ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಅನುದಾನಿತ ಪ್ರೌಢಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೊಲೀಸ್ ಪೇದೆ ದಯಾನಂದ ಜಮಾದಾರ್ ಮಾತನಾಡಿ, ಮಕ್ಕಳ ಹಕ್ಕುಗಳು, ಬಾಲ ಕಾರ್ಮಿಕ ನಿಷೇಧ ಕಾಯ್ದೆ ಸೇರಿದಂತೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಸಾಮಾನ್ಯ ಕಾನೂನುಗಳು ಹಾಗೂ ಪೋಲಿಸ್ ವ್ಯವಸ್ಥೆ ಮತ್ತು ಸೌಲಭ್ಯಗಳ ಕುರಿತು ಮಕ್ಕಳು ಅರಿವು ಹೊಂದಿರಬೇಕು ಎಂದರು.
ಇಂದು ಪೋಲಿಸ್ ಇಲಾಖೆಯು ಮಕ್ಕಳಲ್ಲಿ ಹಾಗೂ ಮಹಿಳೆಯರಲ್ಲಿ ಪೋಲಿಸರ್ ಬಗ್ಗೆ ಇರುವ ಭಯವನ್ನು ತೊಡೆದುಹಾಕಿ ಮಕ್ಕಳ ಸ್ನೇಹಿ ಹಾಗೂ ಜನಸ್ನೇಹಿ ಪೋಲಿಸ್ ಕಲ್ಪನೆಯನ್ನು ಬಿತ್ತಲು ಸಾಕಷ್ಟು ಕಾರ್ಯಕ್ರಮಗಳನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ.ಸಿ.ವಿ.ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಮಕ್ಕಳಲ್ಲಿ ವಿಶೇಷವಾಗಿ ಬಾಲಕಿಯರಲ್ಲಿ ಸ್ವರಕ್ಷಣೆ ವಿಧಾನಗಳು ಹಾಗೂ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗಾಗಿ ಪೋಲಿಸರ ಜವಾಬ್ದಾರಿಗಳ ಕುರಿತು ಮಕ್ಕಳೊಂದಿಗೆ ಸಂವಾರ ನಡೆಸಿದ ಅವರು ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡಿ ಯಾವುದೇ ದೌರ್ಜನ್ಯ ಸಹಿಸಿಕೊಳ್ಳದಂತೆ ಸ್ವಯಂ ಆತ್ಮಸ್ಥೈರ್ಯ ಹೆಚ್ಚಿಸುವುದು ಪ್ರಮುಖ ಉದ್ದೇಶ ಎಂದು ಹೇಳಿದರ.
ಈ ಸಂದರ್ಭದಲ್ಲಿ ಗೃಹ ಸುರಕ್ಷಾ ಪೋಲಿಸ್ ವಾಟ್ಸಾಪ್ ಸೇವೆ, ತುರ್ತು ಪರಿಸ್ಥಿತಿಯಲ್ಲಿ 112 ಸೌಲಭ್ಯ, ಸಂಚಾರಿ ನಿಯಮಗಳ ಕುರಿತು 112 ತುರ್ತು ವಾಹನ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು, 14ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಮತ್ತು 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳದಂತೆ ನೋಡಿಕೊಳ್ಳುವ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ತಡೆಗಟ್ಟುತ್ತೇನೆ 18ವರ್ಷದೊಳಗಿನ ಮಕ್ಕಳು ಶಾಲೆಯಿಂದ ಹೊರಗಡೆ ಇರುವ ಯಾವುದೇ ಮಗು ಕಂಡು ಬಂದರೆ ಅವರ ಪೋಷಕರಿಗೆ ತಿಳಿಹೇಳಿ ಆ ಮಗುವನ್ನು ಶಾಲೆಗೆ ಸೇರಿಸಿ ಜಿಲ್ಲೆಯನ್ನು ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪ್ರಯತ್ನಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಮುಖ್ಯೋಪಾಧ್ಯಾಯ ಮಹೇಶ ಕುಂಟೋಜಿ,ಶಿಕ್ಷಕರಾದ ಈರಪ್ಪ ಸಿಂಪಿ, ಸುದರ್ಶನ ಸೂಗುರು, ಯಲ್ಲಪ್ಪ ಪಾಟೀಲ, ಮಲ್ಲಿಕಾರ್ಜುನ ಗರಡಿ, ನಜೀರನಾಯಕ, ಯು.ಕೆ.ಕೋಡಿಹಾಳ, ಕನಕಪ್ಪ ದೊರಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.