ಕಲಬುರಗಿ: ಚಿಂಚೋಳಿ ಕ್ಷೇತ್ರದ ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದಲ್ಲಿ ಐತಿಹಾಸಿಕ ಮಹೆಬೂಬ್ ಸುಬಾನಿ ದರ್ಗಾದ ಪ್ರವೇಶ ದ್ವಾರಕ್ಕೆ ಪೊಲೀಸರು ಅಡ್ಡಲಾಗಿ ಕಟ್ಟಿರುವ ತಡೆಗೋಡೆ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಎಸ್.ಪಿ ಇಶಾಪಂತ್ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಯಲ್ಲಿ ನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ವಾಪಸ್ ಪಡೆಯಲಾಯಿತು.
ಬುಧವಾರ ರಟಕಲ್ ಗ್ರಾಮಕ್ಕೆ ಭೇಟಿ ನೀಡಿದ ಅವರು 9ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದ ಹೋರಾಟ ನಿರತ ಗ್ರಾಮಸ್ಥರೊಂದಿಗೆ ಮಾತನಾಡಿ ಒಂದು ವಾರ ರಜೆಯಲ್ಲಿ ಇರುವುದರಿಂದ ಗ್ರಾಮಕ್ಕೆ ಬರಲು ತಡವಾಗಿದೆ. ಎಲ್ಲಾ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ನಾನು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಶೀಘ್ರ ದರ್ಗಾಕ್ಕೆ ಇರುವ ಹಳೆ ದಾರಿ ಕಲ್ಪಿಸುವುದಾಗಿ ಭರವಸೆ ನೀಡಿದರು. ಗ್ರಾಮಸ್ಥರು ತಮ್ಮ ಬೇಡಿಕೆಗಳನ್ನು ಸ್ಪಷ್ಟವಾಗಿ ಮನವಿ ಮೂಲಕ ನೀಡಿ ಎಂದು ಕೇಳಿಕೊಂಡರು.
ರಟಕಲ್ ಗ್ರಾಮದಲ್ಲಿನ ದರ್ಗಾದ ವಿಷಯಕ್ಕೆ ಸಂಬಂಧಿಸಿದಂತೆ ಒಂದುವಾರದಿಂದಲೂ ಗ್ರಾಮಸ್ಥರು ಬರುತ್ತಿದ್ದು, ಎಸ್.ಪಿ ಅವರು ರಜೆಯಲ್ಲಿದಿರುವುದರಿಂದ ಸಮಸ್ಯೆ ಇತ್ಯಾರ್ಥವಾಗಿಲ್ಲ. ಕಾನೂನು ಸೂವ್ಯವಸ್ಥೆ ಕಾಪಾಡು ಹಿದೃಷ್ಠಿಯಿಂದ ಎಸ್.ಪಿ ಅವರಿಗೆ ಸಂಪರ್ಕಿಸಿ ಸಮಸ್ಯೆ ಇತ್ಯರ್ಥಕ್ಕೆ ತಿಳಿಸಿದೆ. ಇಂದು ಎಸ್.ಪಿಗೆ ಮಾತನಾಡಿದಾಗ ಗ್ರಾಮಕ್ಕೆ ಭೇಟಿ ನೀಡುವ ಬಗ್ಗೆ ತಿಳಿಸಿದ್ದು, ಶೀಘ್ರ ಸಮಸ್ಯೆ ಇತ್ಯರ್ಥ ಪಡಿಸುವ ಭರಸೆ ಎಸ್.ಪಿ ನೀಡಿದ್ದಾರೆ. – ಕನೀಜ್ ಫಾತೀಮಾ, ಶಾಸಕಿ ಕಲಬುರಗಿ ಉತ್ತರ ಮತಕ್ಷೇತ್ರ.
ಈ ಸಂದರ್ಭದಲ್ಲಿ ಜಿಲ್ಲಾ ವಕ್ಫ ಸಲಹಾ ಸಮಿತಿಯ ಅಧ್ಯಕ್ಷರಾದ ಸೈಯದ್ ಹಬೀಬ್ ಸರಮಸ್ತ್ ಮಾತನಾಡಿ ಪೊಲೀಸ್ ಆಧೀಕ್ಷಕರು ಈ ಬಗ್ಗೆ ಕಾಳಜಿ ವಹಿಸಿದ್ದು, ಆದಷ್ಟು ಬೇಗ ಸಮಸ್ಯೆ ಇತ್ಯಾರ್ಥ ಪಡೆಸುವ ಭರವಸೆ ನೀಡಿದ್ದಾರೆ.
ಎಲ್ಲಾ ಸಮಾಜದವರು ಈ ಹೋರಾಟದಲ್ಲಿ ಭಾಗವಹಿಸಿ ಸಹಕರಿಸಿ ಭಾವೈಕ್ಯತೆ ಎತ್ತಿ ಹಿಡಿದಿದ್ದಾರೆ. ಇಲ್ಲದಿದ್ದರೆ ಈ ಹೋರಾಟ ಯಶಸ್ವಿಯಾಗಲು ಸಾಧ್ಯವಾಗಿರಲಿಲ್ಲ. ಎಸ್.ಪಿ ಅವರು ಸಮಸ್ಯೆ ಇತ್ಯರ್ಥ ಪಡೆಸುವ ಭರವಸೆ ನೀಡಿದ್ದು, ಬೇಡಿಕೆ ಈಡೇರಿಕೆ ವಿಳಂಬವಾದರೆ ವಕ್ಫ್ ಇಲಾಖೆ ಸಹ ಹೋರಾಟ ನಡೆಸುವುದಾಗಿ ತಿಳಿಸಿದರು.
ಈ ವೇಳೆ ಡಿವೈಎಸ್ಪಿ ಆರ್.ಎಸ್ ಉಜನಕಪ್ಪ, ಸಿಪಿಐ ದೌಲತ, ಎನ್ ಕುರಿ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಅಧ್ಯಕ್ಷರಾದ ಶರಣಬಸಪ್ಪ ಮಮಶೇಟಿ, ಜಾವಿದ್ ಹುಸೈನ್, ಅಲ್ತಾಫ್ ಇನಾಮದಾರ್, ಗ್ರಾ.ಪಂ ಅಧ್ಯಕ್ಷರಾದ ತೇಜಮ್ಮಾ ಮುಕುಂದಪ್ಪ, ಪಿಡಿಓ ಸೋಮಶೇಖರ್, ಗ್ರಾ.ಪಂ ಉಪಾಧ್ಯಕ್ಷರಾದ ನಾಗರಾಜ್ ಹಂದ್ರೋಳಿ, ಮಸ್ತಾನ ಸಾಬ ಮೆಡಿಕಲ್, ಶೀವರಾಯ್ಯ (ಜೇಜಿ ಮುತ್ಯಾ), ಸಿದ್ದಪ್ಪ, ಸಚೀನ್, ಶಾಕುಮಿಯ್ಯಾ, ಮೌಲಾ ಮುತ್ಯಾ, ಶರ್ಫೋದಿನ್, ಹಮ್ಮಿದ್ ಮಿಯ್ಯಾ ಸುಲೇಗಾವ, ಖಾಸಿಮ್ ಸಾಬ್ ಮಾಸುಲ್ದಾರ್, ಗ್ರಾ.ಪಂ ಸದಸ್ಯ ಜಗದೀಪ್, ಇರಣ್ಣ ಚಿಕಾಶಿ, ಮುರಗ್ಯಣ್ಣಾ ಅಣಕಲ್, ಸೌಕತ್ ಅಲಿ, ವಕ್ಫ ಮತ್ತು ಅಲ್ಪಸಂಖ್ಯಾತರ ಮುಖಂಡರಾದ ಅಬ್ದುಲ್ ಬಾಸಿತ್ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಭೀಮರಾವ ಟಿಟಿ, ಸೈಯದ್ ಅಬ್ದುಲ್ ಬಾಸಿದ್ ಚಿಂಚೋಳಿ, ಸೈಯದ್ ಮಹೆಮ್ಮೂದ್ ಸಾಸರಗಾಂವ, ವಿರಸಂಗಪ್ಪ ಪೊಲೀಸ್ ಪಾಟೀಲ್, ನ್ಯಾಯವಾದಿ ವಾಹೆದ್ ಅಲಿ ಜೀವಣಗಿ, ಮೋದ್ದಿನ್ ಸಾಬ್, ಮಶಾಕ್ ಕೋರಬಾ, ಕಲೀಮ್ ಕಟ್ಟೊಳಿ, ನಬಿ, ಮುರ್ತುಜ್, ಯಲ್ಲಪ್ಪ, ಗಫೂರ್ ಸಾಬ್ ರಾಯಕೊಡ್, ಮೊಹಮ್ಮದ್, ಚಾಂದ್ ಪಾಶಾ ಹಮಾಲಿ, ಹುಸೇನ್ ಬೀ, ಮಶಾಕ್ ಬೀ, ಜಮಶೀದಾ ಬುವಾಜಿ, ಶಾಕುಮಿಯ್ಯಾ ಹುಲಕುಂದಿ, ಸಲೀಮಾ ಕೋರ್ಬಾ, ನಬಿಸಾಬ್ ಚೌಧರಿ, ಗೋರಿಬಿ ಕೋರ್ಬಾ, ಲಾಲ್ ಪಟೇಲ್, ಖಾಜಾಮಿಯ್ಯಾ ಕೋರ್ಬಾ, ಮಹೆಬೂಬ್ ಬಿ ಗಂಡಿ, ತಾಹೇರಾ, ಮಡಕಿ ರಜಿಯಾ, ಖಾಸೀಮ್ ಬೀ ಕೋರ್ಬಾ, ಹಮಿದ್ ಸಾಬ್ ಬೊದ್ಲಿ, ಬೆಲೂರ್ ಸಿರಾಜ್ ಬಿ, ಮುಸ್ತಫಾ ಬೊದ್ಲಿ, ನಸೀರ್ ಕಟ್ಟೊಳಿ, ಮಕ್ಬುಲ್ ಸಾಬ್, ವಕ್ಫ್ ದಸ್ಯರು ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.