ಜಾಗೃತಿ ಜ್ಯೋತಿ ಟ್ರಸ್ಟ್ ವತಿಯಿಂದ ಹಣ್ಣುಹಂಪಲು ವಿತರಣೆ

0
38

ಕಲಬುರಗಿ: ಈ ಸಂಸ್ಥೆ ಸುಮಾರು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿದೆ ನಿರ್ಗತಿಕ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಿ ಕೊಡುವುದು ಮಹಿಳಾ ಸಶಕ್ತಿಕರಣದ ಬಗ್ಗೆ ಕೆಲಸ ಮಾಡುತ್ತಿದೆ ಅಸಹಾಯ ಹೆಣ್ಣು ಮಕ್ಕಳಿಗೆ ಹೊಲಿಗೆ ,ಅಡಿಗೆ ಕ್ಲಾಸ್ ಹಾಗೆ ಬ್ಯೂಟಿ ಪಾರ್ಲರ್ ಕ್ಲಾಸ್ ಗಳನ್ನು ನಡೆಸುತ್ತದೆ ಎಂದು ಜಾಗೃತಿ ಜ್ಯೋತಿ ಟ್ರಸ್ಟ್ ನ ಸಂಸ್ಥಾಪಕಿಯಾದ ಜ್ಯೋತಿ ಮಸಳೆ ಅವರು ಮಾತನಾಡಿದರು.

ದಿವಂಗತ ಶ್ರೀ ಶಿವಶಂಕರ್ ಮಸಳಿ ಅವರ 38ನೇ ಪುಣ್ಯ ಸ್ಮರಣೆ ಅಂಗವಾಗಿ ಪ್ರತಿ ವರ್ಷದಂತೆ ಈ ಸಂಸ್ಥೆಯು ಯಾವುದೇ ಸಮಾಜ ಅಥವಾ ಸಂಸ್ಥೆಯನ್ನು ಭೇಟಿಯಾಗುವುದರ ಮೂಲಕ ಅವರ ಅವಶ್ಯಕತೆಗಳನ್ನು ತಿಳಿದುಕೊಳ್ಳುತ್ತದೆ ಅದೇ ರೀತಿ ಈ ಬಾರಿ ಮಹದೇವಿ ಅಕ್ಕ ವೃದ್ಧಾ ಶ್ರಮಕ್ಕೆ ಭೇಟಿ ಕೊಟ್ಟು ಅವರ ಬೇಡಿಕೆಯಂತೆ ಸುಮಾರು 80 ಸ್ಟೀಲ್ ಬಟ್ಟಲುಗಳ, ಹಣ್ಣು, ಬಿಸಕೆಟ್ ಹಾಗೂ ಚಾಕಲೇಟ್ ನ್ನು ವಿತರಣೆ ಮಾಡಲಾಯಿತು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿಬಸವರಾಜ್ ಮಸಳಿ ಅವರು ಬಟ್ಟಲಗಳನ್ನು ಜಾಗೃತಿ ಜ್ಯೋತಿ ಟ್ರಸ್ಟ್ ಗೆ ದೇಣಿಗೆಯಾಗಿ ನೀಡಿರುತ್ತಾರೆ. ಇದೇ ರೀತಿ ಒಬ್ಬರಿಂದ ಒಬ್ಬರಿಗೆ ಸಹಾಯ ಮಾಡಿ ಅವರವರ ತೊಂದರೆಗಳನ್ನು ಪೂರೈಸುತ್ತ ಹೋದರೆ ನಮ್ಮ ಭಾರತ ದೇಶದಲ್ಲಿ ಬಡತನ ಎನ್ನುವುದೇ ಇರುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಸವರಾಜ್ ಮಸಳಿ ಶ್ರೇಯಾ ಕಸ್ತೂರಿಬಾಯಿ ಮಸಳಿ, ಶ್ರದ್ಧಾ ಹರೀಶ್ ,ಸುಜಾತ ಕುಲಕರ್ಣಿ, ಜಯಾರವ ಕುಲಕರ್ಣಿ, ರಾಣಿ ,ಸಮೀರ್ ಇತ್ಯಾದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here