ರೈತರಿಗೆ ಬೀಜ- ರಸಗೊಬ್ಬರ ಕೊರತೆ ಕಾಡದಂತೆ ಕ್ರಮ ಕೈಗೊಳ್ಳಿ; ಶಾಸಕ ಅಲ್ಲಂಪ್ರಭು ಖಡಕ್ ಸೂಚನೆ

0
13

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರ ಅಲ್ಲಂಪ್ರಭು ಪಾಟೀಲರು ಕಲಬುರಗಿ ತಾಪಂ ಬಾಂಗಣದಲ್ಲಿ ದಕ್ಷಿಣ ಮತಕ್ಷೇತ್ರದಡಿ ಬರುವ ಅದಿಕಾರಿಗಳ ಸಭೆ ನಡಸಿ ಪ್ರಗತಿ ಪರಿಶೀಲಿಸಿದರು.

ಕೃಷಿ ಇಲಾಖೆ ವಿಚಾರದಲ್ಲಿ ಮಾತನಾಡುತ್ತ ಮುಂಗಾರು ಹಂಗಾಮಿನ ಹೊಸ್ತಿಲಲ್ಲಿz್ದÉೀವೆ. ಯಾವ ಕಾರಣಕ್ಕೂ ಕಲಬುರಗಿ ತಾಲೂಕಿನ ರೈತರಿಗೆ ಬೀಜ, ರಸಗೊಬ್ಬರ ಕೊರತೆ ಕಾಡಬಾರದು ಎಂದು ತಾಕೀತು ಮಾಡಿದರು.

Contact Your\'s Advertisement; 9902492681

ಹೆಸರು, ಉದ್ದು, ಸೋಯಾಬೀನ್ ಅಲಸಂದಿ ಬೀಜ, ಅದಕ್ಕ ಬೇಕಾಗುವ ಅಗತ್ಯ ಪೆÇೀಷಕಾಂಷ, ರಸಗೊಬ್ಬರ ದಾಸ್ತಾನು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಬೇಕು.

ಬೀಜೋಪಚಾರಗಳ ಬಗ್ಗೆ ಗಮನ ಹರಿಸಬೇಕು, ಬಿತ್ತನೆ ಬೀಜ ಕೊಡುವಾಗಲೇ ರೈತರಿಗೆ ಬೀಜೋಪಚಾರ ಮಾಡುವಂತೆ ಹೇಳಬೇಕು, ಕಳೆದ ಬಾರಿ ನೆಟೆ ರೋಗದಿಂದ ತೊಗರಿ ಭಾರಿ ಪ್ರಮಾಣದಲ್ಲಿ ಹಾಳಾಯ್ತು. ಕಲಬುರಗ ತಾಲೂಕಿನಲ್ಲೇ ಹೆಚ್ಚಿನ ಹಾನಿಯಾಗಿರೋದು ಗೊತ್ತಿರೋ ವಿಚಾರ, ಈ ಬಾರಿ ನೆಟೆರೋಗ ಬಾರದಂತೆ ತಡೆಯುವ ತೊಗರಿ ಬೀಜ ಮಾರಾಟಕ್ಕೆ ತನ್ನಿ ಎಂದು ಸೂಚಿಸಿದರು.

ಡಿಎಪಿ, ಯೂರಿಯಾ, ಕಾಂಪ್ಲೆಕ್ಸ್ ಗೊಬ್ಬರಗಳ ಬೇಡಿಕೆ ಹೆಚ್ಚುತ್ತದೆ. ಹೆಚ್ಚಿನ ದಾಸ್ತಾನ ಇರುವಂತೆ ನೋಡಿಕೊಳ್ಳಿ, ರೈತರಿಗೆ ಕೊನೆ ಗಳಿಗೆಯಲ್ಲಿ ಪಹಣಿ ತನ್ನಿ, 2 ಚೀಲ, 1 ಚೀಲ ಕಂಡೊಯ್ರಿ ಅಂತ ಸತಾಸ್ತೀರಿ, ಇದಾಗಬಾರದು. ಖಾಸಗಿಯಲ್ಲಿಯೂ ಮಳಿಗೆ ಮಾಲೀಕರು, ರೈತರಿಗೆ ಹೆಚ್ಚಿನ ಬೆಲೆಗೆ ಯೂರಿಯಾ, ಡಿಎಪಿ ಮಾರೋ ದೂರುಗಳಿವೆ. ಪರಿಶೀಲನೆ ಮಾಡಬೇಕೆಂದರು.

ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಉಪ ವಿಭಾಗ ಜಲ್ ಜೀವನ ಮಿಷನ್ ಕಾಮಗಾರಿ ಪ್ರಗತಿ ಎಲ್ಲಿಗೆ ಬಂದಿದೆ? ತಾಲೂಕಿನ ಅನೇಕ ಹಳ್ಳಿಗಳಲ್ಲಿ ರಸ್ತೆ ಅಗೆದು ಇಟ್ಟರೂ ಪೈಪ್‍ಲೈನ್ ಆಗಿಲ್ಲ. ಕೊಳವೆ ಮಾರ್ಗಆದಲ್ಲಿ ನೀರು ಹರಿತಿಲ್ಲವೆಂದು ದೂರಿದಾಗ ಸ್ಪಂದಿಸಿದ ಅದಿಕಾರಿಗಳು ಇನ್ನೂ 10 ಕಾಮಗಾರಿಟಟೆಂಡರ್‍ನಲ್ಲಿವೆ. 9 ಪೂರ್ಣಗೊಂಡಿವೆ. ದೂರು ಬಂದಲ್ಲಿ ಗಮನಿಸೋದಾಗಿ ಹೇಳಿದರು. ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಹದಗೆಟ್ಟಿದೆ. ಪಂಚಾಯ್ತಿಯಿಂದಲೇ ನಿರ್ವಹಣೆ ಮಾಡಬೇಕೆಂದು ನಿರ್ಣಯ ಕೈಗಂಡರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಲಿ. ಅಗತ್ಯ ಅನುದಾನ ತರೋಣ ಎಂದರು, ಅಪೌಷ್ಠಿಕ ಮಕ್ಕಳ ಸಂಖ್ಯೆ ಕಲಬುರಗಿ ತಾಲೂಕಿನಲ್ಲಿ ಹೆಚ್ಚಿರೋದರಿಂದ  ಅಂಗನವಾಡ ಕೇಂದಆಗಳ ಮೂಲಕ ಮಕ್ಕಳ ತೂಕ ಇತ್ಯಾದಿ ನೋಡುವ ಕೆಲಸವಾಗಬೇಕು. ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಕೈಗೊಂಡ ಕ್ರಮಗಳು ಇನ್ನೂ ಮಕ್ಕಳ ಸ್ನಹಿಯಾಗಬೇಕೆಂದರು

ಕಲಬುರಗಿ ತಾಲೂಕಿನಲ್ಲಿರುವ ಉದಯೋಗ ಕಾತರಿ ಯೋಜನೆ ಇನ್ನೂ ಕಾರ್ಮಿಕ ಪರವಾಗಿರಲಿ ಎಂದರು. ವೇತನ ಬೇಗ ಪಾವತಿಗೆ ಸೂಚಿಸಿದರು. ಮಳೆಗಾಲ ಬಂತು. ಕಲಬುರಗಿ ತಾಲೂಕಿನ ಎಲ್ಲಾಕಡೆ ಸಸ ನೆಟ್ಟು ಅರಣ್ಯ ಪೆÇೀಷಣೆಯ, ಹೆಚ್ಚಿಸುವ ಕೆಲಸವಾಗಬೇಕು. ಇದಕ್ಕಾಗಿ ಕೈಗೊಂಡ ಕ್ರಮವೇನು? ಈ ಬಾರಿ ಅದೆಷ್ಟು ಹೊಸ ಸಸಿಗಳನ್ನು ನೆಡಲು ಉz್ದÉೀಶವಿದೆ? ಎಂದು ಅರಣ್ಯ ಇಲಾಖೆಗೆ ತರಾಎಗೆ ತೆಗೆದುಕೊಂಡರಲ್ಲದೆ ಸಿದ್ಧತೆಯೊಂದಿಗೆ ಸಬೆಗೆ ಬರಲು ಸೂಚಿಸಿದರು.

ಕಲಬುರಗಿ ತಾಲೂಕಿನಲ್ಲಿ ನೆಡುತೋಪು ಎಲ್ಲಿವೆ? ಇಲ್ಲದ ಹೋದಲ್ಲಿ ಸರ್ಕಾರಿ, ಗೈರಾಣಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಇಂತಹ ನೆಡುತೋಪು ಅಭಿವೃದಧಿಪಡಿಸಿರಿ, ಅರಣ್ಯ ಇಲಾಖೆ ಕೆಲಸ ತುಂಬಾ ಇದೆ. ಅರಣ್ಯ ಸಚಿವರು ನಮ್ಮವರೇ ಬೀದರ್‍ನ ಖಂಡ್ರೆ ಇದ್ದಾರೆ. ಯೋಜನೆ ಸಿದ್ದಪಡಿಸಿಕೊಂಡು ಬನ್ನಿ. ನಾವು ಮಂಜೂರು ಆಡಿಸುತ್ತೇವೆ. ಕೆಲಸವಾಗಬೇಕು. ಹಗಲು ರಾತ್ರಿ ಓಡಾಡಿ ಅರಣ್ಯೀಕರಣಕ್ಕೆ ಮುಂದಾಗಿರಿ. ಕಲಬುರಗಿಯಲ್ಲಿ ಮೊದಲೇ ಅರಣ್ಯವಿಲ್ಲ. ಬೆಳೆಸುವ ಕೆಲಸವಾಗಲಿ, ಸಾರ್ವಜನಿಕರ ಸಹಕಾವನ್ನೂ ಪಡೆಯಿರಿ ಎಂದರು.

ಶಾಲೆಗಳು ಆರಂಭವಾಗಿವ. ಅದೆಷ್ಟು ಶಾಲೆಗಳ ಕೋಣೆಗಳು ಶಿಇಲವಾಗಿವೆ, ದುರಸ್ಥಿಗೆ ಕೈಗೊಂಡ ಕ್ರಮಗಳೇನು? ಕಲಬುರಗಿ ತಾಲೂಕಿನಲ್ಲಿ ಬಹಳಕಡೆ ಈ ಸಮಸಯೆ ಇರೋದು ನನ್ನ ಗಮನಕ್ಕೆ ಬಂದಿದೆ. ತಕ್ಷಣ ಶಿಥಿಲ ಕೋಣೆಗಳ ದುರಸ್ಥಿಗೆ ಕ್ರಮಕ್ಕೆ ಮುಂದಾಗಬೇಕು. ಖುದ್ದು ಹೋಗಿ ಭೇಟಿ ನೀಡಿ ವರದಿ ಸಿದ್ಧಮಾಡಿರಿ. ಮ್ಕಳ ಸುರಕ್ಷತೆ ಮುಖ್ಯವಾಗಿದೆ ಎಂಬುದು ಗಮನಿಸಿರಿ. ಅನೇಕ ಪತ್ರಿಕೆಗಳಲ್ಲಿ ನಿತಯವೂ ಶಾಲಾ ಕೋಣೆಗಳ ಶಿಥಿಲತೆ ವರಿಗಳು ಬರುತ್ತವೆ. ಅಂತಹ ವರದಿಗಳಿಗೆ ಸ್ಪಂದಿಸಿರಿ ಎಂದು ಬಇಇಓ ಅವರಿಗೆ ಖಡಕ್ ಸೂಚನೆ ನೀಡಿದರು.

ನಿತ್ಯ ಪತ್ರಿಕೆಗಳಲ್ಲಿ ಅದೇನ್ ಬರೀತಾರ ಬಿಡು ಅಂತ ಅಲಕ್ಷತನ ಬೇಡ. ಪ್ರತಿಯೊಂದು ಪತ್ರಿಕೆಯ ಇಂತಹ ಮೂಲ ಸಲವತ್ತು, ಜನರಿಗೆ ಆಗುತ್ತಿರುವ ತೊಂದರೆಯ ಕಲಬುರಗಿ ತಲೂಕು ವ್ಯಾಪ್ತಿಯ ವರದಿಗಳನ್ನು ಗಮನಕ್ಕೆ ತೆಗೆದುಕೊಂಡು ಪರಿಹಾರಕ್ಕೆ ಮುಂದಾಗಲೇಬೇಕು. ಇದು ಕಟುನಿಟ್ಟು ಸೂಚನೆಯಾಗಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಇದನ್ನು ಗಮನದಲ್ಲಿಟ್ಟು ಕೇಳಿರಿ, ಮುಂದೆ ಕ್ರಮ ಕೈಗೊಳ್ಳಿ ಎಂದರು.

ಶಾಲಾ ಮಕ್ಕಳ ಸಮವಸ್ತ್ರ, ಪಠ್ಯ ಪುಸ್ತಕ ವಿತರಣೆಯಲ್ಲಿ ತೊಂದರೆಯಾಗಕೂಡದು. ತಕ್ಷಣ ಗಮನ ಹರಿಸಿ ಎಲ್ಲವೂ ಸರಿಯಾಗಿ ಹಂಚಿಕೆಯಾಗಬೇಕು. ಬಿಸಿಯೂಟದಲ್ಲಿಯೂ ತೊಂದರೆ ಕಾದಂತೆ ಕ್ರಮ ಕೈಗೊಳ್ಳಿ. ಶಾಲೆ ಶುರುವಾಗುವುದರ ಜೊತೆಗೇ ಬಿಸಿಯೂಟವೂ ಶುರುವಾಗಬೇಕು ಎಂದರು.

ಕಲಬುರಗಿ ತಾಲೂಕಿನ ಅನೇಕ ಪಿಎಚ್‍ಸಿ, ಸಿಎಚ್‍ಸಿಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬಂದಿರೋದಿಲ್ಲವೆಂಬ ಜನರ ದೂರುಗಳಿವೆ. ಹಳ್ಳಿ ಆಸ್ಪತ್ರೆಗಳಲ್ಲಿ ವೈದ್ಯರು, ದಾದಿಯರು ಇಲ್ಲದೆ ಹೋದೆರ ಜನ ಏನ್ ಮಾಡಬೇಕು? ಎಲ್ಲರೂ ಕಲಬುರಗಿಗೆ ಬಂದು ಕೂಡಬೇಕೆ? ತಕ್ಷಣ ವೈದ್ಯರು ಸೇರಿದಂತೆ ಪೂರಕ ಸಿಬ್ಬಂದಿ ಹಾಜರಾತಿ ಕಡ್ಡಾಯವಾಗಲಿ ಎಂದು ತಾಲೂಕಾ ಆರೋಗ್ಯಾಧಿಕಾರಿಗೆ ಸೂಚಿಸಿದರು.

ಮಳೆಗಾಲವದ್ದರಿಂದ ಸಾಕಷ್ಟು ಸಾಂಕ್ರಾಮಿಕ ರೋಗ ಬಾಧೆ ಶುರು ವಾಗುತ್ತವೆ ಸೊಳ್ಳೆ ನಿಯಂತ್ರಣವಾಗಲಿ. ಸಾಂಕ3ಆಇ ಕಾಡದಂತೆ ಜಾಗೃತಿ ಮೂಡಿಸಿರಿ, ಶುದ್ಧ ನೀರು ಕುಡಿಯೋ ವಿಚಾರಲೂ ಜನ ಜಾಗೃತಿ ಮಾಡಿರಿ. ಜನರಿಗೆ ಆರೋಗ್ಯದ ವಿಚಾರದಲ್ಲಿ ಸೂಕ್ತ ಸಲಹೆ ಕೊಡಿ. ಕಲಬುರಗಿ ತಾಲೂಕಿನಲ್ಲಿ ಹೊಸಾಗಿ ಪಿಎಚ್‍ಸಿ, ಸಿಎಚ್‍ಸಿ ಅಗತ್ಯವಿದೆಯೆ? ಹಾಗಿದ್ದರೆ ಯಾವ ಊರಲ್ಲಿ ಬೇಕು? ನಿಮ್ಮ ಪ್ರಸ್ತಾವನೆ ಸಿದ್ಧಮಾಡಿ ಕೊಡಿ ಮಂಜೂರು ಮಾಡಿಸಿಕೊಂಡು ಬರುವೆ ಎಂದರು.

ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಕೆರೆಗಳ ಸ್ಥಾಪನೆಗೆ ಮುಂದಾಗಬೇಕಿದೆ, ಸೂಕ್ತ ನಿವೇಶನ ಹುಡುಕುವಂತೆ ತಹಸೀಲ್ದಾರ್‍ಗೆ ಸೂಚಿಸಿದ ಶಾಸಕರು ಭೀಮಳ್ಳಿ ಸೇತುವೆ ಕಾಮಗಾರಿ ಎಲ್ಲಿಗೆ ಬಂದಿದೆ? ಕಳೆದ ಮಲೆಗಾದಲಲ್ಲಿ ಹಳ್ಳದ ನೀರಿನಂದ ಹರಿದು ಹೋಗಿತ್ತು. ಜನ ಭಾರಿ ತೊಂದರೆ ಎದುರಿಸಿದ್ದಾರೆ. ಈ ಬಾರಿ ಅಲ್ಲಿನ ಸ್ಥಿತಿ ಹೇಗಿದೆ? ಎಂದು ಮಾಹಿತಿ ಪಡೆದರು.

ಪಾಣೆಗಾಂವ್, ಕಣ್ಣಿ, ಮಿಣಜಗಿ ಇಲ್ಲೆಲ ಮಳೆಗಾಲದಲ್ಲಿ ಹಲ್ಳಕ್ಕೆ ನೀರು ಬಂದು ಸಾಕಷ್ಟು ಜೀವಹಾನಿಯಾಗಿವೆ. ಈ ಬಾರಿ ಅದೇ ಪರಿಸ್ಥಿತಿ ಮರುಕಳಿಸಬಾದು. ಏನೆಲ್ಲಾ ಕೆಲಸವಾಗಬೇಕು ಅವುಳನ್ನು ಗಮನಕ್ಕೆ ತನ್ನಿ, ಬೇಗ ಮಾಡೋಣ. ಜನರ ಪ್ರಾಣಹಾನಿಗೆ ಅವಕಾಶ ಕೊಡಬೇಡಿ. ಜನರ ಜೀವ, ಆಸ್ತಿಪಾಸ್ತಿ ಮುಖ್ಯವೆಂದರು. ಮುಖ್ಯಾಧಿಕಾರಿ ವೀರಣ್ಣ ಕೌಲಗಿ, ಕಲಬುರಗಿ ತಹಶೀಲ್ದಾರ್, ತಾಲೂಕು ಅದಿಕಾರಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here