ಆಸ್ಪತ್ರೆಯಲ್ಲಿಯೂ ಸೋಂಕು ಹರಡಬಹುದು: ಪ್ರೊ. ಅಲಿ ರಜಾ ಮೂಸ್ವಿ

0
83

ಕಲಬುರಗಿ: ನೈರ್ಮಲ್ಯೀಕರಣ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕವಾಗಿದೆ. ಆಸ್ಪತ್ರೆಯವರು ಶುಚಿತ್ವಕ್ಕೆ ಮಹತ್ವ ಕೊಡದಿದ್ದರೆ ಅಲ್ಲಿಂದಲೂ ಸೋಂಕು ಹರಡಬಹುದು ಎಂದು ಕೆಬಿಎನ್ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊˌ ಅಲಿ ರಜಾ ಮೂಸ್ವಿ ನುಡಿದರು.

ಕೆಬಿಎನ್ ವಿವಿಯ ವೈದ್ಯಕೀಯ ನಿಕಾಯದ ಮೈಕ್ರೋಬಯಾಲಜಿ ವಿಭಾಗದಲ್ಲಿ ಶನಿವಾರ ಏರ್ಪಡಿಸಿದ್ದ “ಆಸ್ಪತ್ರೆ ಸೋಂಕು ನಿಯಂತ್ರಣ” ಕುರಿತ ರಾಷ್ಟ್ರೀಯ ಮುಂದುವರಿದ ವೈದ್ಯಕೀಯ ಶಿಕ್ಷಣ (ಸಿಎಂಇ ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ರೋಗಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ಹೋಗುತ್ತಾರೆ. ಆಸ್ಪತ್ರೆಯ ಸೊಂಕಿಗೆ ತುತ್ತಾಗಿ ಅನಾರೋಗ್ಯವಾಗುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಆಸ್ಪತ್ರೆಯಲ್ಲಿ ಸೋಂಕು ಹರಡದ ಹಾಗೆ ತಡೆಯುವುದು ಅತೀ ಅವಶ್ಯ ಎಂದರು. ಒಂದು ದಿನದ ಈ ಸಿಎಂಇ ಕಾರ್ಯಕ್ರಮದಲ್ಲಿ ಆಗಮಿಸಿದ ಎಲ್ಲ ವೈದ್ಯ ಹಾಗೂ ನರ್ಸ್ ಗಳಿಗೆ ಅಭಿನಂದಿಸಿ, ಹೆಚ್ಚಿನ ವಿಷಯಗಳನ್ನು ತಿಳಿದುಕೊಂದು ಆಸ್ಪತ್ರೆಗಳನ್ನು ಇನ್ನೂ ಆರೋಗ್ಯಮಯ ವಾತಾವರಣ ಸೃಷ್ಟಿಸಿ ಎಂದರು.

ಪ್ರೊ. ಎಮಿರೇಟಿಸ್, ಕೆಬಿಎನ್ ಬೋಧನೆ ಮತ್ತು ಜನರಲ್ ಆಸ್ಪತ್ರೆ, ಡಾ ಪಿ ಎಸ್ ಶಂಕರ ಈ ಸಂದರ್ಭದಲ್ಲಿ ಮಾತನಾಡಿದರು.

ವಿವಿಯ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ನಿಕಾಯದ ಎಲ್ಲ ವೈದ್ಯರು ಮತ್ತು ದೇಶದ ವಿವಿಧ ಭಾಗಗಳಿಂದ ಸುಮಾರು 300 ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು.

ಸಮೀರ್ ಪ್ರಾರ್ಥಿಸಿದರೆ, ಮೆಡಿಕಲ್ ಡೀನ್ ಹಾಗೂ ಸಿಎಂಈ ಸಂಘಟನೆ ಅಧ್ಯಕ್ಷ ಡಾ ಸಿದ್ದೇಶ್ ಸ್ವಾಗತಿಸಿದರು. ಐಕ್ಯೂಎಸಿ ನಿರ್ದೇಶಕ ಹಾಗೂ ಸಿಎಂ ಈ ಸಂಘಟನಾ ಕಾಯದರ್ಶಿ ಡಾ. ಬಷೀರ ವಂದಿಸಿದರು. ಡಾ ಇರ್ಫಾನ ಅಲಿ ನಿರೂಪಿಸಿದರು.

ಇದೇ ವೇಳೆ ಡಾ. ಮೊಹಮ್ಮದ್ ಖಲೀಲ್ ಆಸ್ಪತ್ರೆ ಏಕಾಏಕಿ ನಿರ್ವಹಣೆˌ ಡಾ. ಅರ್ಕಿ ಬಿಲ್ಲೋರಿಯ -ಆಸ್ಪತ್ರೆ ಸೋಂಕು ನಿಯಂತ್ರಣ ಕಮಿಟಿ, ಡಾ. ನೀಲಿಮಾ ಸುದರ್ಶನ -ಕಾಟಿಯ ಕಣ್ಗಾವಲು ಮತ್ತು ತಡೆಗಟ್ಟುವಿಕೆˌ ಡಾ. ರಾಜೇಶ್ವರಿ- ಆಂಟಿ ಮೈಕ್ರೊಬಿಯಲ್ ನೀತಿ ಮತ್ತು ಆಂಟಿ ಮೈಕ್ರೊಬಿಯಲ್ ಉಸ್ತುವಾರಿ ಡಾ. ವೀರೇಂದ್ರ ಕಶೆಟ್ಟಿ -ವ್ಯಾಪ್ನಿಯ ಕಣ್ಗಾವಲು ಮತ್ತು ತಡೆಗಟ್ಟುವಿಕೆˌ ಡಾ. ನವಾಜ ಉಮರ್ -ಎಂಡಿಆರ್ ರೋಗಕಾರಕಗಳಲ್ಲಿ ಸೋಂಕು ತಡೆಗಟ್ಟುವಿಕೆˌ ಡಾ.ಬಥಾಲಾ ನಾಗಾ ಶ್ರೀಲತಾ-CLABSI ಯ ಕಣ್ಗಾವಲು ಮತ್ತು ತಡೆಗಟ್ಟುವಿಕೆˌ ಡಾ. ಅಬ್ದುಲ ಕಲೀಮ್ – SSI ಯ ಕಣ್ಗಾವಲು ಮತ್ತು ತಡೆಗಟ್ಟುವಿಕೆˌˌ ಡಾ.ನಾಗಾರ್ಕರ್ ರಾಜನ್ಸ್ -ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ವಿಷಯಗಳ ಕುರಿತು ಉಪನ್ಯಾಸ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here