ಸಾಹಿತಿಗಳಿಗೆ ಬೆದರಿಕೆ: ಬಂಧನಕ್ಕೆ ಆಗ್ರಹ

0
39

ವಾಡಿ: ನಾಡಿನ ಪ್ರಗತಿಪರ ಲೇಖಕರಿಗೆ ಕೊಲೆ ಬೆದರಿಕೆ ಪತ್ರ ಬರೆಯುತ್ತಿರುವ ಕೋಮು ಶಕ್ತಿಗಳನ್ನು ಬಂಧಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ವಾಡಿ ವಲಯ ಸಮಿತಿ ಗೌರವ ಕಾರ್ಯದರ್ಶಿ ಚಂದ್ರು ಕರಣಿಕ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೋಮುವಾದಿ ಶಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಡಿನ ಶೋಷಿತ ಸಮುದಾಯಗಳ ಬದುಕು ಭವಣೆಗಳನ್ನು ಬರಹದ ಮೂಲಕ ಎತ್ತಿ ಹಿಡಿಯುತ್ತಿರುವ ಜನಪರ ಚಿಂತಕ ಲೇಖಕರನ್ನು ಕೊಲ್ಲುವುದಾಗಿ ಪತ್ರ ಬರೆದು ಹೆದುರಿಸುತ್ತಿರುವ ಸಮಾಜದ ಪ್ರಗತಿ ವಿರೋಧಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ನಾಡಿನ ಎಲ್ಲಾ ಪ್ರಗತಿಪರ ಚಿಂತಕರಿಗೆ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಅನ್ಯಾಯ, ಅಸತ್ಯ, ಅಮಾನವೀಯ ನೀತಿಗಳ ವಿರುದ್ಧ ಸದಾ ಸಂಘರ್ಷದ ಹಾದಿಯನ್ನು ತುಳಿದಿರುವ ಸಾಹಿತಿಗಳಿಗೆ ಇಂದು ಜೀವ ಬೆದರಿಕೆ ಕರೆಗಳು ಎದುರಾಗುತ್ತಿರುವುದು ಅತ್ಯಂತ ಖೇದಕರ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರಹ ಸ್ವಾತಂತ್ರ್ಯವನ್ನು ಹೊಂದಿರುವ ಸಾಹಿತಿಗಳು ಕೋಮುವಾದಿ ಶಕ್ತಿಗಳನ್ನು ಎದುರ ಹಾಕಿಕೊಂಡು ಪ್ರಕಾರವಾದ ಚಿಂತನೆಗಳನ್ನು ಹರಿಬಿಡುತ್ತಿದ್ದಾರೆ. ಯಾವುದೇ ರೀತಿಯ ಕೊಲೆ ಬೆದರಿಕೆಗೆ ಹೆದರದೆ ನಂಬಿದ ವಿಚಾರಗಳನ್ನು ಬರವಣಿಗೆಯ ಮೂಲಕ ಸಮಾಜದ ಬದಲಾವಣೆಗೆ ಮುಂದಾಗಿದ್ದಾರೆ.

ಆದರೆ ಈ ಹಿಂದೆ ಸಂಶೋದಕ ಡಾ. ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಅವರಂತಹ ಶ್ರೇಷ್ಠ ಬರಹಗಾರರನ್ನು ಮತಿಯ ವಾದಿಗಳು ಬಲಿ ತೆಗೆದುಕೊಂಡಿದ್ದಾರೆ. ಈಗ ಚಿಂತಕರಾದ ಕೆ.ಎಸ್.ಭಗವಾನ್, ಡಾ. ಬಂಜಿಗೆರೆ ಜಯಪ್ರಕಾಶ್, ಬಿ.ಟಿ.ಲಲಿತಾ ನಾಯಕ್, ಕುಂ.ವೀರಭದ್ರಪ್ಪ, ವಸುಂದರಾ ಭುಪತಿ ಸೇರಿದಂತೆ ಇತರ ಪ್ರಗತಿಪರ ಲೇಖಕರ ಜೀವ ಅಪಾಯಕ್ಕೆ ಸಿಲುಕಿದೆ. ಸಂವಿಧಾನದ ಹಕ್ಕು ಆಶಯಗಳಿಗೆ ಪೂರಕವಾಗಿ ಜನಪರ ಸಾಹಿತ್ಯವನ್ನು ಸಮಾಜಕ್ಕೆ ಅರ್ಪಿಸಿರುವ ನಾಡಿನ ಪ್ರಗತಿಪರ ಸಾಹಿತಿಗಳು ಸಮಾಜದ ಆಸ್ತಿಯಾಗಿದ್ದಾರೆ. ಶ್ರಮಜೀವಿಗಳ ಬದುಕಿಗೆ ಬೆಳಕು ನೀಡುವ ಸಾಹಿತಿಗಳ ಜೀವ ಸುರಕ್ಷತೆ ಸರಕಾರದ ಹೊಣೆಯಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳುವ ಮೂಲಕ ಸಾಹಿತಿಗಳ ಬೆನ್ನಿಗೆ ನಿಲ್ಲಬೇಕು ಎಂದು ಕರಣಿಕ ಅವರು ಮನವಿ ಮಾಡಿದ್ದಾರೆ. ಸರ್ಕಾರ ಸಾಹಿತಿಗಳ ಜೀವ ರಕ್ಷಣೆಗೆ ಮುಂದಾಗದಿದ್ದರೆ ಎಲ್ಲಾ ಪ್ರಗತಿಪರ ಬರಹಗಾರ ಒಕ್ಕೂಟ ಪ್ರತಿಭಟನಿಗೆ ಮುಂದ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here