ಕಲಬುರಗಿ: ನಗರದ ಕನ್ನಡ ಭವನದಲ್ಲಿ ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳಕರ್ ಇವರ ಅಧ್ಯಕ್ಷತೆಯಲ್ಲಿ ಭಾರತೀಯ ಬೌದ್ಧ ಮಹಾಸಭಾದ ಸಭೆ ನಡೆಸಿ ಈ ಸಭೆಯಲ್ಲಿ ನೂತನ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳ ಅಯ್ಕೆ ಮಾಡಲಾಯಿತು.
(ಷಣ್ಮುಖ ಬಿ. ವಾಘಮೋರೆ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ), (ಲಕ್ಷ್ಮಣ ಸೋನಕಾಂಬಳೆ ಜಿಲ್ಲಾಧ್ಯಕ್ಷ), (ಶಿವಪುತ್ರ ಬಿ. ಸಿಂಗ್, ಆಮ್ರಪಾಲಿ ವಿ.ಜಿ., ಆನಂದ ಸಿನ್ನೂರ, ಸಿದ್ಧಾರ್ಥ ಕೆ. ಬಂಧು ಜಿಲ್ಲಾ ಉಪಾಧ್ಯಕ್ಷರು), (ಡಾ: ಅನೀಲ ಟೆಂಗಳಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ), (ಶಿವಶರಣ ಸಂಗಮ ಜಿಲ್ಲಾ ಖಜಾಂಚಿ), (ಸಂದೀಪ ಕಟ್ಟಿ ವಾಡಿ, ಶಿವಶಾಂತ ಮುನ್ನೊಳ್ಳಿ, ಶಂಭುಲಿಂಗ ಕಮಲಾಪೂರ, ಮಲ್ಲಿಕಾರ್ಜುನ ಸಿಂಗೆ, ಅಂಬಾರಾಯ ಹಡಗಿಲ, ಮಾರೂತಿ ಹುಳಗೋಳಕ, ಮಿಲಿಂದ ಸಾಗರ್, ಪ್ರಕಾಶ ಭಾಲೆ, ಮಂಜುನಾಥ ಕೊಳ್ಳಿ, ಗೌತಮ್ ಜಾನೆ, ರಮೇಶ ಶ್ರೀಗನ್, ಎಂ.ಎನ್ ಸುಗಂಧಿ ಜಿಲ್ಲಾ ಕಾರ್ಯದರ್ಶಿಗಳು) ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಉಸ್ತುವಾರಿಗಳಾದ ಎಸ್.ಎಂ. ಪಟ್ಟಣಕರ, ರಾಮಜೀ ಲಿಂಬಾರೆ, ಮುಖಂಡರರಾದ ರಮೇಶ ಪಟ್ಟೇದಾರ, ವಿ. ಆರ್. ಚಾಂಬಾಳ, ಆರೋಗ್ಯ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ: ಸಂಧ್ಯಾ ಕಾಣೇಕರ್, ಧಮ್ಮ ಉಪಾಸಕಿ ಆಮ್ರಪಾಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಕಾಣೇಕರ್ ಇದ್ದರು.