ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ 73 ನೇ ಸ್ವಾತಂತ್ರೋತ್ಸವದಂದು 60 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಯ ಹಮ್ಮಿಕೊಳ್ಲಲಾಯಿತು.
ಶನಿವಾರ ಡಾ. ವಿಶ್ವನಾಥ ರೆಡ್ಡಿ ಹಾಗೂ ಅವರ ತಂಡದ ವತಿಯಿಂದ ಹತ್ತು ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಯಿತು.
ಬಿಜೆಪಿ ಯುವ ಮುಖಂಡ ಚಂದು ಪಾಟೀಲ್ ಅವರು ಶಸ್ತ್ರಚಿಕಿತ್ಸೆಗೊಳಗಾದವರ ಆರೋಗ್ಯವನ್ನು ವಿಚಾರಿಸಿ ಕನ್ನಡಕವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಉಮೇಶ್ ಪಾಟೀಲ್, ಡಾ.ಎಂ.ಆರ್ ಪೂಜಾರಿ, ಡಾ.ರಾಜೇಶ ರೆಡ್ಡಿ, ಡಾ.ಕಾಂತ ಸಲಗರ್, ಡಾ.ಸುಮಿತ್ ದೆಶಪಾಂಡೆ, ಡಾ.ವಿರೇಶ ಕೆ, ಚನ್ನು ಲಿಂಗನವಾಡಿ, ಅಶೋಕ ಮನಕರ್, ವರದಾ ಶಂಕರ್ ಶೆಟ್ಟಿ, ವಿನಾಯಕ್ ಚಪ್ಪಾಟ್ಟೆ ಹಾಗೂ ಗಜೇಂದ್ರ ನಾಯಂದಕರ್ ಸೇರಿದಂತೆ ಇನ್ನಿತರರು ಇದ್ದರು.