ನ್ಯಾಕ್ ಎ ಗ್ರೇಡ್ ಪಡೆದ ಎನ್.ವಿ. ಪದವಿ ಕಾಲೇಜು

0
35

ನ್ಯಾಕ್ ಕಮೀಟಿ ನೀಡರುವ ಎ ಗ್ರೇಡ್ ಮಾನ್ಯತೆಯಿಂದಾಗಿ ನಮ್ಮ ಕಾಲೇಜು ರಾಷ್ಟ್ರಾಧ್ಯಂತ ಉತ್ತಮ ಗುಣಮಟ್ಟದ ಶೀಕ್ಷಣಕ್ಕೆ ಹೆಸರುವಾಸಿಯಾದಂತಾಗಿದೆ. ಸತತ ಮೂರು ಬಾರಿ ಎ ಗ್ರೇಡ್ ಪಡೆದ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.- ಅಭಿಜಿತ್ ದೇಶಮುಖ, ಕಾರ್ಯದರ್ಶೀ ಎನ್.ವಿ. ಸಂಸ್ಥೆ, ಕಲಬುರಗಿ.

ಕಲಬುರಗಿ: ಶತಮಾನ ಕಂಡ ನಗರದ ನೂತನ ವಿದ್ಯಾಲಯದ ಸಂಸ್ಥೆಯ ನೂತನ ವಿದ್ಯಾಲಯ ಕಲಾ, ಶ್ರೀ ಕನ್ಹಯ್ಯಲಾಲ್ ಮಾಲು ವಿಜ್ಞಾನ ಹಾಗೂ ಡಾ.ಪಾಂಡುರಂಗರಾವ್ ಪಟ್ಕಿ ಕಾಲೇಜ್ ಆಫ್ ಕಾಮರ್ಸ್‍ಗೆ ಈ ಬಾರಿ ನ್ಯಾಕ್ ನಿಂದ ‘ಎ’ ಗ್ರೇಡ್ ಪಡೆದಿದೆ ಎಂದು ಸಂಸ್ಥೆ ಕಾರ್ಯದರ್ಶಿ ಅಭಿಜಿತ್ ದೇಶಮುಖ ಹಾಗೂ ಕಾಲೇಜ್ ಪ್ರಾಚಾರ್ಯ ಡಾ. ಶ್ರೀಕಾಂತ ಏಖೇಳಿಕರ್ ತಿಳಿಸಿದರು.

Contact Your\'s Advertisement; 9902492681

ಮೇ. 3 ಮತ್ತು 4ರಂದು ನ್ಯಾಕ್ ಕಮೀಟಿ ಸದಸ್ಯರು ಕಾಲೇಜಿಗೆ ಭೇಟಿ ನೀಡಿ ಎಲ್ಲ ವಿಧದಲ್ಲಿ ಪರಿಶೀಲನೆ ನಡೆಸಿದ್ದಾರೆ. ನಮ್ಮ ಶಾಲೆಯ ಮೂಲ ಸೌಕರ್ಯ, ವಿದ್ಯಾರ್ಥಿಗಳಿಗೆ ನೀಡಿರುವ ಕಲಿಕಾ ಸೌಲಭ್ಯ ಸೇರಿ ಎಲ್ಲ ರೀತಿಯ ಪರಿವೀಕ್ಷಣೆ ನಡೆಸಿ ಈ ಬಾರಿ ನ್ಯಾಕ್ ಕಮೀಟಿ ಕಾಲೇಜಿಗೆ 3.09 ಅಂಕಗಳೊಂದಿಗೆ ‘ಎ’ ಗ್ರೇಡ್ ನೀಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಹಿಂದೆ 2004ರಲ್ಲಿ ನ್ಯಾಕ್ ಕಮೀಟಿ ಭೇಟಿ ನೀಡಿ ಪರಿಶೀಲನೆ ನಡೆಸಿ ಆಗ ಶೇ.87 ರೊಂದಿಗೆ ಎ ಗ್ರೇಡ್ ನೀಡಿತ್ತು. ನಂತರ 2012ರಲ್ಲಿ ಮತ್ತೊಮ್ಮೆ ನ್ಯಾಕ್ ಕಮೀಟಿ ಭೇಟಿ ನೀಡಿದಾಗ ಸಿಜಿಪಿಎ ಅಡಿ ಎ ಗ್ರೇಡ್ ನೀಡಿ 3.32 ಅಂಕ ನೀಡಲಾಗಿತ್ತು. ಇದೀಗ ಮೂರನೇ ಬಾರಿ ಜಿಲ್ಲೆಯಲ್ಲಿ ಇಂದಿನವರೆಗೆ 3.09 ಮೂಲಕ ಸಾಧನೆ ಮಾಡಿದ್ದಲ್ಲದೆ ಇಂದಿನ ಸ್ಪರ್ಧಾತ್ಮಕ ಓಟದಲ್ಲಿ ತನ್ನ ಸ್ತಾನವನ್ನು ಉಳಿಸಿಕೊಳ್ಳುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ ಎಂದು ವಿವರಿಸಿದರು.

ನೂತನ ವಿದ್ಯಾಲಯದ ಕಲಾ ಹಾಗೂ ವಾಣಿಜ್ಯ ಪದವಿ ಕಾಲೇಜು 1979ರಲ್ಲಿ ಪ್ರಾರಂಭ ಮಾಡಲಾಗಿದೆ. ನಂತರ 1987ರಲ್ಲಿ ವಿಜ್ಞಾನ ಕಾಲೇಜು ಪ್ರಾರಂಭ ಮಾಡಲಾಗಿದೆ. ಈಗ ಕಾಲೇಜಿನಲ್ಲಿ 600 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಎರಡು ಸ್ನಾತ್ತಕೋತ್ತರ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಜಿಟಲ್ ಗ್ರಂಥಾಲಯ, ಮೂಲಸೌಲಭ್ಯ, ವಿಶಾಲ ಆಟದ ಮೈದಾನದ ಜೊತೆಗೆ ಕಾಲೇಜಿನ ಸುತ್ತಲೂ ಹಸಿರು ವಾತಾವರಣ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಸಂಸ್ಥೆ ಅಧ್ಯಕ್ಷ ಡಾ.ಗೌತಮ ಆರ್. ಜಾಗಿರದಾರ್, ಗೋವಿಂದ್ ಪೂಜಾರಿ, ರವಿ ಟೆಂಗಳಿ, ಡಾ. ಮೀನಾ ಪದಕಿ, ಗಿರೀಶ್ ಗಲಗಲಿ, ಶಶಾಂಕ್ ಪಟ್ಟಣಕರ್ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here