ಕಲಬುರಗಿ : ಇಲ್ಲಿನ ರಂಗಸಂಗಮ ಕಲಾವೇದಿಕೆಯು ಕೊಡಮಾಡುವ ಎಸ್.ಬಿ.ಜಂಗಮಶೆಟ್ಟಿ ಮತ್ತು ಸುಭದ್ರಾದೇವಿ ಜಂಗಮಶೆಟ್ಟಿ ರಂಗ ಪ್ರಶಸ್ತಿಗೆ ರಂಗ ಸಾಧಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಧನೆಗೈದ ರಂಗಕರ್ಮಿಗಳ ಹೆಸರನ್ನು ರಂಗಾಸಕ್ತರು ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು ಅಥವಾ ಅರ್ಜಿ ಗಳನ್ನು ಹಾಕಬಹುದು ಎಂದು ರಂಗಸಂಗಮ ಕಲಾವೇದಿಕೆಯ ಕಾರ್ಯದರ್ಶಿ ಡಾ.ಸುಜಾತ ಜಂಗಮಶೆಟ್ಟಿ ತಿಳಿಸಿದ್ದಾರೆ.
ಪ್ರಶಸ್ತಿಯು ತಲಾ 10,000₹ ಗಳ ನಗದು, ಪ್ರಶಸ್ತಿ ಪತ್ರ ಹಾಗೂ ಸನ್ಮಾನ ಒಳಗೊಂಡಿದ್ದು, 18 ಜುಲೈ.2023 ರಂದು ಹಮ್ಮಿಕೊಳ್ಳಲಾಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2014 ರಿಂದ ಆರಂಭವಾದ ರಂಗ ಪ್ರಶಸ್ತಿಯನ್ನು ಈ ವರೆಗೆ ರಂಗಸಾಧಕರಾದ 1)ಬಸವರಾಜಯ್ಯ ಭೀಮನಳ್ಳಿ, 2)ಈಶ್ವರಪ್ಪ ಫರತಾಬಾದ, 3)ಮನೂಬಾಯಿ ನಾಕೋಡ್, 4)ಮಂಡ್ಯ ರಮೇಶ್, 5)ಜುಲೇಖಾಬೇಗಂ, 6)ಡಾ.ಶ್ರೀಪಾದ ಭಟ್ 7)ಧಾರೇಶ್ವರ, 8)ದೀಪಕ್ ಮೈಸೂರು, 9)ಶಿವಯ್ಯಸ್ವಾಮಿ ಬಿಬ್ಬಳ್ಳಿ ಸೇಡಂ,
10)ಡಾ.ಜೀವನ್ ರಾಂ ಸುಳ್ಯ, 11)ಶೈಲಜಾ ದುಧನಿಕರ್ ಮೈಂದರ್ಗಿ ಅವರು ಪಡೆದಿದ್ದಾರೆ.
ಪ್ರಶಸ್ತಿಗಾಗಿ ಅರ್ಜಿಗಳನ್ನಾಗಲಿ ಅಥವಾ ನಾಮನಿರ್ದೇಶನಗಳನ್ನಾಗಲಿ ಕಳಿಸುವ ಕೊನೆಯ ಜೂನ್ 20 ಕಳಿಸಬೇಕಾದ ವಿಳಾಸ :
ಡಾ.ಸುಜಾತಾ ಜಂಗಮಶೆಟ್ಟಿ “ಓಂ” ರೆಸಿಡೆನ್ಸಿ. ಗೋಕುಲ ಸುಪರ ಬಜಾರಿನ ಎರಡನೇಯ ಮಹಡಿ ಶ್ರೀನಿವಾಸ ಕಣ್ಣಿನ ಆಸ್ಪತ್ರೆ ಪಕ್ಕ.
ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರ, ಹಳೆಯ ಜೇವರ್ಗಿ ರಸ್ತೆ. ಕಲಬುರಗಿ 585102. ಮೊಬೈಲ್ +91 94804 09732