ಕಲಬುರಗಿ: ಇಲ್ಲಿನ ಜಿಲ್ಲಾ ಕಟ್ಟಡ ಕಾರ್ಮಿಕ ಇಲಾಖೆಯಲ್ಲಿ ಫಲಾನುಭವಿಗಳಿಂದ ಪ್ರತಿಯೊಂದಕ್ಕೂ ಲಂಚ ಪಡೆದು ಅಧಿಕಾರಿಗಳು ಮತ್ತು ಸಿಬ್ಬಂದ ವರ್ಗ ಕಾರ್ಯಾನಿರ್ವಹಿಸುತ್ತಿದೆ ಎಂದು ಆರೋಪಿಸಿ 2012 ರಿಂದ ಇದುವರೆಗೆ ಇಲಾಖೆಯಲ್ಲಿ ನಡೆದಿರುವ ಯೋಜನೆಗಳ ಮೇಲೆ ಸಮಗ್ರ ಲೋಕಾಯುಕ್ತ ತನಿಖೆಗೆ ಒಳಪಡಿಸಿಬೇಕೆಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘ ಗುರುವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಜಿಲ್ಲಾ ಕಾರ್ಮಿಕ ಇಲಾಖೆಯ ಬಹುತೇಕ ಅಧಿಕಾರಿಗಳೆಲ್ಲರೂ ಮತ್ತು ಸಿಬ್ಬಂದಿಗಳು 2012 ರಿಂದ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಕಾರ್ಮಿಕ ಫಲಾನುಭವಿಗಳಿಗೆ ಕಾರ್ಮಿಕ ಕಾರ್ಡ್ ಅನುಮೋದನೆ ನೀಡಲು, ಮದುವೆ ಸಹಾಧನ ಹೆರಿಗೆ ಸಹಾಯಧನ, ಮರಣ ಸಹಾಯಧನ ಮತ್ತು ಶೈಕ್ಷಣಿಕ ಸಹಾಯಧನ ಅರ್ಜಿಗಳ ಮಂಜೂರಾತಿಗಾಗಿ ಫಲಾನುಭವಿಗಳಿಂದ ಹಣ ಪಡೆಯಲಾಗುತ್ತದೆ. ಕೋವಿಡ್-19 ಸಂಧರ್ಬದಲ್ಲಿ ಕಟ್ಟಡ ಕಾರ್ಮಿಕರ ಫಲಾನುಭವಿಗಳಿಗೆ ಪರಿಹಾರ ಮೊತ್ತವನ್ನು 5 ಸಾವಿರ ಮತ್ತು 3 ಸಾವಿರ ಹಣವನ್ನು ಕೊಡುತ್ತಿರುವ ಸಮಯದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲು ಲಕ್ಷಾಂತರ ಹಣವನ್ನು ಬ್ರೋಕರ್‍ಗಳ ಮೂಲಕ ಹಣ ಪಡೆಯಲಾಗಿದೆ ಎಂದು ಗುರುವಾರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಸಂಘದ ಸದಸ್ಯರು ಆರೋಪಿಸಿದ್ದಾರೆ.
2013 ರಿಂದ ಇಲ್ಲಿಯ ತನಕ ಆಫ್‍ಲೈನ್ ಮತ್ತು ಆನ್‍ಲೈನ್ ಅರ್ಜಿಗಳ ದಾಖಲೆಗಳನ್ನು ಲೋಕಾಯುಕ್ತರ ತನಿಕೆಗೆ ಒಳಪಡಿಸಬೆಕಾಗಿ ಈ ಹಿಂದೆ ಕಾರ್ಮಿಕರ ಕಛೇರಿ ಎದುರು ಹೋರಾಟ ನಡೆಸಲಾಗಿತ್ತು. ಇಲ್ಲಿಯವರೆಗೆ ಯಾವ ವಿಷಯ ಕುರಿತು ಸಹ ಸೂಕ್ತ ಮಾಹಿತಿ ನೀಡಿರುವುದಿಲ್ಲ. ಅಲ್ಲದೆ ಕಾರ್ಮಿಕರ ಕಿಟ್ಟುಗಳು ಯಾವ ದಾಖಲಾತಿಗಳೂ ಇಲ್ಲದೇ ಬೇಕಾಬಿಟ್ಟಿಯಾಗಿ ಹಂಚಿರುತ್ತಾರೆ
ಕಾರಣ ಮಾನ್ಯರು ಸದರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ 2013 ರಿಂದ ಇಲ್ಲಿಯ ತನಕ ಆಫ್‍ಲೈನ್ ಮತ್ತು ಆನ್‍ಲೈನ್ ಅರ್ಜಿಗಳ ದಾಖಲೆಗಳನ್ನು ಮತ್ತು ಇಲ್ಲಿಯವರೆಗೂ ಎಷ್ಟು ಕಿಟ್ಟುಗಳು ಹಂಚಲಾಗಿದೆ ಮತ್ತು ಯಾವ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ ಎಂಬುದು ಲೋಕಾಯುಕ್ತರ ತನಿಕೆಗೆ ಒಳಪಡಿಬೇಕು ಮತ್ತು ಬ್ರಷ್ಟ ಅಧಿಕಾರಿಗಳನ್ನು ಕೂಡಲೆ ಪದಚ್ಯುತಿಗೊಳಿಸಬೇಕು ಇಲ್ಲಾವದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಭೀಮರಾಯ ಎಂ ಕಂದಳ್ಳಿ, ಮರೆಪ್ಪ ಎಚ್ ರೋಟನಡಗಿ, ಶಿವಕುಮಾರ ಬೆಳಗೇರಿ, ಮಹಾಂತೇಶ ದೊಡ್ಡಮನಿ, ಮತ್ತಣ್ಣ ರಾಜಾಪುರ, ಶರಣಪ್ಪ ಬಳಿಚಕ್ಕರ, ಚಂದ್ರಕಾಂತ ತುಪ್ಪದಕರ್, ದೇವಿಂದ್ರ ಉಳ್ಳಾಗಡ್ಡಿ, ಬಾಬುರಾವ ದೇವರಮನಿ ಸೇರಿದಂತೆ ಹಲವರು ಇದ್ದರು.