ಕಲಬುರಗಿ: ನಾಡಿನ ಸಮಸ್ತ ರೈತ ಬಾಂಧವರಿಗೆ ರೈತರ ಜೀವನಾಡಿಯಾದ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸುವ ‘ಕಾರ ಹುಣ್ಣಿಮೆ’ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ/ ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಶುಭ ಕೋರಿದ್ದಾರೆ.
ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು‘ಕರಿ’ ಹರಿಯುವ ಜನಪದ ಸಂಪ್ರದಾಯ ಪ್ರತಿ ಗ್ರಾಮದಲ್ಲೂ ಸಂತಸ ತರಲಿ ಈ ವರ್ಷದಲ್ಲಿ ಉತ್ತಮ ಮಳೆ-ಬೆಳೆಗಳು ಸಮೃದ್ಧಿಯಾಗಲೆಂದು ಆಶಿಸುತ್ತೇನೆ ಎಂದಿದ್ದಾರೆ.