ಕಲಬುರಗಿ: ಐಸಿಎಆರ್-ಕೃಷಿ ವಿಜ್ಞಾನಕೇಂದ್ರ ಮತ್ತು ಮೈಹೇಂದ್ರ ಕೃಷಿ ಸೇವಾ ಸಂಸ್ಥೆ ಮುಂಬೈ ಇವರ ಸಂಯುಕ್ತ ಆಶ್ರಯದಲ್ಲಿ ಕೃಷಿ ಡಿಜಿಟಲ್ ತಂತ್ರಜ್ಞಾನ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನುಅಖೀಲ ಭಾರತ ಮಹೇಂದ್ರ& ಮಹೇಂದ್ರ ಕೃಷಿ ಸಂಸ್ಥೆಯ ಮುಖ್ಯಸ್ಥರಾದ ಜಿತೀಶಾ ಸೆಲಾರ್ಕರವರು ಉದ್ಘಾಟಿಸಿದರು.
ನಂತರ ಮಾತನಾಡಿ ರೈತರು ಇಂದಿನ ಮಾಹಿತಿ ತಂತ್ರಜ್ಞಾನಗಳ ಯುಗದಲ್ಲಿ ಲಭ್ಯವಿರುವ ನೂತನ ತಂತ್ರಜ್ಞಾನಗಳನ್ನು ಯಶಸ್ವಿಯಾಗಿ ಅಳವಡಿಸಿಕೊಂಡು ಕೃಷಿಯಲ್ಲಿ ಉತ್ತಮ ಸಾಧನೆಗೈಯಬೇಕೆಂದು ಕರೆ ನೀಡಿದರು.ಸಂಸ್ಥೆಯಲ್ಲಿ Àದೊರೆಯುವ ಕೃಷಿ ಯಂತ್ರೋಪಕರಣಗಳನ್ನು ಬಳಸಿದ್ದಲ್ಲಿ ಕೃಷಿಯಲ್ಲಿ ಕೂಲಿ ಆಳುಗಳ ವೆಚ್ಚವನ್ನು ಕಡಿಮೆ ಮಾಡಬಹುದು ಜೊತೆಗೆ ಮೊಬೈಲ್ ಕೃಷಿ ಆ್ಯಪ್ ಬಳಸಿ ರೈತರು ಕೃಷಿ ಸಮಸ್ಯೆಗಳಿಗೆ ಪರಿಹಾರವನ್ನು ತಜ್ಞರಿಂದ ಪಡೆಯಬಹುದಾಗಿದೆ ಎಂದರು.
ದಕ್ಷಿಣ ವಲಯದ ಮುಖ್ಯಸ್ಥರಾದ ಶ್ರೀ ರಮೇಶ ರಾಥೋಡ್‍ರವರು ಮಾತನಾಡಿ ಹವಾಮಾನ ವೈಪ್ಯರೀತ್ಯ ಬೆಳೆಗಳ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬಿರುವುದರಿಂದ ನೂತನ ತಂತ್ರಜ್ಞಾನಗಳು ತಜ್ಞರ ಮಾಹಿತಿ ಪಡೆದು ಅಳವಡಿಸಿಕೊಳ್ಳಲು ತಿಳಿಸಿದರು.
ಕೆವಿಕೆಯ ಮುಖ್ಯಸ್ಥರಾದ ಡಾ.ರಾಜು ಜಿ. ತೆಗ್ಗಳ್ಳಿ, ರವರು ಮಾತನಾಡಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನವರುಅಭಿವೃದ್ದಿ ಪಡಿಸಿದ ತಂತ್ರಜ್ಞಾನಗಳ ಬಗ್ಗೆ ರೈತರಿ ಮಾಹಿತಿ ನೀಡಿದರು.
ಬೇಸಾಯ ತಜ್ಞರಾದ ಡಾ.ಯುಸುಫ್‍ಅಲಿ ನಿಂಬರಗಿ, ಸಸ್ಯರೋಗ ತಜ್ಞರಾದ ಡಾ. ಜಹೀರ ಅಹಮದ್, ಕ್ಷೇತ್ರ ವ್ಯವಸ್ಥಾಪಕರಾದ ಎಂ.ಸಿ. ಪಾಟೀಲ್, ಸತ್ಯ ಪ್ರಮೋದ ಪಂಥ, ರೈತರಿಗಿ ಮಾಹಿತಿ ನೀಡಿದರು. ಗೊಬ್ಬರ(ಬಿ) ಅಫಜಲಪೂರ, ಕಾಳಜಿ, ಚಿಂಚೋಳಿ ಮತ್ತು ಬೂಸನೂರ ಆಳಂದ ಭಾಗದ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.