ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಿ

0
13

ಆಳಂದ: ಪರಿಸರ ಸಂರಕ್ಷಣೆ ಕೇವಲ ಸರ್ಕಾರಿ ಸಂಘ ಸಂಸ್ಥೆ ಇಲಾಖೆಗಳು ಮಾಡಿದರೆ ಸಾಲದು, ಒದಕ್ಕೆ ನಾಗರಿಕರ ಜವಾಬ್ದಾರಿಯೂ ಅಡಗಿದೆ. ಪ್ರತಿಯೊಬ್ಬರು ಗಿಡ, ಮರ ನೆಡುವ ಮೂಲಕ ತಮ್ಮ ಸುತ್ತಲಿನ ಪರಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ ಎಂದು ಪುರಸಭೆ ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್ ಅವರು ಹೇಳಿದರು.

ಪಟ್ಟಣದ ಸಂಗಾಕಾಲೋನಿಯ ಪುರಸಭೆ ಉದ್ಯಾನವನದಲ್ಲಿ ಪುರಸಭೆ ಮುಖ್ಯಾಧಿಕಾರಿ ಯಶೋದಾ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ನೀರುಣಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಪರಿಸರ ಮಲೀನದಿಂದಾಗಿ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಮುಂಜಾಗೃತ ಕ್ರಮವಾಗಿ ಹಸಿರು ಸಂರಕ್ಷಣೆ ಅಗತ್ಯವಾಗಿದೆ. ಇಂದು ಪರಿಸರನಾಶವಾಗಿ ತಾಪಮಾನ ಹೆಚ್ಚುತ್ತಿದ್ದು, ಇದಕ್ಕೆ ಜೀವ ಸಂಕುಲದ ಉಳಿವಿಗಾಗಿ ನೆಲ, ಜಲ, ಹಸಿರು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.
ಪುರಸಭೆ ವ್ಯವಸ್ಥಾಪಕ ಶಂಭುಲಿಂಗ ಕಣ್ಣೆ, ಅಕೌಂಟೆಂಟ್ ಪಲ್ಲವಿ ದೇಶಪಾಂಡೆ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಶಿವರಾಯ, ಆರೋಗ್ಯ ನಿರೀಕ್ಷಕ ಲಕ್ಷ್ಮಣ ತಳವಾರ, ಪೌರಕಾರ್ಮಿಕ ಬೀರಪ್ಪಾ ಪೂಜಾರಿ, ದತ್ತಾ ಪಾತ್ರೆ, ಸುಮಿತ್ರಾಬಾಯಿ, ಮಂಗಳಾಬಾಯಿ ಮತ್ತಿತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here