ಆಳಂದ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಕೋರ್ಸಗಳ ವ್ಯಾಸಂಗಕ್ಕೆ ಪ್ರವೇಶಕ್ಕಾಗಿ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಾಂಶುಪಾಲ ವಿಚಂದ್ರ ಕಂಟೆಕುರೆ ಹೇಳಿದರು.
ಆಳಂದ ಪಟ್ಟಣದ ಕಾಲೇಜಿನಲ್ಲಿ ಶನಿವಾರ ಉದಯವಾಹಿನಿ ಜೊತೆಗೆ ಮಾತನಾಡಿದ ಅವರು,ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕದ ವಿನಾಯಿತಿಯಿದ್ದು, ಸರ್ಕಾರದ ಶಿಷ್ಯವೇತನ ನಿಯಮಾನುಸಾರ ದೊರೆಯಲಿದೆ. ಕಾಲೇಜಿನಲ್ಲಿ ಬಿಎ, ಬಿಕಾಂ, ಪ್ರವೇಶ ನೀಡಲಾಗುತ್ತಿದ್ದು, ಬಿಎಸ್ಸಿ ಪದವಿ ಕೋರ್ಸ ಕೂಡ ಇದೆ.ಪ್ರವೇಶ ಪಡೆಯುವವರು ನೇರವಾಗಿ ಕಾಲೇಜಿಗೆ ಭೇಟಿ ನೀಡಬಹುದು.ಹೆಚ್ಚಿನ ಮಾಹಿತಿ ಪ್ರಾಂಶುಪಾಲ ದೂರವಾಣಿ ಸಂಖ್ಯೆ 9902213176 ಗೆ ಸಂಪರ್ಕಿಸಬಹುದು.