ಬಿಡಾಡಿ ದನ, ಬೀದಿ ನಾಯಿಗಳ ಕಾಟಕ್ಕೆ ಸಾರ್ವಜನಿಕರ ಪಿಕಲಾಟ

0
18

ಆಳಂದ: ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಬಿಡಾಡಿ ದನಗಳ ಉಪ್ಟಳದಿಂದಾಗಿ ಇಲ್ಲಿನ ಸಾರ್ವಜನಿಕರು ಬೇಸೋತ್ತು ಹೋಗಿದ್ದಾರೆ.

ಬೀದಿ ನಾಯಿಗಳ ವಿರುದ್ಧ ಇಲ್ಲಿನ ಹಳೆಯ ತಹಸೀಲ್ದಾರ ಕಚೇರಿಯ ಮುಂದೆ ಕೊಳಚೆ ಬಡಾವಣೆಯೊಂದರ ಮಕ್ಕಳು ಶಾಲೆ ಆರಂಭಗೊಂಡರು ಶಾಲೆಗೆ ಹೋಗದೆ ಬೀದಿಯಲ್ಲೇ ಓಡಾಡುತ್ತಾ ಸಿಕ್ಕ ನಾಯಿಗಳಿಗೆ ಬಲೆಹಾಕಿ ಬಡಿಗೆ ರುಚಿತೋರಿಸಿ ಓಡಾಡಿದ ಪ್ರಸಂಗ ಬುಧವಾರ ನಡೆದಿದೆ.

Contact Your\'s Advertisement; 9902492681

ಪಟ್ಟಣದ ಶ್ರೀರಾಮ ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಮುಂಭಾಗದ ಮುಖ್ಯ ರಸ್ತೆಯಲ್ಲಿ ದನಗಳ ಹಿಂಡು ರಸ್ತೆಯ ಮೇಲೆಯೇ ಬೀಡು ಬಿಡುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ, ವಾಹನ ಸಂಚಾರಕ್ಕೆ ತೊಂದರೆಯಾಗತೊಡಗಿದೆ.
ಜನದಟ್ಟಣೆ ಪ್ರದೇಶದಲ್ಲಿ ಆಗಾಗ ದನಗಳ ಪರಸ್ಪರ ಹೊಡೆದಾಟ ಮತ್ತು ಅಂಗಡಿ ಮುಗ್ಗಟುಗಳ ದವಸಧಾನ್ಯಗಳಲ್ಲಿ, ತರಕಾರಿ ಬುಟ್ಟಿಗಳಲ್ಲಿ ದನಗಳು ಬಾಯಿ ಹಾಕುವುದರಿಂದ ಅಲ್ಲಿನವರು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ದನಗಳು ಓಡಿ ಹೋಗುವಾಗ ಮಕ್ಕಳು, ಮಹಿಳೆಯರು ಸೇರಿ ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗತೊಡಗಿದ್ದಾರೆ.

ಪಟ್ಟಣದ ಸನ್ಮಖ ಕ್ರಾಸ್‍ನಲ್ಲಿ ಬುಧವಾರ ಬೆಳಗಿನ ಜಾವ ತೆರಳುವಾಗ ಬೀದಿನಾಯಿಗಳ ದಾಳಿಗೆ ಮಂಜು ಮಾಳಿ ಎಂಬ ಯುವಕನಿಗೆ ಕಚ್ಚಿ ಗಾಯಗೊಳಿಸುವೆ. ಬೀದಿ ನಾಯಿಗಳ ಅಲ್ಲಲ್ಲಿ ಸಾರ್ವಜನಿಕರನ್ನು ಕಚ್ಚುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೆ ಇವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಣದಲ್ಲಿನ ಹತ್ತಾರು ದನಗಳು ಬೀಡಾಡಿ ದನಗಳಾಗಿರದೆ ಮಾಲೀಕರಿದ್ದಾರೆ. ಆದರೆ ಮೇಯಲು ಮಾರುಕಟ್ಟೆ ಮುಖ್ಯರಸ್ತೆಗಳಲ್ಲೇ ಬೆಳಗಿನ ಜಾವ ಹಾಯಾಗಿ ಬಿಡುತ್ತಿರುವುದು ರಾತ್ರಿ ತಾನಾಗಿಯೇ ಮನೆಗೆ ಸಾಗುವುದು. ರಸ್ತೆಯಲ್ಲೇ ದನಗಳ ಘರ್ಷಣೆಯಾದರೆ ಸಾರ್ವಜನಿಕರಿಗೆ ತೊಂದರೆ ಆಗತೊಡಗಿದೆ. ಕೂಡಲೇ ಸಂಬಂಧಿತ ಪುರಸಭೆಯ ಅಧಿಕಾರಿಗಳು ಈ ಕುರಿತು ಬೀದಿ ನಾಯಿಗಳ ಮತ್ತು ಬಿಡಾಡಿ ದನÀಗಳ ಓಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಇಲ್ಲಿನ ಸಾರ್ವಜನಿಕರು ಸಂಬಂಧಿತ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಕಠಿಣ ಕ್ರಮ ಕೈಗೊಳ್ಳಿ: ಪುರಸಭೆ ಸಾಮಾನ್ಯ ಸಭೆಯಲ್ಲಿ ಬೀಡಾಡಿ ದನಗಳ ಮತ್ತು ಬೀದಿ ನಾಯಿಗಳ ತೆರವಿಗೆ ಅನೇಕ ಸಲ ಸಭೆಯಲ್ಲಿ ಸರ್ವ ಸದಸ್ಯರು ಪ್ರಸ್ತಾಪಿಸಿದರು ಪುರಸಭೆ ಸಂಬಂಧಿತ ಶಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ಮಾಡದೆ ಇದ್ದಾರೆ. ಈಗಾಲಾದರೂ ಅಧಿಕಾರಿಗಳು ಸಂಬಂಧಿತರ ಮೇಲೆ ಕಠಿಣ ಕ್ರಮಕೈಗೊಂಡು ಬೀದಿ ನಾಯಿಗಳ ತೆರವಿಗೆ ಕ್ರಮ ಕೈಗೊಂಡು ಜನರ ನಿರ್ಭಿತಿಯ ಓಡಾಟಕ್ಕೆ ಅನುಕೂಲಮಾಡಿಕೊಡಬೇಕು.

ಸೋಮಶೇಖರ ಹತ್ತರಕ, ಆಸೀಫಚೌಸ್, ಶ್ರೀಶೈಲ ಪಾಟೀಲ, ಲಕ್ಷ್ಮಣ ಝಳಕಿಕರ ಇನ್ನಿತರ ಪುರಸಭೆ ಸದಸ್ಯರು.
ಪುರಸಭೆಯಿಂದ ನಿರಂತರವಾಗಿ ಅಲೌನ್ಸ್‍ಮುಂಟ್ ಮಾಡಿ ಸಾಕು ದಿನಗಳನ್ನು ರಸ್ತೆಯ ಮೇಲೆ ಬಿಡದಂತೆ ತಿಳಿಸಲಾಗಿದೆ. ಆದರೂ ಸಾಕುದನಗಳು ದಿನವೀಡಿ ರಸ್ತೆಯ ಮೇಲೆ ಬೇಕಾಬಿಟ್ಟಿ ಬೀದಿಗೆ ಬಿಡುತ್ತಿದ್ದಾರೆ. ಇವುಗಳಿಗೆ ತೆಗೆದುಕೊಂಡು ಹೋಗಿ ಬೇರೆಡೆ ಸ್ಥಳಾಂತರಿಸಲು ನಮಗೇ ಅವಕಾಶವಿಲ್ಲ. ನಾಯಿಗಳನ್ನು ಹಿಡಿದು ಪಶು ವೈದ್ಯರು ಸಂತಾನಹರಣ ಚಿಕಿತ್ಸೆ ಮಾಡಬೇಕು. ಈ ಕುರಿತು ಮೇಲಾಧಿಕಾರಿಗಳು ಗಮನಕ್ಕೆ ತಂದು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು.

ರವಿಕಾಂತ ಮಿಸ್ಕಿನ್ ಪರಿಸರ ಅಭಿಯಂತರರು ಪುರಸಭೆ ಆಳಂದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here