ಶಹಾಬಾದ: ಕರ್ನಾಟಕ ರಾಜ್ಯ ಸರಕಾರ ಮೊಟ್ಟ ಮೊದಲ ಬಾರಿಗೆ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಯೋಜನೆಯನ್ನು ತಂದಿದ್ದು, ಇದರ ಸಂಪೂರ್ಣ ಲಾಭವನ್ನು ಮಹಿಳೆಯರು ಪಡೆದುಕೊಳ್ಳಬೇಕೆಂದು ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಹೇಳಿದರು.
ಅವರು ರವಿವಾರ ನಗರದ ಬಸ್ ನಿಲ್ದಾಣದಲ್ಲಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ರಾಜ್ಯ ಸರ್ಕಾರ ಘೋಷಿಸಿದ ಶಕ್ತಿ ಹೆಸರಿನ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಇಂದಿನಿಂದಲೇ ಮಹಿಳೆಯರು ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ರಾಜ್ಯದ ಸರ್ಕಾರಿ ಬಸ್‍ಗಳಲ್ಲಿ ರಾಜ್ಯದ ಉದ್ದಗಲಕ್ಕೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಅಲ್ಲಿಯವರೆಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ವಿತರಿಸಲಾಗಿರುವ ಭಾವಚಿತ್ರವಿರುವ ಯಾವುದೇ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ‘ಶಕ್ತಿ ಸ್ಮಾರ್ಟ್ ಕಾರ್ಡ್’ ಗಳನ್ನು ಪಡೆಯಬೇಕು. ಸೇವಾ ಸಿಂಧು ಪೆÇೀರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ‘ಶಕ್ತಿ ಸ್ಮಾರ್ಟ್ ಕಾರ್ಡ್’ಗಳನ್ನು ಪಡೆಯಬಹುದು. ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇರಿ 4 ಸಾರಿಗೆ ಸಂಸ್ಥೆಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿದ್ದು, ಐμÁರಾಮಿ ಬಸ್‍ಗಳಾಳಾದ ರಾಜಹಂಸ, ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್‍ನಲ್ಲಿ ಉಚಿತ ಬಸ್ ಪಯಾಣಕ್ಕೆ ಅವಕಾಶ ಇಲ್ಲ. ರಾಜ್ಯದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶವಿದೆ.ಅಲ್ಲದೇ ರಾಜ್ಯದ ಮಹಿಳೆಯರಿಗೆ ಮಾತ್ರ ಎಂಬುದನ್ನು ಮನಗಾಣಬೇಕು.ಇದರಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಪಿಎಸ್‍ಐ ಅಶೋಕ ಪಾಟೀಲ, ಶಿಕ್ಷಕಿ ಸುನೀತಾ.ಆರ್, ನಗರ ಸಾರಿಗೆ ಘಟಕದ ನಂ.4 ರ ವ್ಯವಸ್ಥಾಪಕ ನಜಮೂಲ್.ಎನ್.ಆರಫೀನ್, ಡಾ.ರಶೀದ್ ಮರ್ಚಂಟ, ಸಾಹೇಬಗೌಡ ಬೋಗುಂಡಿ, ಡಾ.ಅಹ್ಮದ್ ಪಟೇಲ್, ದೇವೆಂದ್ರ ಕಾರೊಳ್ಳಿ, ಕಿರಣ ಚವ್ಹಾಣ,ಹಾಷಮ ಖಾನ, ಅಸೀಮಸಾಬ, ಮಹ್ಮದ್ ರಫಿಕ್ ಕಾರೋಭಾರಿ, ಶರಣು ಪಗಲಾಪೂರ, ರಾಜೇಶ ಯನಗುಂಟಿಕರ್, ಶಿವರಾಜ ಕೋರೆ,ಶ್ರವಣಕುಮಾರ,ಸುರೇಶ ನಾಯಕ, ವಸಂತ ಕಾಂಬಳೆ, ಅಣ್ಣಾರಾವ, ಬಾಬು ರಾಠೋಡ,ಇಸ್ಮಾಯಿಲ್ ಪಟೇಲ್, ದೇವರಾಜ.ಎಸ್. ಸೇರಿದಂತೆ ಅನೇಕರು ಇದ್ದರು.