ಸ್ವಸ್ಥ ಜೀವನಕ್ಕೆಉತ್ತಮ ಪರಿಸರ ಮಹತ್ವದ್ದು

0
23

ಕಲಬುರಗಿ: ಕಾಡಿದ್ದರೆ ನಾಡು, ನಾಡಿದ್ದರೆ ನಾವೆಲ್ಲಆರೋಗ್ಯವಾಗಿಜೀವನವನ್ನು ಸಾಗಿಸಬಹುದು. ಆರೋಗ್ಯಯುತಜೀವನ ನಡೆಸಲು ಉತ್ತಮ ಪರಿಸರ ಪ್ರಮುಖ ಪಾತ್ರ ವಹಿಸಲಿದೆ. ಉತ್ತಮರೀತಿಯಜೀವನ ಹಾಗೂ ಆರೋಗ್ಯಕ್ಕಾಗಿ ಹೆಚ್ಚು ಹೆಚ್ಚು ಸಸಿಗಳನ್ನು ನೆಟ್ಟುಅರಣ್ಯ ಸಂಪತ್ತನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯೋಣ.ಮನುಷ್ಯನಿಗೆ ಉಸಿರು ಎಷ್ಟು ಮುಖ್ಯವೋ, ಜೀವನ ನೆಮ್ಮದಿಗೆ ಸಸ್ಯ ಪ್ರೇಮಕೂಡ ಅಷ್ಟೇ ಮುಖ್ಯಎಂದು ಪ್ರೊಫೆಸರ್‍ದೇವಿಂದ್ರಪ್ಪ ವಿಶ್ವಕರ್ಮ ಹೇಳಿದರು.

ಅವರುಜೇವರ್ಗಿ ನಗರದ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸಿ ಮಾತನಾಡಿ ಉಸಿರಿನಷ್ಟೆ ಸಸ್ಯ ಪ್ರೀತಿ ಪ್ರತಿಯೊಬ್ಬರಲ್ಲೂ ಮೂಡಬೇಕು.ಶುದ್ಧ ಗಾಳಿ, ಪರಿಸರಕ್ಕೆಎಲ್ಲಕ್ಕಿಂತ ಹೆಚ್ಚು ಮಹತ್ವ ನೀಡಬೇಕು. ಸುಂದರ ಸಮಾಜದ ಹಿತಾಸಕ್ತಿಗೆಆದ್ಯತೆಕೊಟ್ಟು ಸಸ್ಯ, ಗಿಡಮರಗಳನ್ನು ಬೆಳೆಸಿ ಪೋಷಿಸಬೇಕು.ಇದರಲ್ಲೇ ಹಿತಾನುಭವ ಅಡಗಿದೆ. ಸಸ್ಯಗಳು ಮನಃ ಶಾಂತಿಯ ವನದೇವತೆಗಳಾಗಿವೆ. ಯಾಂತ್ರಿಕ ಬದುಕಿನ ಲೈಫನಲ್ಲಿ ಬ್ಯೂಸಿ ಆಗಿರುವ ನಮಗೆಲ್ಲ ಅವು ಪರಿಶುದ್ಧಆಕ್ಸಿಜನ್ ನೀಡಿಎನರ್ಜಿಕೊಡುತ್ತವೆ. ಆರೋಗ್ಯ, ಏಕಾಗ್ರತೆಗೆ ಅನುವು ಮಾಡಿಕೊಡುವ ಸಸ್ಯ ಸ್ಪರ್ಶಜೀವನಕ್ಕೆಉಲ್ಲಾಸತಣಿಸುತ್ತದೆಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳಾದ ಇಸ್ಮಾಯಿಲ್, ರಿಯಾಜ್, ಸುರೇಶ, ಮಾಂತೇಶ, ಮಂಜುನಾಥ, ಶಿವರಾಜ, ಸಿದ್ದಣ್ಣ, ಸಿದ್ರಾಮಪ್ಪ, ರಮೇಶಸೇರಿ ಮುಂತಾದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here