ಸುರಪುರ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಚಾಲನೆ

0
8

ಸುರಪುರ: ರಾಜ್ಯ ಸರಕಾರ ಜಾರಿಗೊಳಿಸಿರುವ ಮಹಿಳೆಯರಿಗೆ ಉಚಿತ ಸರಕಾರಿ ಬಸ್‍ಗಳಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆಗೆ ನಗರದ ಬಸ್ ನಿಲ್ದಾಣದ ಆವರಣದಲ್ಲಿ ಚಾಲನೆ ನೀಡಿಲಾಯಿತು.

ಶಕ್ತಿ ಯೋಜನೆ ಉದ್ಘಾಟಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ,ನಾವು ಚುನಾವಣೆ ಪೂರ್ವದಲ್ಲಿ ಜನರಿಗೆ ಮಾತು ಕೊಟ್ಟಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದ್ದೇವೆ,ಇಂದು ಮೊದಲನೇ ಯೋಜನೆಯಾದ ರಾಜ್ಯದಲ್ಲಿನ ಎಲ್ಲ ಮಹಿಳೆಯರಿಗೆ ಸರಕಾರಿ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.ರಾಜ್ಯದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಅಭಿವೃಧ್ಧಿ ಹೊಂದಲಿ ಎಂಬ ಮಹಾದಾಸೆಯಿಂದ ಮುಖ್ಯಮಂತ್ರಿಗಳು ಇಂದು ಚಾಲನೆ ನೀಡಿದ್ದಾರೆ ಎಂದರು.ಅಲ್ಲದೆ ಈ ಗ್ಯಾರಂಟಿ ಯೋಜನೆ ಇಂದು ಮಹಿಳೆಯರಿಗೆ ದೊರೆತಿದೆ,ಮುಂದೆ ಮತ್ತೊಮ್ಮೆ ನಮ್ಮ ಸರಕಾರ ಬಂದು ಪುರುಷರಿಗೂ ಉಚಿತ ಮಾಡುವತ್ತ ಚಿಂತನೆ ನಡೆಸಲಿದ್ದೇವೆ ಎಂದರು.ಅಲ್ಲದೆ ಇಂದು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿ ಯೋಜನೆಗಳ ಯಶಸ್ಸು ನೋಡಿ ಮುಂದೆ ರಾಷ್ಟ್ರ ಮಟ್ಟದಲ್ಲಿ ಈ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಟರು ಚಿಂತನೆ ನಡೆಸಲಿದ್ದಾರೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ವಿಶೇಷವಾಗಿ ಬಂದಿದ್ದ ಎರಡು ನೂತನ ಬಸ್‍ಗಳಿಗೆ ಚಾಲನೆ ನೀಡುವ ಜೊತೆಗೆ ಮಹಿಳಾ ಪ್ರಯಾಣಿಕರಿಗೆ ಶಾಸಕರು ಉಚಿತ ಪ್ರಯಾಣದ ಟಿಕೆಟ್ ನೀಡುವ ಮೂಲಕ ಹಸಿರು ನಿಶಾನೆ ತೋರಿ ಪ್ರಯಾಣಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸುರಪುರ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ,ಗ್ರೇಡ-2 ತಹಸೀಲ್ದಾರ್ ಮಲ್ಲಯ್ಯ ದಂಡು,ಘಟಕ ವ್ಯವಸ್ಥಾಪಕ ಭವಾನಿಸಿಂಗ್ ರಾಠೋಡ,ಮುಖಂಡರಾದ ರಾಜಾ ವಾಸುದೇವ ನಾಯಕ,ರಾಜಾ ವೇಣುಗೋಪಾಲ ನಾಯಕ,ಪಿ.ಐ ಆನಂದ ವಾಘಮೊಡೆ,ಅಬ್ದುಲ ಗಫೂರ ನಗನೂರಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ,ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುವರ್ಣ ಸಿದ್ರಾಮ ಎಲಿಗಾರ,ಗುಂಡಪ್ಪ ಸೋಲಾಪುರ,ರವಿಚಂದ್ರ ಸಾಹುಕಾರ ಆಲ್ದಾಳ,ರಾಜಾ ಸಂತೋಷಕುಮಾರ ನಾಯಕ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ರಮೇಶ ದೊರೆ ಆಲ್ದಾಳ,ವೆಂಕಟೇಶ ಬೇಟೆಗಾರ,ವೆಂಕಟೇಶ ಹೊಸ್ಮನಿ,ರಾಜಾ ಸುಶಾಂತ ನಾಯಕ,ರಾಜಾ ಅಪ್ಪಾರಾವ್ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here