ ಆಗಮಿಸಿದ ಮಾಜಿ ಪ್ರಾಂಶುಪಾಲರಾದ ಡಾ. ಪಿ ಖಗೇಶನ ರವರು ಮಾತನಾಡಿ, ಇಂಜಿನಿಯರಿಂಗನ ಭಾಗಗಳಾದ ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ ಸೈನ್ಸ್ ಮತ್ತು ಮೆಕ್ಯಾನಿಕಲ್ ಕೋರ್ಸ್ಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ಮತ್ತು ಈ ಸ್ಪರ್ಧಾಯುಗದಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಉತ್ತಮ ಕೌಶಲ್ಯಗಳನ್ನು ಪ್ರದರ್ಶಿಸಿದರೆ ತಮ್ಮ ಜೀವನದ ಗುರಿಮುಟ್ಟಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು ಜೊತೆಗೆ ನಿಷ್ಠಿ ಮನೆತನದವರು ಈ ಭಾಗದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ 12ಎಕರೆ ಜಮೀನು ನೀಡುವ ಮುಕಾಂತರ ಬಹಳ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಅದಕೋಸ್ಕರ ಈ ಭಾಗದ ಜನಗಳ ಪರವಾಗಿ ನಿಷ್ಠಿ ಕುಟುಂಬದವರಿಗೆ ಅಭಿನಂದನೆಗಳನ್ನು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಸ ರಿ ಗ ಮ ಪ ಸೀಸನ್ 13ರ ವಿಜೇತರಾದ ಸುನಿಲ ಗುಜಿಗೊಂಡರವರು ಭಾಗಿಯಾಗಿ ಸುಮಧುರ ಹಾಡುಗಳ ಮುಖಾಂತರ ಸಂಗೀತದ ಔತಣವನ್ನು ಉಣಬಡಿಸಿದರು.
ಈ ಸಂದರ್ಭದಲ್ಲಿ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿಯವರು ಅತಿಥಿಗಳನ್ನು ಸ್ವಾಗತಿಸಿದರು. ಪರೀಕ್ಷಾ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ್ ಪಾಟೀಲ್, ಶೈಕ್ಷಣಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ಶರಣಗೌಡ ಪಾಟೀಲ್ ಮತ್ತು ಇತರ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕೇತರು ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರಿಗೆ ಮಹಾವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು ಮತ್ತು ಜ್ಞಾನಮಂಥನ-2023ರ ಅಡಿಯಲ್ಲಿ ಕ್ರೀಡೆಗಳು, ಟೆಕ್ನಿಕಲ್, ಫನ್ ಜೋನ್ ಮತ್ತು ಕಲ್ಚರಲ್ ಚಟುವಟಿಕೆಗಳು ಅಜೋಸಿಸಲಾಗಿತ್ತು. ಈ ಎಲ್ಲ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹಹುಮಾನ ವಿತರಣೆಗಳು ಜರುಗಿದವು.