ಗಾಯತ್ರಿ ಪ್ರೌಢಶಾಲೆ ಮಕ್ಕಳಿಗೆ ಉಚಿತ ಕಲಿಕಾ ಸಾಮಗ್ರಿ ವಿತರಣೆ

0
8

ಸುರಪುರ: ನಗರದ ಗಾಯತ್ರಿ ಪ್ರೌಢಶಾಲೆಯಲ್ಲಿ ಗೋವಿಂದರಾಮ ಝಂವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಉಚಿತವಾಗಿ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಸಲಾಯಿತು.

ಕಲಿಕಾ ಸಾಮಗ್ರಿ ವಿತರಿಸಿದ ಟ್ರಸ್ಟ್ ಅಧ್ಯಕ್ಷ ನಂದಕಿಶೋರ ಝಂವರ್ ಮಾತನಾಡಿ, ಸರ್ಕಾರ ಶಿಕ್ಷಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಸಾಧನೆ ಸಾಧ್ಯವಾಗುತ್ತಿಲ್ಲ. ಸಂಪೂರ್ಣ ಸಾಕ್ಷರತೆ ನಮ್ಮ ದೇಶದ ಬಹುದೊಡ್ಡ ಆಸ್ತಿಯಾಗುತ್ತದೆ.ನಮ್ಮ ತಂದೆ ಗೋವಿಂದರಾಮ ಶಿಕ್ಷಣ ಪ್ರೇಮಿಯಾಗಿದ್ದರು. ಶಿಕ್ಷಣಕ್ಕಾಗಿ ನೀಡುವ ದೇಣಿಗೆ ಶ್ರೇಷ್ಠವಾದದ್ದು ಎಂದು ಹೇಳುತ್ತಿದ್ದರು. ಅವರ ಸಿದ್ಧಾಂತದಂತೆ ಅವರ ನೆನಪಿನಲ್ಲಿ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಶಿಕ್ಷಣಕ್ಕೆ ಕೈಲಾದ ನೆರವು ನೀಡುತ್ತಿದ್ದೇವೆ ಎಂದರು.

Contact Your\'s Advertisement; 9902492681

ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಾಲೆಗೆ ಕಳಿಸಬೇಕು. ಎಲ್ಲರೂ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಬಡವರ ನೆರವಿಗೆ ಉಳ್ಳವರು ನೆರವಿನ ಹಸ್ತ ಚಾಚಬೇಕು. ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಿದಾಗ ಸಂಪೂರ್ಣ ಸಾಕ್ಷರತೆ ಸಾಧ್ಯ ಎಂದರು.
ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನಮ್ಮ ಶಿಕ್ಷಣ ಜ್ಞಾನದ ಜೊತೆಗೆ ಸಂಸ್ಕಾರವನ್ನು ನೀಡುತ್ತದೆ. ನೀವು ಚೆನ್ನಾಗಿ ಓದಿ ಸರಸ್ವತಿಯನ್ನು ಒಲಿಸಿಕೊಂಡರೆ ಲಕ್ಷ್ಮೀ ಹಿಂಬಾಲಿಸುತ್ತಾಳೆ. ವಿದ್ಯಾರ್ಥಿ ಜೀವನವನ್ನು ಹಾಳು ಮಾಡದೆ ಕೇವಲ ಓದಿಗೆ ಮೀಸಲಿಡಿ. ನಿಮ್ಮ ಜೊತೆ ದೇಶದ ಭವಿಷ್ಯವನ್ನು ಉಜ್ವಲಗೊಳಿಸಿ ಎಂದು ಕಿವಿ ಮಾತು ಹೇಳಿದರು.

ಮುಖ್ಯ ಶಿಕ್ಷಕ ಅಪ್ಪಣ್ಣ ಕುಲಕರ್ಣಿ ಮಾತನಾಡಿ, ಬಹಳಷ್ಟು ಜನ ಶ್ರೀಮಂತರಿದ್ದಾರೆ. ಆದರೆ ಹೃದಯ ಶ್ರೀಮಂತಿಕೆ ಇದ್ದವರು ವಿರಳ. ಸಮಾಜದ ತುಡಿತ ಹೊಂದಿದವರು ಇನ್ನೂ ಕಡಿಮೆ. ಝಂವರ್ ಕುಟುಂಬ ತಮ್ಮ ಸಂಪಾದನೆಯ ಹಣವನ್ನು ಬಡಮಕ್ಕಳ ಶಿಕ್ಷಣದ ನೆರವಿಗೆ ದೇಣಿಗೆಯಾಗಿ ನೀಡುತ್ತಿರುವುದು ಅನುಕರಣೀಯ ಎಂದರು.

ಝಂವಾರ ಪರಿವಾರದ ಮಹಿಳೆಯರೂ ಸೇರಿದಂತೆ ಗೋವರ್ಧನ್, ಅಶೋಕ, ಹನುಮಾನ, ರಾಮಸ್ವರೂಪ ದರಕ, ಸಂಸ್ಥೆಯ ಅಧ್ಯಕ್ಷ ಗುರುರಾಜ ಚಾಮನಾಳ, ಉಪಾಧ್ಯಕ್ಷ ವೆಂಕೋಬಾಚಾರ್ಯ ಬೀರನೂರ, ಸದಸ್ಯರಾದ ವ್ಯಾಸರಾವ ಏವೂರ, ಶಿಕ್ಷಕರಾದ ಕಲ್ಪನಾ ಕನಕಗಿರಿ, ಶ್ರೀನಾಥ ಸಿಂಧಗಿರಿ, ಅಶೋಕ ಚಿನ್ನಾಕಾರ, ಉಷಾ ಕುಲಕರ್ಣಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here